ರಾಮಸೇತುವಿಗೆ ಯಾವುದೇ ಹಾನಿಯುಂಟು ಮಾಡುವುದಿಲ್ಲ : ಕೇಂದ್ರ

Will not Touch Ram Sethu bridge Centre tells SC
Highlights

ರಾಷ್ಟ್ರದ ಹಿತಾಸಕ್ತಿಯ ನಿಟ್ಟಿನಲ್ಲಿ ನಾವು ರಾಮಸೇತುವನ್ನು ಮುಟ್ಟುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್’ಗೆ ಹೇಳಿದೆ.

ನವದೆಹಲಿ : ರಾಷ್ಟ್ರದ ಹಿತಾಸಕ್ತಿಯ ನಿಟ್ಟಿನಲ್ಲಿ ನಾವು ರಾಮಸೇತುವನ್ನು ಮುಟ್ಟುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್’ಗೆ ಹೇಳಿದೆ.

ಅದರ ಬದಲಾಗಿ ಬೇರೆ ಮಾರ್ಗವನ್ನು ಹುಡುಕಿಕೊಳ್ಳಲಾಗುವುದು ಎಂದು ತಿಳಿಸಿದೆ.  ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದು, ಇದಕ್ಕೆ ಉತ್ತರ ನೀಡಿದ ಕೇಂದ್ರ ಸರ್ಕಾರ ಸೇತು ಸಮುದ್ರಮ್ ಯೋಜನೆಯಿಂದ ಯಾವುದೇ ರೀತಿಯಾದ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದೆ.

ಭಾರತ ಸರ್ಕಾರ  ಹಿಂದೆಯೂ ಕೂಡ ಸೇತು ಸಮುದ್ರಮ್ ಶಿಪ್ ಪ್ರಾಜೆಕ್ಟ್’ನಿಂದ ಯಾವುದೇ ರೀತಿಯಾದ ಸಮಸ್ಯೆ ಉಂಟಾಗದಂತೆ ಬದಲಿ ಮಾರ್ಗವನ್ನು ಕಂಡುಕೊಳ್ಳುವುದಾಗಿ ಹೇಳಿತ್ತು. ಇದು ದೇಶದ ಹಿತದೃಷ್ಟಿಯಿಂದ ಕೈಗೊಳ್ಳುವ ಕ್ರಮವಾಗಿದೆ ಎಂದು ಸುಪ್ರೀಂಕೋರ್ಟ್’ಗೆ ತಿಳಿಸಿದೆ.

loader