ರಾಮಾಯಣಕ್ಕಿಂತ ಹಳೆಯದೇ ರಾಮಸೇತು..?

First Published 1, Feb 2018, 9:34 AM IST
Does Ram Setu prove that Ramayan did happen a Long time Ago
Highlights

ಭಾರತ ಹಾಗೂ ಶ್ರೀಲಂಕಾ ನಡುವೆ ಸಮುದ್ರದಲ್ಲಿರುವ ರಾಮಸೇತು (ಆ್ಯಡಂ ಬ್ರಿಜ್) 18400 ವರ್ಷಗಳಷ್ಟು ಹಳೆಯದು ಎಂದು ಅಧ್ಯಯನವೊಂದು ಹೇಳಿದೆ. ಯುಜಿಸಿ ನೆರವಿನಿಂದ ಅಣ್ಣಾ ವಿಶ್ವವಿದ್ಯಾಲಯ ಹಾಗೂ ಮದ್ರಾಸ್ ವಿವಿಯ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಈ ಅಂಶ ಪತ್ತೆಯಾಗಿದ್ದು, ಇದು ರಾಮಾಯಣ ರಚನೆಯಾದ ಕಾಲಘಟ್ಟಕ್ಕಿಂತ 6000 ವರ್ಷ ಮೊದಲು ಎಂಬ ಅಂಶ ಅಚ್ಚರಿಗೆ ಕಾರಣವಾಗಿದೆ.

ಚೆನ್ನೈ: ಭಾರತ ಹಾಗೂ ಶ್ರೀಲಂಕಾ ನಡುವೆ ಸಮುದ್ರದಲ್ಲಿರುವ ರಾಮಸೇತು (ಆ್ಯಡಂ ಬ್ರಿಜ್) 18400 ವರ್ಷಗಳಷ್ಟು ಹಳೆಯದು ಎಂದು ಅಧ್ಯಯನವೊಂದು ಹೇಳಿದೆ. ಯುಜಿಸಿ ನೆರವಿನಿಂದ ಅಣ್ಣಾ ವಿಶ್ವವಿದ್ಯಾಲಯ ಹಾಗೂ ಮದ್ರಾಸ್ ವಿವಿಯ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಈ ಅಂಶ ಪತ್ತೆಯಾಗಿದ್ದು, ಇದು ರಾಮಾಯಣ ರಚನೆಯಾದ ಕಾಲಘಟ್ಟಕ್ಕಿಂತ 6000 ವರ್ಷ ಮೊದಲು ಎಂಬ ಅಂಶ ಅಚ್ಚರಿಗೆ ಕಾರಣವಾಗಿದೆ.

ರಾಮಾಯಣ ರಚನೆಯಾಗಿದ್ದು ಯಾವಾಗ ಎಂಬ ಬಗ್ಗೆ ಸಂಶೋಧಕರಲ್ಲಿ ಭಿನ್ನಮತವಿದೆ. ಒಂದು ಅಂದಾಜಿನ ಪ್ರಕಾರ ಇದು 10 ಸಾವಿರ ಅಥವಾ 12 ಸಾವಿರ ವರ್ಷಗಳ ಹಿಂದೆ ರಚನೆಯಾಗಿದೆ. ಇನ್ನೊಂದು ಅಧ್ಯಯನದ ಪ್ರಕಾರ 1800 ಅಥವಾ 2500 ವರ್ಷಗಳ ಹಿಂದೆ ರಚನೆಯಾಗಿದೆ. ಆದರೆ, ರಾಮಸೇತುವೆಯು 18400 ವರ್ಷಗಳ ಹಿಂದೆ ರಚನೆಯಾಗಿದೆ ಎಂದು ತಮಿಳುನಾಡಿನ ಎರಡು ವಿವಿಗಳು ನಡೆಸಿದ ಸಂಶೋಧನೆಯಲ್ಲಿ ಹೇಳಿರುವುದು ಇದು ಶ್ರೀರಾಮನು ಕಪಿಗಳ ನೆರವಿನಿಂದ ಸೀತೆಯನ್ನು ಮರಳಿ ತರಲು ಕಟ್ಟಿಸಿದ ಸೇತುವೆ ಎಂಬ ವಾದಸರಣಿಯನ್ನೇ ಬದಲಿಸುವಂತಿದೆ.

ಸುನಾಮಿಗೂ ಕದಲದ ಸೇತುವೆ: ಮನ್ನಾರ್ ಕೊಲ್ಲಿಯಲ್ಲಿ ತಮಿಳುನಾಡಿನ ರಾಮೇಶ್ವರದ ಪಂಬನ್ ನಡುಗಡ್ಡೆ ಹಾಗೂ ಶ್ರೀಲಂಕಾದ ಮನ್ನಾರ್ ದ್ವೀಪದ ನಡುವೆ 35 ಕಿ.ಮೀ. ಉದ್ದದ ಈ ರಾಮಸೇತು ಇದೆ. ಇದು ಸುಮಾರು 10 ಮೀಟರ್ ಎತ್ತರ ಹಾಗೂ 100 ಮೀಟರ್ ಅಗಲವಿದ್ದು, ಮರಳು ಹಾಗೂ ಬಂಡೆಗಳಿಂದ ನಿರ್ಮಾಣವಾಗಿದೆ. ನೀರಿನಲ್ಲಿ ಮುಳುಗಿರುವ ಈ ಸೇತುವೆಗಾಗಲೀ, ರಾಮೇಶ್ವರದ ಕಡಲ ತೀರಕ್ಕಾಗಲೀ 2004ರಲ್ಲಿ ಸಂಭವಿಸಿದ್ದ ಭೀಕರ ಸುನಾಮಿಯಿಂದ ಯಾವುದೇ ರೀತಿಯ ಹಾನಿಯಾಗಿರಲಿಲ್ಲ. ಇದು ವಿಜ್ಞಾನಿಗಳನ್ನು ಅಚ್ಚರಿಗೀಡುಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಮಸೇತುವಿನ ರಚನೆ ಹಾಗೂ ಇತಿಹಾಸದ ಬಗ್ಗೆ ಸಮುದ್ರಶಾಸ್ತ್ರಜ್ಞರು ಸಂಶೋಧನೆ ಕೈಗೊಂಡಿದ್ದರು.

ಅದರಲ್ಲಿ ಈ ಸೇತುವೆ 18400 ವರ್ಷಗಳಷ್ಟು ಹಳೆಯದು ಎಂಬ ಅಂಶ ಬೆಳಕಿಗೆ ಬಂದಿದೆ. ಸಂಶೋಧನೆಯ ಫಲಿತಾಂಶವನ್ನು ಮತ್ತಷ್ಟು ನಿಖರಗೊಳಿಸಿಕೊಳ್ಳಲು ರಾಮಸೇತು ಪ್ರದೇಶದ ಮಾದರಿಯನ್ನು ಅಮೆರಿಕದ ಒಂದು ಸಂಶೋಧನಾ ಸಂಸ್ಥೆಗೂ ಕಳಿಸಲಾಗಿತ್ತು. ಅದೂ ಕೂಡ ಈ ಸೇತುವೆಯ ಪುರಾತನ ಇತಿಹಾಸದ ಮೇಲೆ ಬೆಳಕು ಚೆಲ್ಲಿದೆ. ಅಷ್ಟೇ ಅಲ್ಲ, ಸುಮಾರು 700 ವರ್ಷಗಳ ಹಿಂದೆ ಈ ಭಾಗದಲ್ಲಿ ದೊಡ್ಡ ಪ್ರಮಾಣದ ಸುನಾಮಿಯಂತಹ ನೈಸರ್ಗಿಕ ವಿಕೋಪ ಸಂಭವಿಸಿ ಇಲ್ಲಿನ ಸಮುದ್ರದ ರಚನೆಯೇ ಸಾಕಷ್ಟು ಬದಲಾಗಿದೆ ಎಂದು ಕೂಡ ಹೇಳಿದೆ.

loader