ಮಹಾರಾಷ್ಟ್ರದಲ್ಲಿ 180ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಮೊಹಮ್ಮದ್ ಆಯಾಜ್‌ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ಅವರು ಸಂತ್ರಸ್ತರನ್ನೇ ದೂಷಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಮುಕನ ಬದಲು ಸಂತ್ರಸ್ತ ಮಕ್ಕಳಿಗೇ ಬುದ್ಧಿಮಾತು ಹೇಳಿದ ಕಾಂಗ್ರೆಸ್ ನಾಯಕಿ

ಮಹಾರಾಷ್ಟ್ರದಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ಇಂದು ಬೆಳಕಿಗೆ ಬಂದಿತ್ತು. 180ಕ್ಕೂ ಹೆಚ್ಚು ಅಪ್ರಾಪ್ತ ಮಕ್ಕಳ ಮೇಲೆ ಕಾಮುಕನೋರ್ವ ಅತ್ಯಾ*ಚಾರವೆಸಗಿ ಲೈಂಗಿಕ ದೌರ್ಜನ್ಯವೆಸಗಿದ್ದಲ್ಲದೇ ತನ್ನ ಕೃತ್ಯವನ್ನು ರೆಕಾರ್ಡ್ ಮಾಡಿಕೊಂಡು ಆ ಬಾಲಕಿಯರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ. ಈ ಪ್ರಕರಣದ ಬಗ್ಗೆ ಬಿಜೆಪಿ ಸಂಸದ ಅನಿಲ್ ಬೊಂಡೆ ಅವರು ಪೊಲೀಸರಿಗೆ ದೂರು ನೀಡಿದ ನಂತರ ಆರೋಪಿ ಮೊಹಮ್ಮದ್ ಆಯಾಜ್‌ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯವೂ ಆತನನ್ನು 7 ದಿನಗಳ ಕಸ್ಟಡಿಗೆ ನೀಡಿದೆ.

ಸಂತ್ರಸ್ತರಿಗೆ ಮೈಮೇಲೆ ಪ್ರಜ್ಞೆ ಇರಲಿಲ್ವಾ ಎಂದು ಕೇಳಿದ ಕಾಂಗ್ರೆಸ್ ನಾಯಕಿ ಯಶೋಮತಿ

ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಹಿಳಾ ನಾಯಕರೊಬ್ಬರು ನೀಡಿದ ಹೇಳಿಕೆ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಪ್ರಾಪ್ತತೆ ಎಂಬುದು ಪ್ರಬುದ್ಧತೆ ಇಲ್ಲದ ವಯಸ್ಸು, ಏನು ಮಾಡಬೇಕು ಮಾಡಬಾರದು ಎಂದು ತಿಳಿಯದ ವಯಸ್ಸು, ಇಂತಹ ಮಕ್ಕಳ ಮೇಲೆಯೇ ಇಲ್ಲಿ ಕಾಮುಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕಿ, ಈ ಪ್ರಕರಣದ ಸಂತ್ರಸ್ತರಿಗೆ ಏನು ಕಾಮನ್‌ಸೆನ್ಸ್ ಎಂಬುದು ಇರಲಿಲ್ಲವೇ ಮೈಮೇಲೆ ಪ್ರಜ್ಞೆ ಇರಲಿಲ್ಲವೇ ಬುದ್ಧಿ ಇರಲಿಲ್ಲವೇ ಎಂದು ಪ್ರಶ್ನೆ ಮಾಡಿ ವಿವಾದಕ್ಕೀಡಾಗಿದ್ದಾರೆ. ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ಈ ರೀತಿ ಲೈಂಗಿಕ ದೌರ್ಜನ್ಯದ ಸಂತ್ರಸ್ತರನ್ನೇ ಟೀಕೆ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು ಕೂಡ ಯಶೋಮತಿ ಠಾಕೂರ್ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರವನ್ನೇ ಬೆಚ್ಚಿಬೀಳಿಸಿದ 180 ಮಕ್ಕಳ ಮೇಲಿನ ದೌರ್ಜನ್ಯ

180ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅವರ 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳನ್ನು ಚಿತ್ರಿಕರಿಸಿಕೊಂಡು ಅವರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಕಾಮುಕ ಮೊಹಮ್ಮದ್ ಅಲಿಯಾಸ್ ತನ್ವೀರ್ ಎಂಬಾತನ್ನು ಇಂದು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಈತ ಅಪ್ರಾಪ್ತರನ್ನೇ ಟಾರ್ಗೆಟ್ ಮಾಡುತ್ತಿದ್ದ. ಅವರನ್ನು ಲೈಂಗಿಕವಾಗಿ ಬಳಸಿಕೊಂಡು ಕೃತ್ಯದ ವೀಡಿಯೋ ಚಿತ್ರಿಕರಿಸಿಕೊಂಡು ಅವರನ್ನು ಬ್ಲಾಕ್‌ಮೇಲ್ ಮಾಡುತ್ತಾ ವೇಶ್ಯಾವಾಟಿಕೆಗೆ ದೂಡುವ ಪ್ರಯತ್ನ ಮಾಡಿದ್ದ. ಈತ ದೌರ್ಜನ್ಯವೆಸಗಿದ ಕೆಲ ವೀಡಿಯೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡಲು ಶುರುವಾದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಬ್ಲ್ಯಾಕ್‌ಮೇಲ್‌, ವೇಶ್ಯಾವಾಟಿಕೆ ಮತ್ತು 350 ಅಶ್ಲೀಲ ವೀಡಿಯೋ: ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿದ ನರರಾಕ್ಷಸನ ಕೃತ್ಯ

ಮಹಾರಾಷ್ಟ್ರದ ರಾಜ್ಯಸಭಾ ಬಿಜೆಪಿ ಸಂಸದ ಅನಿಲ್ ಬೊಂಡೆ ಅವರು ಈತನನ್ನು ಕೂಡಲೇ ಬಂಧಿಸುವಂತೆ ಅಮರಾವತಿಯ ಗ್ರಾಮೀಣ ಎಸ್‌ಪಿ ವಿಶಾಲ್ ಬೊಂಡೆ ಅವರಿಗೆ ಲಿಖಿತ ದೂರು ದಾಖಲಿಸಿದ್ದರು. ಈ ದೂರಿನ ನಂತರವೇ ಆರೋಪಿಯ ಬಂಧನವಾಗಿದ್ದು, ಈತನ ಕೃತ್ಯಗಳು ಭಯಾನಕವಾಗಿದ್ದು ಸಂಚಲನ ಸೃಷ್ಟಿಸಿದೆ. ಈತ ವಾಟ್ಸಾಪ್ ಹಾಗೂ ಸ್ನ್ಯಾಪ್‌ಚಾಟ್ ಮೂಲಕ ಅಪ್ರಾಪ್ತರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡುತ್ತಿದ್ದ.

ಈ ಆರೋಪಿ ಮೊಹಮ್ಮದ್ ಅಯಾಜ್ ಈ ಹಿಂದೆ AIMIM ಸಂಘಟನೆಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಆತ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊಗಳು ಮತ್ತು ಫೋಟೋಗಳಲ್ಲಿ ಕಂಡು ಬರುವಂತೆ ಆತ ಅವರು AIMIMನ ಅಮರಾವತಿ ವಿಭಾಗದ ಅಧ್ಯಕ್ಷ ಹಾಜಿ ಇರ್ಫಾನ್ ಖಾನ್ ಅವರಿಂದ ಪತ್ರವನ್ನು ಸ್ವೀಕರಿಸುತ್ತಿರುವುದು ಹಾಗೂ ಪಕ್ಷದ ಸಮಾವೇಶಗಳಲ್ಲಿ ಭಾಗವಹಿಸುತ್ತಿದ್ದಂತ ಫೋಟೋ ವೀಡಿಯೋಗಳಿವೆ. ಆದರೆ, ಪ್ರಕರಣ ಬೆಳಕಿಗೆ ಬಂದ ನಂತರ ಅಂತಹ ಹಲವಾರು ವೀಡಿಯೊಗಳನ್ನು ಆತನ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಳಿಸಿ ಹಾಕಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವಿದ್ಯಾರಣ್ಯಪುರದ ಇಬ್ಬರು ವಿದ್ಯಾರ್ಥಿನಿಯರ ನಿಗೂಢ ನಾಪತ್ತೆ: 75 ದಿನ ಕಳೆದರೂ ಸಿಗದ ಸುಳಿವು, ಕಂಗಾಲಾದ ಪೋಷಕರು!