Asianet Suvarna News Asianet Suvarna News

ಪಿಎಂ ರ‍್ಯಾಲಿ ಬಗ್ಗೆ ಏನಂತೀರಿ? ಆಗ ಕೊರೋನಾ ಹಬ್ಬಿಲ್ಲವೇ? ಮೋದಿಗೆ ಪ್ರಿಯಾಂಕಾ ತಿರುಗೇಟು!

* ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

* ಕಾಂಗ್ರೆಸ್ ಕೊರೋನಾ ಹಬ್ಬಿಸಿದೆ ಎಂದಿದ್ದ ಮೋದಿ

* ಮೋದಿ ಸಮಾವೇಶಗಳಿಂದ ಕೊರೋನಾ ಹಬ್ಬಿಲ್ಲವೇ ಎಂದು ಪ್ರಿಯಾಂಕಾ ತಿರುಗೇಟು

Did PM want nobody to help the poor asks Priyanka after Modi blames Cong for Covid spread pod
Author
Bangalore, First Published Feb 8, 2022, 12:39 PM IST

ಪಣಜಿ(ಫೆ.08): ಮಹಾರಾಷ್ಟ್ರದಲ್ಲಿ ಕೊರೋನಾ ಏರುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ಇಲ್ಲಿನ ವಲಸಿಗರಿಗೆ ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ತೆರಳಲು ಉಚಿತ ಟಿಕೆಟ್ ವಿತರಿಸಿತು. ಇದರಿಂದ ಕೊರೋನಾ ಮತ್ತಷ್ಟು ಹರಡಿತು ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಪ್ರಿಯಾಂಕಾ ಗಾಂಧಿ ಖಡಕ್ ತಿರುಗೇಟು ನೀಡಿದ್ದಾರೆ. ಕಾಲ್ನಡಿಗೆಯಲ್ಲಿ ಹಿಂದಿರುಗುತ್ತಿದ್ದ ಬಡವರು ಅಸಹಾಯಕರಾಗಬೇಕು ಎಂದು ಮೋದಿ ಬಯಸಿದ್ದರೇ? ಎಂದು ಪ್ರಶ್ನಿಸಿದ್ದಾರೆ. ಪಣಜಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕಾ, ತಾವು ಸಹಾಯ ಮಾಡಿದ ಜನರ ಬಳಿ ತಮ್ಮ ಮನೆ ಸೇರಲು ಹಣ ಇರಲಿಲ್ಲ, ಹೀಗಾಗಿ ಅವರು ಕಾಲ್ನಡಿಗೆಯಲ್ಲೇ ತಮ್ಮ ಮನೆಗೆ ತೆರಳುತ್ತಿದ್ದರು. ಹೀಗಾಗಿ ನಾವು ಸಹಾಯ ಮಾಡಿದೆವು. ಹಾಗಾದರೆ ಪ್ರಧಾನಿ ಮೋದಿ ಆ ಬಡ ಜನರೆಲ್ಲಾ ಕಾಲ್ನಡಿಗೆಯಲ್ಲೇ ದೂರದೂರಿನಲ್ಲಿದ್ದ ಅವರ ಮನೆ ಸೇರಬೇಕೆಂದು ಬಯಸಿದ್ದರೇ? ಅವರೇನು ಅಂದುಕೊಂಡಿದ್ದರು? ಎಂದು ಪ್ರಶ್ನಿಸಿದ್ದಾರೆ.

PM Modi Speech ಟುಕ್ಡೇ ಗ್ಯಾಂಗ್‌ಗೆ ಕಾಂಗ್ರೆಸ್‌ ಲೀಡರ್‌, ಮೋದಿ ವಾಗ್ದಾಳಿಗೆ ಬಳಲಿ ಬೆಂಡಾದ ವಿಪಕ್ಷ!

ಇದೇ ವೇಳೆ "ಅವರು ಆಯೋಜಿಸಿದ್ದ ಬೃಹತ್ ರ‍್ಯಾಲಿಗಳ ಬಗ್ಗೆ ಏನು ಹೇಳುತ್ತಾರೆ?" ಪ್ರಧಾನಿ ಮೋದಿ ಕೋವಿಡ್ ಸಮಯದಲ್ಲಿ ಮಾತ್ರ ರ್ಯಾಲಿಗಳನ್ನು ನಡೆಸಿದ್ದರಲ್ಲವೇ? ಎಂದೂ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಕುರಿತು ಸೋಮವಾರ ಸದನದಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ ಎಂಬುವುದು ಉಲ್ಲೇಖನೀಯ. ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಹಿರಿಯ ನಾಯಕರೂ ಜನರ ಬಳಿ ನೀವೆಲ್ಲಿದ್ದೀರೋ ಅಲ್ಲೇ ಇರಿ. ಈ ಮೂಲಕ ಕೊರೋನಾ ಸೋಂಕು ಹರಡದಂತೆ ತಡೆಯಬಹುದು ಎಂದು ಮನವಿ ಮಾಡುತ್ತಿದ್ದಾಗ, ಕಾಂಗ್ರೆಸ್‌ನ ಯಾವೊಬ್ಬ ನಾಯಕರೂ ಹಾಗೆ ಹೇಳಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ನಾಯಕರು ಮುಂಬೈಯಿಂದ ಹೊರಹೋಗಲು ವಲಸೆ ಕಾರ್ಮಿಕರಿಗೆ ಉಚಿತ ಟಿಕೆಟ್‌ಗಳನ್ನು ವಿತರಿಸಿದ್ದರು, ಇದರಿಂದಾಗಿ ಯುಪಿ, ಬಿಹಾರ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ಕರೋನಾ ವೇಗವಾಗಿ ಹರಡಿತು ಎಂದು ಆರೋಪಿಸಿದ್ದರು.

ಇಷ್ಟು ಸೋಲುಗಳು ಕಂಡರೂ ನಿಮ್ಮ(ಕಾಂಗ್ರೆಸ್) ಅಹಂಕಾರ ಇನ್ನೂ ಇಳಿದಿಲ್ಲ. ಅವರಿಗದನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಅವರು (ಕಾಂಗ್ರೆಸ್) ಮಾತನಾಡುವ ರೀತಿ ನೋಡಿದರೆ 100 ವರ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ತೋರುತ್ತದೆ. ನೀವೇ ಹೀಗೆ ನಡೆದುಕೊಳ್ಳಲು ನಿರ್ಧರಿಸಿದ್ದೀರೆಂದಾದರೆ ನಾನೂ ಇದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇನೆ. ಪ್ರತಿಭಟಿಸುತ್ತಲೇ ಕಾಂಗ್ರೆಸ್ ತುಕ್ಡೆ-ತುಕ್ಡೆ ಗ್ಯಾಂಗ್‌ನ ನಾಯಕನಾಗಿದೆ ಎಂದು ಪ್ರಧಾನಿ ಹೇಳಿದರು. ಕೊರೋನಾ ಕಾಲದಲ್ಲಿ ಕಾಂಗ್ರೆಸ್ ಮಿತಿ ಮೀರಿ, ದೊಡ್ಡ ಪಾಪ ಮಾಡಿದೆ ಎಂದೂ ದೂರಿದ್ದಾರೆ.

PM Modi Speech ರಾಹುಲ್‌ ತಮಿಳುನಾಡು ಹೇಳಿಕೆಗೆ ತಮಿಳಲ್ಲೇ ಮೋದಿ ತಿರುಗೇಟು!

ಕಾಂಗ್ರೆಸ್ ಅನ್ನು ಗುರಿಯಾಗಿಸಿದ ಪ್ರಧಾನಿ, ಕೊರೋನಾ ವೈರಸ್ ಜಾಗತಿಕ ಸಾಂಕ್ರಾಮಿಕವಾಗಿದೆ ಆದರೆ ಕೆಲವರು ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದರು. ಕೊರೋನಾ ಅವಧಿಯಲ್ಲಿ, ಕಾಂಗ್ರೆಸ್ ಮಿತಿಯನ್ನು ಮೀರಿದೆ. ಇಂದು ಭಾರತವು ಶೇಕಡಾ 100 ರಷ್ಟು ಮೊದಲ ಡೋಸ್ ಲಸಿಕೆ ಮತ್ತು ಶೇಕಡಾ 80 ರಷ್ಟು ಎರಡನೇ ಡೋಸ್ ಗುರಿಯ ಸಮೀಪದಲ್ಲಿದೆ. ಅಷ್ಟಕ್ಕೂ ಯೋಗದ ಬಗ್ಗೆ ಯಾರಿಗೆ ಹೆಮ್ಮೆ ಇಲ್ಲ? ನೀವು ಅದನ್ನೂ ಗೇಲಿ ಮಾಡಿದ್ದೀರಿ, ನೀವು ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಕೊಳ್ಳುತ್ತೀರಿ. ಆದರೆ ನಾನು 'ಲೋಕಲ್ ಫಾರ್ ವೋಕಲ್' ಎಂದು ಪ್ರತಿಪಾದಿಸಿದರೆ ನಿಮಗದು ತಪ್ಪೆನಿಸುತ್ತದೆ.  ಭಾರತವು ಸ್ವಾವಲಂಬಿಯಾಗಬೇಕೆಂದು ನೀವು ಬಯಸುವುದಿಲ್ಲವೇ? ಮಹಾತ್ಮ ಗಾಂಧಿಯವರ ಕನಸು ನನಸಾಗುವುದು ನಿಮಗೆ ಇಷ್ಟವಿಲ್ಲವೇ? ಯಾವುದೇ ಪ್ರಜಾಪ್ರಭುತ್ವದಲ್ಲಿ ಟೀಕೆ ಎನ್ನುವುದು ವಿಶೇಷ, ಆದರೆ ‘ಕುರುಡು ವಿರೋಧ’ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದಂತೆ ಎಂದ ಅವರು, ಶತಶತಮಾನಗಳಿಂದ ಭಾರತದ ಜನತೆ ಪ್ರಜಾಪ್ರಭುತ್ವವನ್ನು ಅನುಸರಿಸುತ್ತಿದ್ದಾರೆ, ಪ್ರತಿಪಕ್ಷಗಳು ಪ್ರಜಾಪ್ರಭುತ್ವವನ್ನು ಅವಮಾನಿಸುತ್ತಿವೆ ಎಣದು ಕಿಡಿ ಕಾರಿದ್ದಾರೆ. 

ಇಷ್ಟು ಸೋಲುಗಳ ನಂತರವೂ ನಿಮ್ಮ ಅಹಂ ಉಳಿದಿದೆ ಮತ್ತು ಅದನ್ನು ಹೋಗಲಾಡಿಸಲು ನಿಮಗೆ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಅನ್ನು ಗುರಿಯಾಗಿಸಿ ಪ್ರಧಾನಿ ಹೇಳಿದರು. ನಾಗಾಲ್ಯಾಂಡ್‌ನ ಜನರು 1988ರಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದರು. ಒಡಿಶಾ 1995 ರಲ್ಲಿ, ಗೋವಾ 1994 ರಲ್ಲಿ ನಿಮಗೆ ಮತ ಹಾಕಿದೆ. ನೀವು ಏಕಾಂಗಿಯಾಗಿ ಸಾಕಷ್ಟು ಸಾಧಿಸಿದ್ದೀರಿ ಆದರೆ ಅಂದಿನಿಂದ ಗೋವಾ ನಿಮ್ಮನ್ನು ಸ್ವೀಕರಿಸಲಿಲ್ಲ, ಜನರು ಈಗ ನಿಮ್ಮನ್ನು ಗುರುತಿಸುತ್ತಿದ್ದಾರೆ. ಕೆಲವರನ್ನು ಈಗಾಗಲೇ ಗುರುತಿಸಿದ್ದು, ಇನ್ನು ಕೆಲವರು ಗುರುತಿಸಿಕೊಳ್ಳಲಿದ್ದಾರೆ. 50 ವರ್ಷಗಳಿಂದ ನೀವು ಹೌದು (ಆಡಳಿತ ಪಕ್ಷದಲ್ಲಿ) ಕುಳಿತುಕೊಳ್ಳುವ ಅವಕಾಶವನ್ನು ಪಡೆದುಕೊಂಡಿದ್ದೀರಿ. ಹಾಗಾದರೆ ಈ ದಿಕ್ಕಿನಲ್ಲಿ ಏಕೆ ಯೋಚಿಸಬಾರದು? ವಿಷಯ ಕೇವಲ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ್ದಲ್ಲ. ಇದು ಅವರ ಉದ್ದೇಶ. ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ಅವರನ್ನು ದೇಶದ ಜನತೆ ಏಕೆ ನಿರಂತರವಾಗಿ ತಿರಸ್ಕರಿಸುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಭಾಷಣ ಮಾಡಿದ್ದರು. 

Follow Us:
Download App:
  • android
  • ios