Asianet Suvarna News Asianet Suvarna News

PM Modi Speech ಟುಕ್ಡೇ ಗ್ಯಾಂಗ್‌ಗೆ ಕಾಂಗ್ರೆಸ್‌ ಲೀಡರ್‌, ಮೋದಿ ವಾಗ್ದಾಳಿಗೆ ಬಳಲಿ ಬೆಂಡಾದ ವಿಪಕ್ಷ!

  • ಲೋಕಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ
  • 100 ವರ್ಷ ಅಧಿಕಾರಕ್ಕೆ ಬರಲ್ಲವೆಂದು ನಿಮ್ಮ ವರ್ತನೆಯಿಂದ ಗೊತ್ತಾಗಿದೆ
  • ಹಲವು ಚುನಾವಣೆ ಸೋತರೂ ನಿಮ್ಮ ದುರಂಹಕಾರ ಕಡಿಮೆಯಾಗಿಲ್ಲ
Congress leader of tukde tukde gang inherited divide an rule policy PM Modi attacks opposition ckm
Author
Bengaluru, First Published Feb 8, 2022, 4:04 AM IST

ನವದೆಹಲಿ(ಫೆ.08): ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ಕಾಣಿಸಿಕೊಂಡಾಗಿನಿಂದಲೂ ಕೇಂದ್ರ ಸರ್ಕಾರದ ವಿರುದ್ಧ ನಾನಾ ಟೀಕೆಗಳನ್ನು ಮಾಡುತ್ತಲೇ ಇದ್ದ ಕಾಂಗ್ರೆಸ್‌(Congress) ವಿರುದ್ಧ ಸೋಮವಾರ ಸರಣಿ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi), ಬ್ರಿಟೀಷರು ದೇಶ ಬಿಟ್ಟು ಹೋದರೂ, ಕಾಂಗ್ರೆಸ್‌ ಮಾತ್ರ ವಿಭಜಿಸಿ ಆಳುವುದನ್ನೇ ತನ್ನ ನೀತಿಯನ್ನಾಗಿ ಮಾಡಿಕೊಂಡಿದೆ. ಹೀಗಾಗಿಯೇ ಕಾಂಗ್ರೆಸ್‌ ಪಕ್ಷವೀಗ ಟುಕ್ಡೇ ಟುಕ್ಡೇ ಗ್ಯಾಂಗ್‌ನ ನಾಯಕನಾಗಿ ಹೊರಹೊಮ್ಮಿದೆ ಎಂದು ವ್ಯಂಗ್ಯವಾಡಿದ್ದಾರೆ. ಹಲವು ಚುನಾವಣೆಗಳಲ್ಲಿ ಸತತ ಸೋಲಿನ ಹೊರತಾಗಿಯೂ ಕಾಂಗ್ರೆಸ್‌ನ ದುರಂಹಕಾರ ಕಡಿಮೆಯಾಗಿಲ್ಲ. ಪಕ್ಷದ ದುಷ್ಕೃತ್ಯಗಳನ್ನು ನೋಡುತ್ತಾ ಹೋದರೆ ಮುಂದಿನ 100 ವರ್ಷಗಳ ಕಾಲ ಆಡಳಿತಕ್ಕೆ ನಡೆಸದೇ ಇರುವ ತೀರ್ಮಾನಕ್ಕೆ ಬಂದಂತಿದೆ ಎಂದು ಕಟಕಿಯಾಡಿದ್ದಾರೆ.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಸೋಮವಾರ ಸುದೀರ್ಘವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಆರ್ಥಿಕತೆ, ಆತ್ಮನಿರ್ಭರ ಭಾರತ(aatmanirbhar bharat), ಕೋವಿಡ್‌ ಲಾಕ್ಡೌನ್‌ ವೇಳೆ ವಿಪಕ್ಷಗಳ ಅಸಹಕಾರ, ರೈತರ ಸಮಸ್ಯೆ, ದೇಶವನ್ನಾಳಿದ ಕಾಂಗ್ರೆಸ್‌ನ ಸತತ ವೈಫಲ್ಯದ ಬಗ್ಗೆ ಎಳೆಎಳೆಯಾಗಿ ಮಾತನಾಡಿ, ಕಾಂಗ್ರೆಸ್‌ ನಾಯಕರ ಬಾಯಿ ಮುಚ್ಚಿಸಿದರು.

Inflation ಕಾಂಗ್ರೆಸ್‌ಗೆ ಮುಳುವಾಯ್ತು ನೆಹರು, ಚಿದಂಬರಂ ಹಣದುಬ್ಬರ ನೀತಿ, ಮೋದಿ ಮಾತಿಗೆ ಕಾಂಗ್ರೆಸ್ ಸೈಲೆಂಟ್!

ಒಡೆದು ಆಳುವ ನೀತಿ:
ಬ್ರಿಟೀಷರು(British) ಹೋದರು, ಆದರೆ ಕಾಂಗ್ರೆಸ್‌ ಒಡೆದು ಆಳುವುದನ್ನೇ ತನ್ನ ನೀತಿಯನ್ನಾಗಿ ಬಳಸುತ್ತಿದೆ. ಒಡೆದು ಆಳುವುದು ಅವರ ಡಿಎನ್‌ಎಯಲ್ಲಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್‌ ಇಂದು ಟುಕ್ಡೇ ಟುಕ್ಡೇ ಗ್ಯಾಂಗಿನ (ದೇಶ ವಿಭಜಿಸುವವರು) ನಾಯಕನಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ ಅಧಿಕಾರದ ಆಸೆಯನ್ನೇ ಕಳೆದುಕೊಂಡಂತಿಂದೆ. ನಿಮಗೆ ಏನೂ ಸಿಗದೇ ಇದ್ದಾಗ ಏನಾನ್ನಾದರೂ ಹಾಳುಮಾಡುವ ಸಿದ್ಧಾಂತವನ್ನೇ ಪಕ್ಷದ ತನ್ನದಾಗಿಸಿಕೊಂಡಿದೆ ಎಂದು ಗುಡುಗಿದರು.

ಕೋವಿಡ್‌ ನಿರ್ಲಕ್ಷ್ಯ:
ಕೋವಿಡ್‌ ಮೊದಲ ಅಲೆಯ ವೇಳೆ ಜನರು ಕೋವಿಡ್‌ ಮತ್ತು ಲಾಕ್ಡೌನ್‌ ನಿಯಮ ಪಾಲಿಸುತ್ತಿರುವಾಗ, ಕಾಂಗ್ರೆಸ್‌ ನಾಯಕರು ಮುಂಬೈ ನಿಲ್ದಾಣಗಳಲ್ಲಿ ನಿಂತು ಅಮಾಯಕ ಕಾರ್ಮಿಕರನ್ನು ಬೆದರಿಸಿ ಅವರಿಗೆ ಟಿಕೆಟ್‌ ನೀಡಿ ತಮ್ಮ ತವರು ರಾಜ್ಯಗಳಿಗೆ ಪಲಾಯನ ಮಾಡುವಂತೆ ಮಾಡಿತು. ಅದೇ ಸಮಯದಲ್ಲಿ, ದೆಹಲಿ ಸರ್ಕಾರವೂ ವಲಸೆ ಕಾರ್ಮಿಕರಿಗೆ ನಗರವನ್ನು ತೊರೆಯುವಂತೆ ಹೇಳಿ ಅವರಿಗೆ ಬಸ್ಸುಗಳನ್ನು ಒದಗಿಸಿತು. ಪರಿಣಾಮ ಪಂಜಾಬ್‌, ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಸೋಂಕು ವೇಗವಾಗಿ ಹರಡಿತು. ಕೋವಿಡ್‌ ಹರಡಲು ಕಾರಣವಾಗುವ ಮೂಲಕ ಕಾಂಗ್ರೆಸ್‌ ಮಹಾ ಪಾಪ ಮಾಡಿತು ಎಂದು ದೂರಿದರು. ಕೊರೋನಾ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲಿದೆ ಎಂದು ಕೆಲವರು ಕಾತರದಿಂದ ಕಾಯುತ್ತಿದ್ದರು. ಆದರೆ ಅವರ ಕಾಯುವಿಕೆ ಇನ್ನೂ ಮುಂದುವರೆದಿದೆ. ಕೊರೋನಾ ನಮ್ಮ ಸರ್ಕಾರದ ಮೇಲಿನ ಜನರ ವಿಶ್ವಾಸವನ್ನು ದ್ವಿಗುಣಗೊಳಿಸಿತು ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.

 

ಮೋದಿ ಭಾಷಣದ ಬೆನ್ನಲ್ಲೇ ಮಣಿಶಂಕರ್ ಅಯ್ಯರ್ ಫೋಟೋ ಟ್ವೀಟ್ ಮಾಡಿ ಗೊಂದಲ ಸೃಷ್ಟಿಸಿದ ಕಾಂಗ್ರೆಸ್!

ನಿರಂತರ ಸೋಲು:
ಹಲವು ವರ್ಷಗಳ ಹಿಂದೆಯೇ ನೀವು ಹಲವು ರಾಜ್ಯಗಳಲ್ಲಿ ಸೋತಿದ್ದೀರಿ. ನಾಗಾಲ್ಯಾಂಡ್‌ನಲ್ಲಿ ನೀವು ಗೆದ್ದಿದ್ದು 24 ವರ್ಷಗಳ ಹಿಂದೆ, ಒಡಿಶಾ 27 ವರ್ಷಗಳ ಹಿಂದೆ ನಿಮಗೆ ಅಧಿಕಾರ ನೀಡಿತ್ತು, ಗೋವಾದಲ್ಲಿ ಪೂರ್ಣ ಬಹುಮತ ಪಡೆದು 28 ವರ್ಷಗಳಾಯಿತು, 1988ರಲ್ಲಿ ಕಡೆಯ ಬಾರಿ ತ್ರಿಪುರಾ ಗೆದ್ದಿದ್ದಿರಿ, ಬಂಗಾಳ ನಿಮಗೆ ಕಡೆಯ ಬಾರಿ ಮಣೆ ಹಾಕಿದ್ದು 1972ರಲ್ಲಿ, ತೆಲಂಗಾಣ ರಚನೆ ಕ್ರೆಡಿಟ್‌ ನಿಮಗೇ ಸಂದರೂ ಅನಂತರ ಜನತೆ ನಿಮ್ಮನ್ನು ಸ್ವೀಕರಿಸಲಿಲ್ಲ. ಒಂದಾದ ನಂತರ ಒಂದು ರಾಜ್ಯಗಳು ನಿಮ್ಮನ್ನು ದೂರವಿಡುತ್ತಿವೆ. ದೇಶದ ವಿವಿಧ ಭಾಗದಲ್ಲಿ ನಡೆದ ಚುನಾವಣೆಗಳಲ್ಲಿ ಸಾಲು ಸಾಲು ಸೋಲು ಕಂಡಿದ್ದರೂ, ವಿಪಕ್ಷದ ಅಹಂಕಾರ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂದು ಚಾಟಿ ಬೀಸಿದರು.

100 ವರ್ಷ ಅಧಿಕಾರಕ್ಕಿಲ್ಲ:
ಕಾಂಗ್ರೆಸ್‌ನ ಕೆಲವು ನಾಯಕರ ಹೇಳಿಕೆಗಳು, ಅವರು ಧ್ವನಿ ಎತ್ತುವ ವಿಷಯಗಳನ್ನು ಗಮನಿಸಿದರೆ ಮುಂದಿನ 100 ವರ್ಷಗಳ ಕಾಲ ಅಧಿಕಾರಕ್ಕೆ ಬರಬಾರದೆಂದು ನೀವು ನಿರ್ಣಯಿಸಿದಂತೆ ಕಾಣುತ್ತಿದೆ. ಕೆಲ ವಿಪಕ್ಷ ನಾಯಕರು ಯುವಜನತೆ ಮತ್ತು ಉದ್ಯಮಿಗಳಲ್ಲಿ ಭಯ ಹುಟ್ಟಿಸುವುದರಲ್ಲಿ ಸಂತಸ ಕಾಣುತ್ತಾರೆ. ನಾನು ವೋಕಲ… ಫಾರ್‌ ಲೋಕಲ… (ದೇಶೀಯ ಉತ್ಪಾದನೆ) ಯೋಜನೆ ಬಗ್ಗೆ ಮಾತನಾಡಿದರೆ ನೀವು ಅದನ್ನು ನಿರ್ಲಕ್ಷಿಸುತ್ತೀರಿ. ಭಾರತವು ಆತ್ಮನಿರ್ಭರವಾಗುವುದನ್ನು ನೀವು ಬಯಸುವುದಿಲ್ಲವೇ? ನೀವು ಮಹಾತ್ಮ ಗಾಂಧಿಯವರ ಕನಸುಗಳನ್ನು ನನಸು ಮಾಡಲು ಬಯಸುವುದಿಲ್ಲವೇ’ ಎಂದು ಮೋದಿ ಪ್ರಶ್ನೆ ಮಾಡಿದರು.

Follow Us:
Download App:
  • android
  • ios