Asianet Suvarna News Asianet Suvarna News

ಹಿಂದುಸ್ತಾನ ಹಿಂದುಸ್ತಾನವಾಗಿಯೇ ಇದ್ದರೆ ಭಾರತದಲ್ಲಿ ಮುಸ್ಲಿಮರು ಸುರಕ್ಷಿತ: ಮೋಹನ್ ಭಾಗವತ್‌

ಮುಸ್ಲಿಮರು ತಮ್ಮ ಧರ್ಮ ಶ್ರೇಷ್ಠ ಎಂಬುದನ್ನು ಬಿಡಬೇಕು. ಭಾರತದಲ್ಲಿ ಮುಸ್ಲಿಮರು ಭಯಪಡಬೇಕಿಲ್ಲ, ಇಸ್ಲಾಂಗೆ ಆತಂಕ ಬೇಕಿಲ್ಲ ಎಂದು ಹೇಳಿದ್ದಾರೆ. ಹಿಂದುಸ್ತಾನ, ಹಿಂದುಸ್ತಾನವಾಗಿಯೇ ಇರಬೇಕು ಎಂದೂ ಮೋಹನ್‌ ಭಾಗವತ್‌ ಸಂದರ್ಶನದಲ್ಲಿ ತಿಳಿಸಿದ್ದಾರೆ. 

dharma is essential nature of india mohan bhagwat ash
Author
First Published Jan 12, 2023, 9:17 AM IST

ನವದೆಹಲಿ: ಮುಸ್ಲಿಮರು ಭಾರತದಲ್ಲಿ ಭಯಪಡಬೇಕಾದ ಯಾವುದೇ ಅಗತ್ಯವಿಲ್ಲ. ಆದರೆ ಅವರು ತಮ್ಮ ಧರ್ಮವೇ ಶ್ರೇಷ್ಠ ಎಂಬ ಮನೋಭಾವ ಬಿಡಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪ್ರತಿಪಾದಿಸಿದ್ದಾರೆ. ಆರ್ಗನೈಜರ್‌ ಮತ್ತು ಪಾಂಚಜನ್ಯ ಪತ್ರಿಕೆಗಳಿಗೆ ಸಂದರ್ಶನ ನೀಡಿರುವ ಭಾಗವತ್‌ ‘ಹಿಂದೂ ಎನ್ನುವುದು ನಮ್ಮ ಹೆಗ್ಗುರುತು, ನಮ್ಮ ರಾಷ್ಟ್ರೀಯತೆ, ನಮ್ಮ ನಾಗರಿಕತೆಯ ಲಕ್ಷಣ. ಎಲ್ಲರನ್ನೂ ಒಳಗೊಂಡ, ಎಲ್ಲರೂ ನಮ್ಮವರೆಂದು ಭಾವಿಸುವ ಲಕ್ಷಣ. ನಾವೆಂದೂ, ನಾವೇ ಸತ್ಯ, ಉಳಿದವೆಲ್ಲಾ ಮಿಥ್ಯ ಎಂದು ಹೇಳಲ್ಲ, ನಿಮ್ಮ ಜಾಗದಲ್ಲಿ ನೀವು, ನಮ್ಮ ಜಾಗದಲ್ಲಿ ನಾವು. ನನ್ನ ವಿಷಯದಲ್ಲಿ ನಾನು ಸರಿ ಎಂಬ ಭಾವನೆ ಹೊಂದಿರುವವರು. ಹೀಗಿರುವಾಗ ಕಲಹವೇಕೆ, ಎಲ್ಲರೂ ಒಂದಾಗಿ ಮುಂದುವರೆಯೋಣ ಎಂಬುದೇ ಹಿಂದುತ್ವ’ ಎಂದು ಹೇಳಿದ್ದಾರೆ.

ಜೊತೆಗೆ ‘ಸರಳವಾದ ಸತ್ಯವೆಂದರೆ, ಹಿಂದೂಸ್ತಾನ (Hindustan) ಎಂದಿಗೂ ಹಿಂದೂಸ್ತಾನವಾಗಿಯೇ ಉಳಿಯಬೇಕು. ಭಾರತದಲ್ಲಿ ಇಂದು ವಾಸಿಸುತ್ತಿರುವ ಮುಸ್ಲಿಮರಿಗೆ (Muslims) ಯಾವುದೇ ತೊಂದರೆ ಇಲ್ಲ, ಇಸ್ಲಾಂ (Islam) ಆತಂಕಪಡಬೇಕಾದ್ದು ಏನೂ ಇಲ್ಲ. ಆದರೆ ನಾವೇ ಶ್ರೇಷ್ಠ, ಒಂದೊಮ್ಮೆ ನಾವು ಈ ಭೂಮಿಯನ್ನು ಆಳಿದ್ದೆವು; ಮತ್ತು ಮತ್ತೊಮ್ಮೆ ಆಳಲಿದ್ದೇವೆ; ನಮ್ಮ ಹಾದಿಯೇ ಸರಿ; ಉಳಿದಿದ್ದೆಲ್ಲಾ ತಪ್ಪು; ನಾವು ವಿಭಿನ್ನ; ಹೀಗಾಗಿ ನಾವು ಅಂದುಕೊಂಡಿದ್ದನ್ನು ಮಾಡಿಯೇ ತೀರುತ್ತೇವೆ; ನಾವು ಒಂದಾಗಿ ಬಾಳುವುದು ಸಾಧ್ಯವಿಲ್ಲ; ಇಂಥ ಮನೋಭಾವನೆಯನ್ನು ಅವರು (ಮುಸ್ಲಿಮರು) ಬಿಡಬೇಕು’ ಎಂದು ಭಾಗವತ್‌ (Mohan Bhagwat) ಹೇಳಿದ್ದಾರೆ.

LRC ಮತ್ತೆ ಭಾರತ ಆಳುವ ಕನಸು ಬಿಟ್ಟುಬಿಡಿ, RSS ಮುಖ್ಯಸ್ಥರ ಮಾತಿಗೆ ಮುಸ್ಲಿಮ್ ನಾಯಕರು ಕೆಂಡ!

ಇದೇ ವೇಳೆ ಎಲ್‌ಜಿಬಿಟಿ (LGBT) ಸಮುದಾಯದ ದೃಷ್ಟಿಕೋನವನ್ನು ಬೆಂಬಲಿಸುವ ಕೆಲಸವನ್ನು ಸಂಘ ಪರಿವಾರ ಮಾಡಬೇಕು. ತಮ್ಮದೇ ಒಲವು ಹೊಂದಿರುವ ಇಂಥ ವ್ಯಕ್ತಿಗಳು, ಮಾನವ (Human) ಸೃಷ್ಟಿಯಾದ ಕಾಲದಿಂದಲೂ ಸಮಾಜದ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ. 

ಭಾಗವತ್‌ ಹೇಳಿಕೆಗೆ ಓವೈಸಿ ಕಿಡಿ
ಹೈದರಾಬಾದ್‌: ಹಿಂದುಸ್ತಾನ, ಹಿಂದುಸ್ತಾನವಾಗಿ ಉಳಿದರೆ ಭಾರತದಲ್ಲಿ ಮುಸ್ಲಿಮರು ಸುರಕ್ಷಿತ. ಆದರೆ ಮುಸ್ಲಿಮರು ತಮ್ಮ ಧರ್ಮವಷ್ಟೇ ಶ್ರೇಷ್ಠ ಎಂಬುದನ್ನು ಬಿಡಬೇಕು ಎಂದು ಹೇಳಿದ್ದನ್ನು ಎಎಂಐಎಂ ಮುಖಂಡ ಅಸಾದುದ್ದೀನ್‌ ಓವೈಸಿ (Asaduddin Owaisi) ಖಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಓವೈಸಿ, ‘ಭಾರತದಲ್ಲಿ ಮುಸ್ಲಿಮರು ವಾಸಿಸಲು, ನಮ್ಮ ಧರ್ಮ ಅಸುಸರಿಸುವ ಅನುಮತಿ ನೀಡಲು ಮೋಹನ್‌ ಭಾಗವತ್‌ ಯಾರು ಎಂದು ಪ್ರಶ್ನಿಸಿದ್ದಾರೆ. 

ಇದನ್ನು ಓದಿ: ದೇಶದ ಶೇ.99ರಷ್ಟು ಮುಸ್ಲಿಮರ ಪೂವರ್ಜರು ಹಿಂದುಸ್ತಾನಿಗಳು: RSS ನಾಯಕ ಇಂದ್ರೇಶ್‌ ಕುಮಾರ್!

ಭಾರತಕ್ಕೆ ಹೊಂದಿಕೊಳ್ಳಲು ನಾವು ಭಾರತದಲ್ಲಿಲ್ಲ. ಅಲ್ಲಾನ ಇಚ್ಛೆಯಿಂದಾಗಿ ಭಾರತದಲ್ಲಿದ್ದೇವೆ. ಮುಸ್ಲಿಮರ ಪೌರತ್ವದ ಮೇಲೆ ಪ್ರಶ್ನೆ ಮಾಡಲು ಭಾಗವತ್‌ಗೆ ಎಷ್ಟು ಧೈರ್ಯ ಎಂದು ಕಿಡಿಕಾರಿದ್ದಾರೆ. ಧರ್ಮದ ಹೆಸರಿನಲ್ಲಿ ದ್ವೇಷ , ಮಾಡುವುದನ್ನು ಯಾವುದೇ ಸಮಾಜ ಸಹಿಸುವುದಿಲ್ಲ. ದೇಶದಲ್ಲಿರುವ ಸಾಕಷ್ಟುಹಿಂದೂಗಳು ತಮ್ಮದೇ ಧರ್ಮ ಶ್ರೇಷ್ಠ ಎಂದು ಭಾವಿಸುತ್ತಾರೆ. ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವವರು ಭಾರತ ವಸುದೈವ ಕುಟುಂಬ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗ್ತಿದೆ; ನಮ್ಮಿಂದಲೇ ಹೆಚ್ಚು ಕಾಂಡೋಮ್‌ ಬಳಕೆ: Asaduddin Owaisi

Follow Us:
Download App:
  • android
  • ios