ಹೈದರಾಬಾದ್(ಆ. 31) ಕೊರೋನಾ ಕಾರಣಕ್ಕೆ  ಹಬ್ಬ ಆಚರಣೆ ಹೆಸರಿನಲ್ಲಿ ಮೆರವಣಿಗೆ ಮಾಡಬಾರದು, ಜನ ಒಂದೇ ಕಡೆ ಸೇರಬಾರದು ಎಂದು ತೆಲಂಗಾಣ ಹೈ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದಕ್ಕೆ ಜನ ಮಾತ್ರ ಕಿಮ್ಮತ್ತು ನೀಡಿದಂತೆ ಕಂಡಿಲ್ಲ. 

'ಬಿಬಿ ಕಾ ಆಲಂ' ಮೆರವಣಿಗೆ ಹೈದರಾಬಾದ್ ನಲ್ಲಿ ನಡೆದಿದ್ದು ಜನಜಂಗುಳಿ ಎಲ್ಲೆಲ್ಲೂ ಇತ್ತು.  ನಾಲ್ಕು ನೂರು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂಬಂತೆ ಆನೆ ಬದಲು ಟ್ರಕ್  ಒಂದನ್ನು ಮೆರವಣಿಗೆಯಲ್ಲಿ ಬಳಸಲಾಗಿತ್ತು. 

ಮೊಹರಂ ಹಬ್ಬದ ಮಹತ್ವವೇನು?

ದಬೇರ್‌ಪುರಾ ದಿಂದ ಛದೇರ್ ಘಾಟ್ ತನಕ ಮೆರವಣಿಗೆ ಸಾಗಿದ್ದು ಸಾಮಾಜಿಕ ಅಂತರದ ಮಾತು ಇಲ್ಲಿ ಕೇಳಲೇಬಾರದು ಎಂಬ ಸ್ಥಿತಿ ಇತ್ತು.   ಹಬ್ಬದ ಹೆಸರಿನಲ್ಲಿ ಮೆಡರವಣಿಗೆ ಅವಕಾಶ ಇಲ್ಲ ಎಂದು ನ್ಯಾಯಾಲಯಗಳು ಸ್ಪಷ್ಟವಾಗಿ ಹೇಳಿದ್ದರೂ ಆದೇಶ ಮಾತ್ರ ಪಾಲನೆಯಾಗಿಲ್ಲ. ಪೊಲೀಸರು  ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.