ಗುಜರಾತ್‌ನ ಭಾವ್‌ನಗರ ಜಿಲ್ಲೆಯಲ್ಲಿರುವ ಪವಿತ್ರ ಶತ್ರುಂಜಯ ಬೆಟ್ಟವನ್ನು ಅಪವಿತ್ರಗೊಳಿಸಿದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೈನ ಸಮುದಾಯದ ನೂರಾರು ಮಂದಿ ದಿಲ್ಲಿ, ಮುಂಬೈ, ಗುಜರಾತ್‌ ಸೇರಿ ಅನೇಕ ಕಡೆ ಭಾನುವಾರ ಪ್ರತಿಭಟನಾ ಸಮಾವೇಶ ನಡೆಸಿದರು.

ನವದೆಹಲಿ: ಗುಜರಾತ್‌ನ ಭಾವ್‌ನಗರ ಜಿಲ್ಲೆಯಲ್ಲಿರುವ ಪವಿತ್ರ ಶತ್ರುಂಜಯ ಬೆಟ್ಟವನ್ನು ಅಪವಿತ್ರಗೊಳಿಸಿದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೈನ ಸಮುದಾಯದ ನೂರಾರು ಮಂದಿ ದಿಲ್ಲಿ, ಮುಂಬೈ, ಗುಜರಾತ್‌ ಸೇರಿ ಅನೇಕ ಕಡೆ ಭಾನುವಾರ ಪ್ರತಿಭಟನಾ ಸಮಾವೇಶ ನಡೆಸಿದರು. ಶತ್ರುಂಜಯ ನದಿ ದಡದಲ್ಲಿರುವ ಈ ಬೆಟ್ಟದ ಮೇಲೆ ಸುಮಾರು 865 ಜೈನ ದೇವಾಲಯಗಳಿವೆ. ಅಲ್ಲದೇ ಇದು ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಕಳೆದ ವರ್ಷ ನ.26ರಂದು ಬೆಟ್ಟದ ಮೇಲಿರುವ ಜೈನ ಸನ್ಯಾಸಿ ಮೂರ್ತಿಯ ಚರಣ ಪಾದುಕೆಗಳನ್ನು ಒಡೆದು ಹಾಕಿದ ಘಟನೆ ನಡೆದಿದೆ. ಹೀಗಾಗಿ ಜೈನ ಸಮುದಾಯ ಪ್ರತಿಭಟನೆ ನಡೆಸಿದೆ. ಬೆಟ್ಟದಲ್ಲಿ ನಡೆಸಲಾಗುತ್ತಿರುವ ಅಕ್ರಮ ಗಣಿಗಾರಿಕೆ, ಅಕ್ರಮ ಮದ್ಯ ತಯಾರಿಕೆ ಮತ್ತು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಮೆರಿಕದ ಕೆಲಸಕ್ಕೆ ಗುಡ್‌ಬೈ ಹೇಳಿ, ಜೈನ ಸಂನ್ಯಾಸಿಯಾದ 28ರ ಹುಡುಗ!

Jain Protest: ಜೈನರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಉಳಿಸಿ: ಜೈನ ಸಮುದಾಯ ಹೋರಾಟ

Scroll to load tweet…