Asianet Suvarna News Asianet Suvarna News

Jain Protest: ಜೈನರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಉಳಿಸಿ: ಜೈನ ಸಮುದಾಯ ಹೋರಾಟ

ಜೈನ ಧರ್ಮದ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರ್ಕಾರ ಪ್ರವಾಸಿತಾಣ ಎಂದು ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ, ಉಡುಪಿ ಜಿಲ್ಲೆಯ ಜೈನ ಸಮುದಾಯದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

Save Jain Tirtha Kshetra Sammeda Shikharjee Jain Community Struggle sat
Author
First Published Dec 21, 2022, 5:09 PM IST

ಉಡುಪಿ (ಡಿ.21): ಜಾರ್ಖಂಡ್ ರಾಜ್ಯದ ಗಿರಡಿ ಜಿಲ್ಲೆಯಲ್ಲಿರುವ ಜೈನ ಧರ್ಮದ ಪರಮೋಚ್ಚ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರ್ಕಾರ ಪುವಾಸೋದ್ಯಮ ಇಲಾಖೆ ಮುಖಾಂತರ ಪ್ರವಾಸಿತಾಣ ಎಂದು ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ, ಉಡುಪಿ ಜಿಲ್ಲೆಯ ಜೈನ ಸಮುದಾಯದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜೈನ ಧರ್ಮದ ಅನಾದಿ- ಪರಮ ಪಾವನ ಕ್ಷೇತ್ರವಾದ ಸಮ್ಮೇದ ಶಿಖರ್ಜಿಯು ಜಾರ್ಖಂಡ್ ರಾಜ್ಯದ ಗಿರಡಿ ಜಿಲ್ಲೆಯಲ್ಲಿದೆ. ಈ ತೀರ್ಥಕ್ಷೇತ್ರ ಜೈನರ 20 ತೀರ್ಥಂಕರರು ಮುಕ್ತಿ ಹೊಂದಿದ ಸ್ಥಳವಾಗಿದೆ. ಜೈನರಿಗೆ ಈ ಕ್ಷೇತ್ರದ ದರ್ಶನ ಮಾಡಿದರೆ ಸಕಲ ಪಾಪಗಳು ಕಳೆದು ಹೋಗುತ್ತದೆ ಎಂಬ ನಂಬಿಕೆ ಇದೆ. ಈ ಕ್ಷೇತ್ರದ ದರ್ಶನಕ್ಕಾಗಿ ವಿಶ್ವದ ನಾನಾಭಾಗಗಳಿಂದ ಜೈನರು ಧಾವಿಸಿ ಬರುತ್ತಿದ್ದಾರೆ. ವಫೇಲಾ ರಾಜವಂಶದ ವಿರಾಢವಲ ಮತ್ತು ವಿಶಾಲದೇವನ ಆಳ್ವಿಕೆಯಲ್ಲಿ ಪ್ರಧಾನಮಂತ್ರಿಯಾಗಿದ್ದ ವಾಸ್ತುಪಾಲನು ಶಿಖರವನ್ನು ಜೈನರ ತೀರ್ಥಕ್ಷೇತ್ರವೆಂದು ಘೋಷಿಸಿದ್ದಾನೆ. ಮೊಗಲ್ ದೊರೆ ಅಕ್ಬರನು ಕೂಡ ಇತಿಹಾಸದ ದಾಖಲೆಗಳನ್ನು ಪರಿಶೀಲಿಸಿ ಇದು ಜೈನರ ತೀರ್ಥಕ್ಷೇತ್ರ ಎಂದು ಆದೇಶ ಹೊರಡಿಸಿದ್ದಾನೆ ಎಂದು ಪ್ರತಿಭಟನಾ ನಿರತ ಜೈನ ಸಮುದಾಯ ಹೇಳಿರುವುದು ಗಮನಸೆಳೆದಿದೆ.

ಸ್ವಾತಂತ್ರ್ಯ ನಂತರ ತೀರ್ಥಕ್ಷೇತ್ರ ರಕ್ಷಣೆಗೆ ಭಾರಿ ಅಭಧ್ರತೆ:  ಬ್ರಿಟಿಷರು ಕೂಡ ಸಮ್ಮೇದ ಶಿಖರ್ಜಿ ಜೈನರ ಪುಣ್ಯಕ್ಷೇತ್ರ ಎಂದು ಆದೇಶ ನೀಡಿದ್ದಾರೆ. ಆದರೆ ಸ್ವಾತಂತ್ರ್ಯ ನಂತರದ ಬಂದ ಸರಕಾರಗಳು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಜೈನರ ತೀರ್ಥಕ್ಷೇತ್ರದ ವಿಚಾರದಲ್ಲಿ ಅಭದ್ರತೆಯ ವಾತಾವರಣ ನಿರ್ಮಿಸುತ್ತಿರುವು ಬೇಸರದ ವಿಷಯ ಎಂದು ಜೈನ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ. ಜೈನರ ಪುತಿರೋಧದ ನಡುವೆಯೂ ಜಾರ್ಖಂಡ್ ರಾಜ್ಯ ಸರಕಾರ ಈ ಪವಿತ್ರ ಸ್ಥಳವನ್ನು ಪುವಾಸಿತಾಣವನ್ನಾಗಿ ಘೋಷಿಸುವ ಮೂಲಕ ಅಪವಿತ್ರಗೊಳಿಸುವ ಹುನ್ನಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಅಮೆರಿಕದ ಕೆಲಸಕ್ಕೆ ಗುಡ್‌ಬೈ ಹೇಳಿ, ಜೈನ ಸಂನ್ಯಾಸಿಯಾದ 28ರ ಹುಡುಗ!

ಕೇಂದ್ರ ಸರ್ಕಾರ ಕಾಳಜಿವಹಿಸಬೇಕು: ಭಾರತ ಸಂವಿಧಾನದ ಪ್ರಕಾರ ಭಾರತದಲ್ಲಿ ಜೈನರು ಹೊಂದಿರುವ ಮಹಾತೀರ್ಥಕ್ಷೇತ್ರದ ಪಾವಿತ್ರತೆಯನ್ನು ರಕ್ಷಿಸುವುದು ಭಾರತ ಸರಕಾರದ ಕರ್ತವ್ಯವಾಗಿದೆ. ಹೇಗೆ ಅನ್ಯರ ತೀರ್ಥಕ್ಷೇತ್ರಗಳ ಬಗೆಗೆ ಸರಕಾರ ಕಾಳಜಿಯನ್ನು ಹೊಂದಿದೆಯೋ ಅದೇ ರೀತಿ ಜೈನರ ಸಮ್ಮೇದ ಶಿಖರ್ಜಿಯ ಕಾಳಜಿಯನ್ನು ಭಾರತ ಸರಕಾರ ವಹಿಸಿಕೊಳ್ಳಬೇಕಾದದ್ದು ಕರ್ತವ್ಯವಾಗಿದೆ ಎಂದು ಆಗ್ರಹಿಸಿದ್ದಾರೆ.

ಜಾರ್ಖಂಡ್‌ ರಾಜ್ಯದ ಆದೇಶ ರದ್ದುಪಡಿಸಿ: ಬೇಡಿಕೆಯನ್ನು ಮನ್ನಿಸಿ ಸಮ್ಮೇದ ಶಿಖರ್ಜಿಯನ್ನು ಪುವಾಸಿತಾಣ ಎಂದು ಘೋಷಿಸಿರುವ ಆಜ್ಞೆಯನ್ನು ರದ್ದುಪಡಿಸುವಂತೆ ಜಾರ್ಖಂಡ್ ಆಡಳಿತಕ್ಕೆ ಆದೇಶ ನೀಡಬೇಕು ಹಾಗೂ ಸಮ್ಮೇದ ಶಿಖರ್ಜಿಯ ಗೌರವಕ್ಕೆ ಚ್ಯುತಿ ಬಾರದಂತೆ ಮುನ್ನೆಚ್ಚರಿಗೆ ವಹಿಸುವುದಾಗಿ ಲಿಖಿತ ಭರವಸೆ ನೀಡಬೇಕೆಂದು ಮನವಿ ಮಾಡಲಾಯಿತು. ಭವಿಷ್ಯದಲ್ಲಿಯೂ ಜೈನರ ತೀರ್ಥಕ್ಷೇತ್ರಕ್ಕೆ ಯಾವುದೇ ತೊಂದರೆಯಾಗದ ಇರಲಿ ಎಂಬ ಕಾನೂನನ್ನು ಜಾರಿಗೊಳಿಸಬೇಕೆಂದು ರಾಷ್ಟ್ರಪತಿಗಳಿಗೆ ಬರೆದಿರುವ ಈ ಪತ್ರದಲ್ಲಿ ತಿಳಿಸಲಾಗಿದೆ. ಇಂದು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಉಡುಪಿಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

Follow Us:
Download App:
  • android
  • ios