Asianet Suvarna News Asianet Suvarna News

ದೇರಾ ಮುಖ್ಯಸ್ಥ ರಾಮ್ ರಹೀಮ್‌ಗೆ ರಿಲೀಫ್, ಮ್ಯಾನೇಜರ್ ಕೊಲೆ ಪ್ರಕರಣದಲ್ಲಿ ಖುಲಾಸೆ!

ಕೊಲೆ, ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹೈಕೋರ್ಟ್ ರಿಲೀಫ್ ನೀಡಿದೆ. ದೇರಾ ಸಚ್ಚಾದ ಮ್ಯಾನೇಜರ್ ಕೊಲೆ ಪ್ರಕರಣದಲ್ಲಿ ರಾಮ್ ರಹೀಮ್ ಸೇರಿದಂತೆ ನಾಲ್ವರನ್ನು ಕೋರ್ಟ್ ಖುಲಾಸೆಗೊಳಿಸಿದೆ.
 

Dera chief Gurmeet Ram Rahim acquitted in manger Murder case by High Court ckm
Author
First Published May 28, 2024, 1:15 PM IST

ಹರ್ಯಾಣ(ಮೇ.28) ಹಲವು ಪ್ರಕರಣಗಳಲ್ಲಿ ಜೈಲು ಸೇರಿರುವ ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ಗೆ ಇದೀಗ ಹರ್ಯಾಣ ಪಂಜಾಬ್ ಹೈಕೋರ್ಟ್ ರಿಲೀಫ್ ನೀಡಿದೆ. ದೇರಾ ಸಚ್ಚಾ ಸೌದಾ ಮ್ಯಾನೇಜರ್ ಕೊಲೆ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಪಂಜಾಬ್ ಹರ್ಯಾಣ ಹೈಕೋರ್ಟ್ ಈ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ಹಾಗೂ ಇತರ ನಾಲ್ವರನ್ನು ಖುಲಾಸೆಗೊಳಿಸಿದೆ. ಆದರೆ ರಾಮ್ ರಹೀಮ್ ಸಿಂಗ್‌ಗೆ ಜೈಲಿನಿಂದ ಬಿಡುಗಡೆ ಭಾಗ್ಯವಿಲ್ಲ.

ದೇರಾ ಸಚ್ಚಾ ಸೌದಾ ಮ್ಯಾನೇಜರ್ ರಂಜಿತ್ ಸಿಂಗ್ ಬರ್ಬರವಾಗಿ ಹತ್ಯೆಯಾಗಿದ್ದರು. ರಾಮ್ ರಹೀಮ್  ಆಪ್ತ ಹಾಗೂ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಂಜಿತ್ ಸಿಂಗ್ ಹತ್ಯೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇದೇ ವೇಳೆ ರಾಮ್ ರಹೀಮ್ ಅವರ ದೇರಾದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಈ ಹತ್ಯೆಯಲ್ಲಿ ರಾಮ್ ರಹೀಮ್ ಸಿಂಗ್ ಹಾಗೂ ಇತರ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿತ್ತು.

ನಮ್ಮ ಒಪ್ಪಿಗೆ ಇಲ್ಲದೆ ರಾಮ್‌ ರಹೀಂಗೆ ಪೆರೋಲ್‌ ನೀಡಬೇಡಿ, ಹರ್ಯಾಣ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ!

ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ಕೋರ್ಟ್‌ 2021ರಲ್ಲಿ ತೀರ್ಪ ಪ್ರಕಟಿಸಿತ್ತು. ಈ ಪ್ರಕರಣದಲ್ಲಿ ರಾಮ್ ರಹೀಮ್  ಹಾಗೂ ಇತರ ನಾಲ್ವರು ಮೇಲಿನ ಆರೋಪ ಸಾಬೀತಾಗಿತ್ತು. ಇಷ್ಟೇ ಅಲ್ಲ ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬರೋಬ್ಬರಿ 19 ವರ್ಷಗಳ ಹಿಂದೆ ರಂಜಿತ್ ಸಿಂಗ್‌ಗೆ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಜುಲೈ 10, 2002ರಲ್ಲಿ ಹರ್ಯಾಣದ ಖಾನಪುರ ಕೊಲಿಯನ್ ಗ್ರಾಮದಲ್ಲಿ ಈ ಹತ್ಯೆ ನಡೆದಿತ್ತು.

ದೇರಾ ಸಚ್ಚಾದಲ್ಲಿ ಮ್ಯಾನೇಜರ್ ಆಗಿದ್ದ ರಂಜಿತ್ ಸಿಂಗ್, ರಾಮ್ ರಹೀಮ್ ಮಹಿಳೆಯರನ್ನು ಹೇಗೆ ಬಳಸಿಕೊಳ್ಳುತ್ತಿದ್ದಾನೆ, ಆಶ್ರಮದಲ್ಲಿ ಅತ್ಯಾಚಾರ ಹೇಗೆ ನಡೆಯುತ್ತಿದೆ ಅನ್ನೋ ಕುರಿತು ಪತ್ರ ಬರೆದು ಹಂಚಿದ್ದ.ದೇರಾ ಸಚ್ಚಾ ಸೌದಾದಲ್ಲಿ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಲಾಗುತ್ತಿದೆ. ಇದು ಜನರ ನೋವಿಗೆ ಪರಿಹಾರದ ಕೇಂದ್ರವಲ್ಲ, ಜನರನ್ನು ಬಲಿ ಪಡೆಯುವ ಕೇಂದ್ರ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಇಷ್ಟೇ ಅಲ್ಲ ಈ ಗೌಪ್ಯ ಮಾಹಿತಿ ಬಹಿರಂಗಪಡಿಸಿದರೆ ನನ್ನ ಜೀವಕ್ಕೆ ಅಪಾಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ರು. ಈ ಪತ್ರ ಹಂಚಿದ ಕೆಲವೇ ದಿನಗಳಲ್ಲಿ ರಂಜಿತ್ ಸಿಂಗ್ ಹತ್ಯೆಯಾಗಿತ್ತು.  2002ರಿಂದ ವಿಚಾರಣೆ ನಡೆದು 2021ರಲ್ಲಿ ಸಿಬಿಐ ಕೋರ್ಟ್ ರಾಮ್ ರಹೀಮ್ ದೋಷಿ ಎಂದಿತ್ತು.

ಮತ್ತೆ ಜೈಲಿನಿಂದ ಬಿಡುಗಡೆಯಾದ ರಾಮ್ ರಹೀಮ್ ಸಿಂಗ್: 4 ವರ್ಷದಲ್ಲಿ 9ನೇ ಬಾರಿ ಪೆರೋಲ್!
 

Latest Videos
Follow Us:
Download App:
  • android
  • ios