ಅತ್ಯಾಚಾರ ಆರೋಪಿ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಪೂರ್ವಾನುಮತಿ ಇಲ್ಲದೆ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹರಿಯಾಣ ಸರ್ಕಾರಕ್ಕೆ ತಿಳಿಸಿದೆ. 

ನವದೆಹಲಿ (ಫೆ.29): ಅತ್ಯಾಚಾರ ಆರೋಪಿ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಪೆರೋಲ್ ನೀಡೋಕೆ ಸಾಧ್ಯವಿಲ್ಲ. ಪೆರೋಲ್‌ ನೀಡಲು ನಮ್ಮ ಒಪ್ಪಿಗೆ ಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗುರುವಾರ ಹರಿಯಾಣ ಸರ್ಕಾರಕ್ಕೆ ತಿಳಿಸಿದೆ. ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ರಾಮ್‌ ರಹೀಮ್‌ ಸಿಂಗ್‌ಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗಿದೆ. ಇತ್ತೀಚೆಗೆ ರಾಮ್‌ ರಹೀಮ್‌ಗೆ 50 ದಿನಗಳ ಪೆರೋಲ್‌ ನೀಡಲಾಗಿದೆ. ಈ ಹಿಂದೆ ನವೆಂಬರ್ 2023 ರಲ್ಲಿ 21 ದಿನಗಳ ಪೆರೋಲ್‌ನಲ್ಲಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎನ್ನುವುದನ್ನು ಕೋರ್ಟ್‌ ಗಮನಿಸಿದೆ. ರಾಮ್ ರಹೀಮ್‌ಗೆ ಪೆರೋಲ್ ನೀಡುವುದನ್ನು ವಿರೋಧಿಸಿ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (ಎಸ್‌ಜಿಪಿಸಿ) ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಹರ್ಯಾಣ ಸರ್ಕಾರಕ್ಕೆ ಸೂಚನೆಗಳನ್ನು ನೀಡುವಾಗ, ರಾಮ್ ರಹೀಮ್ ರೀತಿಯಲ್ಲಿ ಇನ್ನೂ ಎಷ್ಟು ಜನರಿಗೆ ಪೆರೋಲ್ ನೀಡಲಾಗಿದೆ ಎನ್ನವುದನ್ನು ತಿಳಿಸುವಂತೆ ಕೋರ್ಟ್‌ ಹೇಳಿದೆ.

* ರಾಮ್ ರಹೀಮ್‌ಗೆ ನೀಡಿದ ಪೆರೋಲ್‌ಗಳು
- 2023 ರಲ್ಲಿ, ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಮೂರು ಬಾರಿ ಪೆರೋಲ್ ನೀಡಲಾಗಿತ್ತು. ಜನವರಿಯಲ್ಲಿ 40 ದಿನಗಳು, ಜುಲೈನಲ್ಲಿ 30 ದಿನಗಳು ಮತ್ತು ನವೆಂಬರ್‌ನಲ್ಲಿ 21 ದಿನಗಳು.

- 2022ರಲ್ಲಿಯೂ ಹರಿಯಾಣದ ರೋಹ್ಟಕ್‌ನಲ್ಲಿರುವ ಸುನಾರಿಯಾ ಜೈಲಿನಿಂದ ಮೂರು ಬಾರಿ ಬಿಡುಗಡೆ ಮಾಡಲಾಗಿತ್ತು. ಫೆಬ್ರವರಿ 2022 ರಲ್ಲಿ, ರಾಮ್‌ ರಹೀಮ್‌ಗೆ ಮೂರು ವಾರಗಳ ಪೆರೋಲ್ ನೀಡಲಾಯಿತು, ನಂತರ ಅದೇ ವರ್ಷ ಜೂನ್‌ನಲ್ಲಿ ಆತ ಒಂದು ತಿಂಗಳ ಕಾಲ ಹೊರಗಿದ್ದ

- ಅಕ್ಟೋಬರ್ 2022 ರಲ್ಲಿ ಸಹ ರಾಮ್‌ 40 ದಿನಗಳ ಪೆರೋಲ್ ನೀಡಲಾಯಿತು.

ಮತ್ತೆ ಜೈಲಿನಿಂದ ಬಿಡುಗಡೆಯಾದ ರಾಮ್ ರಹೀಮ್ ಸಿಂಗ್: 4 ವರ್ಷದಲ್ಲಿ 9ನೇ ಬಾರಿ ಪೆರೋಲ್!

16 ವರ್ಷಗಳ ಹಿಂದೆ ಪತ್ರಕರ್ತನ ಹತ್ಯೆಗೆ ಸಂಬಂಧಿಸಿದಂತೆ 2019 ರಲ್ಲಿ ಡೇರಾ ಮುಖ್ಯಸ್ಥ ಮತ್ತು ಇತರ ಮೂವರಿಗೆ ಶಿಕ್ಷೆ ವಿಧಿಸಲಾಯಿತು. ಎರಡು ವರ್ಷಗಳ ನಂತರ, 2021 ರಲ್ಲಿ, ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕಾಗಿ ಸಿಂಗ್ ಮತ್ತು ಇತರ ನಾಲ್ವರಿಗೆ ಶಿಕ್ಷೆ ವಿಧಿಸಲಾಯಿತು. ಹರಿಯಾಣ ಉತ್ತಮ ನಡತೆ ಕೈದಿಗಳ (ತಾತ್ಕಾಲಿಕ ಬಿಡುಗಡೆ) ಕಾಯಿದೆ, 2022 ರ ಪ್ರಕಾರ, ಶಿಕ್ಷೆಗೊಳಗಾದ ಕೈದಿಗಳಿಗೆ ನಿಯಮಿತ ಪೆರೋಲ್ ನೀಡಬಹುದು. ಹಾಗಿದ್ದರೂ, ಹಲವು ಕೊಲೆಗಳಿಗೆ ಅಥವಾ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿಯಲ್ಲಿ ಶಿಕ್ಷೆಗೊಳಗಾದ ಕೈದಿಗಳು ಪೆರೋಲ್‌ಗೆ ಅರ್ಹರಾಗಿರುವುದಿಲ್ಲ.

Gurmeet Ram Rahim Singh ಪಂಜಾಬ್‌ ಚುನಾವಣೆಗೂ ಮುನ್ನ ಡೇರಾ ಮುಖ್ಯಸ್ಥ ಗುರ್ಮೀತ್‌ಗೆ ಫರ್ಲೋ!