ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಸಂವಾದ ಸೇನಾ ಹಾಗೂ ರಕ್ಷಣಾ ಕಾರ್ಯಪಡೆಗೆ ಮೋದಿ ಅಭಿನಂದನೆ IAF, ಭಾರತೀಯ  ಸೇನೆ, NDRF, ITBP,ಸ್ಥಳೀಯ ಆಡಳಿತ ಜೊತೆ ಸಂವಾದ

ನವದೆಹಲಿ(ಏ.13): ಕೊರೋನಾ ಬಳಿಕ ನಿಧಾನವಾಗಿ ಚೇತರಿಸಿಕೆ ಕಾಣುತ್ತಿದ್ದ ಪ್ರವಾಸಿ ತಾಣಗಳಿಗೆ ಜಾರ್ಖಂಡ್‌ನ ದೇವಘರ್ ಜಿಲ್ಲೆಯಲ್ಲಿ ನಡೆದ ರೋಪ್‌ವೇ ದುರಂತ ಹಿನ್ನಡೆ ತಂದಿದೆ. ಆದರೆ ಈ ದುರಂತದಲ್ಲಿ ಸಿಲುಕಿದ ಪ್ರವಾಸಿಗರನ್ನು ರಕ್ಷಿಸುವಲ್ಲಿ ಭಾರತೀಯ ಸೇನೆ, NDRF, ITBP,ಸ್ಥಳೀಯ ಆಡಳಿತ ಅವಿರತ ಶ್ರಮ ವಹಿಸಿದೆ. ಈ ಮೂಲಕ ದೇಶದ ಜನರ ಅಭಿನಂದನೆಗೆ ಪಾತ್ರವಾಗಿದೆ. ಇದೀಗ ಕೇಬಲ್ ಕಾರು ಅಪಘಾತದಲ್ಲಿ ಸಿಲುಕಿದ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಿದ ಎಲ್ಲಾ ಕಾರ್ಯಪಡೆಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಇಂದು(ಏ.13) ಸಂವಾದ ನಡೆಸಲಿದ್ದಾರೆ.

ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಾಯುಸೇನೆ, ಭಾರತೀಯ ಭೂ ಸೇನೆ, ಎನ್‌ಡಿಆರ್‌ಎಫ್, ಐಟಿಬಿಪಿ ಹಾಗೂ ಸ್ಥಳೀಯ ಆಡಳಿತ, ಸ್ಥಳೀಯರ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ದುರ್ಗಮ ಪ್ರದೇಶದಲ್ಲಿ ಅವಿರತ ಶ್ರಮದಿಂದ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಿದ ಕಾರ್ಯಪಡೆಗಳಿಗೆ ಮೋದಿ ಅಭಿನಂದನೆ ಸಲ್ಲಿಸಲಿದ್ದಾರೆ. 

ಜಾರ್ಖಂಡ್‌ನಲ್ಲಿ ಕೇಬಲ್ ಕಾರು ದುರಂತ, ಇಬ್ಬರು ಸಾವು, 46 ಮಂದಿಗಾಗಿ ಮುಂದುವರೆದ ರಕ್ಷಣಾ ಕಾರ್ಯ!

ದುರಂತ ಸಂಭವಿಸಿದ ಬಳಿಕ ಸತತ 40 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. ಕೇಬಲ್‌ ಕಾರ್‌ನಲ್ಲಿ ಸಿಲುಕಿದ್ದ ಕೊನೆಯ 16 ಜನರ ಪೈಕಿ 15 ಜನರನ್ನು ರಕ್ಷಿಸಲಾಗಿದೆ. ಆದರೆ ರಕ್ಷಣಾ ಕಾರ್ಯದ ವೇಳೆ ಓರ್ವ ಹಗ್ಗದಿಂದ ಕೈಜಾರಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 4ಕ್ಕೇರಿದೆ.

Scroll to load tweet…

ಭಾನುವಾರ ರಾತ್ರಿಯಿಂದಲೇ ಕೇಬಲ್‌ ಕಾರ್‌ನಲ್ಲಿ ಸಿಲುಕಿದ್ದ ಸುಮಾರು 56 ಪ್ರವಾಸಿಗರನ್ನು ಭಾರತೀಯ ವಾಯುಸೇನೆಯ ಎರಡು ಹೆಲಿಕಾಪ್ಟರ್‌ ಮೂಲಕ ಸತತ 40 ಗಂಟೆಗಳ ಕಾಲ ಕಾರಾರ‍ಯಚರಣೆ ನಡೆಸಿ ರಕ್ಷಣೆ ಮಾಡಿದೆ. ಸೇನೆ, ಐಟಿಬಿಪಿ ಯೋಧರು ಹಾಗೂ ಎನ್‌ಡಿಆರ್‌ಎಫ್‌ ತಂಡ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಗಿದ್ದವು.

ಮೃತರ ಪೈಕಿ ಇಬ್ಬರು ಕೇಬಲ್‌ ಕಾರ್‌ ಡಿಕ್ಕಿಯಲ್ಲಿ ಸಾವನ್ನಪ್ಪಿದರೆ, ಓರ್ವ ಮಹಿಳೆ, ಮತ್ತೋರ್ವ ಪುರುಷ ರಕ್ಷಣಾ ಕಾರಾರ‍ಯಚರಣೆ ವೇಳೆ ಆಯತಪ್ಪಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಸಂಬಂಧ ಜಾರ್ಖಂಡ್‌ ಹೈಕೋರ್ಚ್‌ ತನಿಖೆಗೆ ಆದೇಶಿಸಿದ್ದು, ಏ.26ರಂದು ಪ್ರಕರಣ ಸಂಬಂಧ ವಿಚಾರಣೆ ನಡೆಸಲಿದೆ.

20 ತಾಸು, ಕೇಬಲ್‌ನಲ್ಲಿ ಸಿಲುಕಿದ್ದಾರೆ 46 ಪ್ರವಾಸಿಗರು, ಜೀವ ರಕ್ಷಿಸಲು ಯೋಧರ ಸಾಹಸ!

‘ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ರೋಪ್‌ ವೇ ಟ್ರ್ಯಾಲಿಯಲ್ಲಿ ಸಾಗುತ್ತಿರುವಾಗ ತಕ್ಷಣ ವಿದ್ಯುತ್‌ ಕಡಿತಗೊಂಡಿತು. ಮಾರ್ಗ ಮಧ್ಯದಲ್ಲಿ ಸಿಲುಕಿಕೊಂಡೆವು. ಆಗ ಕೆಲ ಕೇಬಲ್‌ ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿತು. ರಾತ್ರಿಯೇ ಒಬ್ಬರು ಅಸುನೀಗಿದರು’ ಎಂದು ಪ್ರವಾಸಿಯೊಬ್ಬರು ಹೇಳಿದ್ದಾರೆ.

‘ಸಹಾಯವಾಣಿಗೆ ಕರೆ ಮಾಡಿದಾಗ ತಾಂತ್ರಿಕ ದೋಷದಿಂದ ರೋಪ್‌ ವೇ ಟ್ರ್ಯಾಲಿಗಳ ಸಂಚಾರ ಸ್ಥಗಿತಗೊಂಡಿದೆ ಎಂದು ತಿಳಿಸಿದರು. ಮತ್ತೆ ಕರೆ ಮಾಡಿದಾಗ ರೋಪ್‌ ವೇ ನಿಂತಿದೆ. ಹೆಲಿಕಾಪ್ಟರ್‌ ಮೂಲಕ ರಕ್ಷಣೆ ಮಾಡಲಾಗುತ್ತದೆ ಎಂದರು. ಅಂದಾಜು 100 ಅಡಿ ಎತ್ತರದಲ್ಲಿ ಸಿಲುಕಿಕೊಂಡಿದ್ದೆವು. ಬದುಕುವ ಭರವಸೆಯೇ ಹೋಗಿತ್ತು’ ಎಂದು ದುರ್ಘಟನೆಯಿಂದ ಪಾರಾದ ಸಂದೀಪ್‌ ಎಂಬವರು ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಮಂಜುನಾಥ್‌ ಭಜಂತ್ರಿ, ‘ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೆಲವರು ಇನ್ನೂ ಕೇಬರ್‌ ಕಾರ್‌ನಲ್ಲಿ ಸಿಲುಕಿದ್ದಾರೆ. ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುವುದು’ ಎಂದು ತಿಳಿಸಿದ್ದಾರೆ. ಬಾಬಾ ಬದರೀನಾಥ ದೇಗುಲದಿಂದ 20 ಕಿ.ಮೀ ದೂರದಲ್ಲಿರುವ ತ್ರಿಕೂಟ್‌ ರೋಪ್‌ ವೇ 766 ಮೀಟರ್‌ ಉದ್ದ ಮತ್ತು 392 ಮೀಟರ್‌ ಎತ್ತರದಲ್ಲಿದ್ದು, ಭಾರತದ ಅತಿ ಎತ್ತರದ ಲಂಭ ರೋಪ್‌ ವೇ ಎಂಬ ಖ್ಯಾತಿ ಪಡೆದಿದೆ. ರೋಪ್‌ ವೇನಲ್ಲಿ ತಲಾ ನಾಲ್ಕು ಜನರು ಕೂರಬಹುದಾದ 25 ಕೇಬಲ್‌ ಕಾರುಗಳಿವೆ ಎಂದು ಜಾರ್ಖಂಡ್‌ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.