ದೇವನಹಳ್ಳಿ ಅಕ್ರಮ ಡೀನೋಟಿಫಿಕೇಷನ್‌ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಸಚಿವ ಮುರುಗೇಶ್‌ ನಿರಾಣಿ ಅವರಿಗೆ ಅಲ್ಪ ನೆಮ್ಮದಿ ಸಿಕ್ಕಿದೆ. ಪ್ರಕರಣದಲ್ಲಿ ಇವರಿಬ್ಬರ ಬಂಧನಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂಬಂಧ ದೂರುದಾರ, ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಚ್‌ ಸೋಮವಾರ ವಜಾಗೊಳಿಸಿದೆ.

ನವದೆಹಲಿ (ಜ.24) : ದೇವನಹಳ್ಳಿ ಅಕ್ರಮ ಡೀನೋಟಿಫಿಕೇಷನ್‌ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಸಚಿವ ಮುರುಗೇಶ್‌ ನಿರಾಣಿ ಅವರಿಗೆ ಅಲ್ಪ ನೆಮ್ಮದಿ ಸಿಕ್ಕಿದೆ. ಪ್ರಕರಣದಲ್ಲಿ ಇವರಿಬ್ಬರ ಬಂಧನಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂಬಂಧ ದೂರುದಾರ, ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯ ಅರ್ಜಿ ವಿಚಾರಣೆ ಜ.30 ರಂದು ನಡೆಯಲಿದ್ದು, ಈಗ ತಡೆಯಾಜ್ಞೆ ತೆರವು ಮಾಡುವ ಅಗತ್ಯ ಏನಿದೆ ಎಂದು ನ್ಯಾ.ಗವಾಯಿ ನೇತೃತ್ವದ ಪೀಠ ಅರ್ಜಿ ವಜಾ ಮಾಡಿದೆ.

DK Shivakumar: ಡಿಕೆಶಿಗೆ ಮತ್ತೊಂದು ಸಂಕಷ್ಟ: ಡಿನೋಟಿಫಿಕೇಷನ್ ಪ್ರಕರಣದ ಬೆನ್ನತ್ತಿದ ಸಿಬಿಐ

ಪ್ರಕರಣದ ಹಿನ್ನೆಲೆ: ಬಿ.ಎಸ್‌.ಯಡಿಯೂರಪ್ಪ(BS Yadiyurappa) ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇವನಹಳ್ಳಿಯ ಬಳಿ ತಮಗೆ ನಿಗದಿ ಮಾಡಿದ್ದ 26 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಮಾಡಿ ಬೇರೆ ಬಿಲ್ಡರ್‌ಗೆ ಮಾರಾಟ ಮಾಡಲಾಗಿತ್ತು. ಆಗ ಮುರುಗೇಶ್‌ ನಿರಾಣಿ(Murugesh R Nirani) ಅವರೇ ಕೈಗಾರಿಕಾ ಸಚಿವರಾಗಿದ್ದರು. ಈ ಸಂಬಂಧ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ನಿರಾಣಿ ವಿರುದ್ಧ ಲೋಕಾಯುಕ್ತದಲ್ಲಿ ಆಲಂ ಪಾಷ ದೂರು ದಾಖಲಿಸಿದ್ದರು.

ಅರಣ್ಯ ಭೂಮಿ ಡಿನೋಟಿಫೈ: ಕೇಂದ್ರಕ್ಕೆ ಬಿಎಸ್‌ವೈ ಮನವಿ

ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ (Chargesheet) ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ಹೈಕೋರ್ಟ್(Highcourt) ಕೂಡ ವಿಚಾರಣೆ ನಡೆಸಲು ಅನುಮತಿ ನೀಡಿತ್ತು. ವಿಚಾರಣೆ ಭಾಗವಾಗಿ ಬಂಧನಕ್ಕೆ ತಡೆಕೋರಿ ಯಡಿಯೂರಪ್ಪ ಮತ್ತು ನಿರಾಣಿಯವರು ಸುಪ್ರೀಂ ಕೋರ್ಚ್‌ ಮೊರೆಹೋಗಿದ್ದರು. ಅಂದಿನ ಸಿಜೆಐ ಎಸ್‌.ಎ.ಬೊಬ್ಡೆ ಅವರು ಬಂಧನಕ್ಕೆ ತಡೆ ನೀಡಿ, ವಿಚಾರಣೆಗೆ ಅನುಮತಿ ನೀಡಿದ್ದರು. ಇದೇ ಅಸ್ತ್ರ ಬಳಸಿಕೊಂಡು ಯಡಿಯೂರಪ್ಪ ಮತ್ತು ನಿರಾಣಿ ಯವರು ವಿಚಾರಣೆಗೆ ಹಾಜರಾಗುತ್ತಿಲ್ಲ. ಹಾಗಾಗಿ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಿ ಆಲಂ ಪಾಷ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಇದೀಗ ವಜಾಗೊಂಡಿದೆ.