* ರೋಗನಿರೋಧಕ ಶಕ್ತಿ ಭೇದಿಸುತ್ತದೆ ಡೆಲ್ಟಾವೈರಸ್‌* 2ನೇ ಬಾರಿ ಸೋಂಕು ಹರಡಿಸುವ ಶಕ್ತಿ* ಅಧ್ಯಯನದಲ್ಲಿ ಬಹಿರಂಗ

ಹೈದರಾಬಾದ್‌(ಜೂ.20): ಕೊರೋನಾ ಒಮ್ಮೆ ಬಂದು ಗುಣಮುಖವಾದ ಬಳಿಕ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿ ಆಗುವುದರಿಂದ ಮತ್ತೊಮ್ಮೆ ಕೊರೋನಾ ಸೋಂಕು ತಗುಲುವ ಸಾಧ್ಯತೆ ಇಲ್ಲ ಎಂಬುದು ಈವರೆಗಿನ ನಂಬಿಕೆ. ಆದರೆ, ಡೆಲ್ಟಾವೈರಸ್‌ ಪ್ರಭೇದ ರೋಗನಿರೋಧಕ ಶಕ್ತಿಯನ್ನೂ ಭೇದಿಸಿ 2ನೇ ಬಾರಿ ಕೊರೋನಾ ಸೋಂಕು ಹರಡುವ ಸಾಮರ್ಥ್ಯ ಹೊಂದಿದೆ ಎಂಬ ಆತಂಕಕಾರಿ ಸಂಗತಿ ಅಧ್ಯಯನವೊಂದರಿಂದ ತಿಳಿದುಬಂದಿದೆ.

3ನೇ ಅಲೆಯಲ್ಲಿ ರಾಜ್ಯದ 1-1.5 ಲಕ್ಷ ಮಕ್ಕಳಿಗೆ ಸೋಂಕು: ಡಾ|ದೇವಿಶೆಟ್ಟಿ ಸಮಿತಿ ವರದಿ!

ಅಹಮದಾಬಾದ್‌ನ ಮುಖ್ಯ ಅಗ್ನಿಶಾಮಕ ಅಧಿಕಾರಿ ರಾಜೇಶ್‌ ದತ್‌ ಎನ್ನುವವರು ಮೊದಲ ಬಾರಿ ಕೊರೋನಾ ಸೋಂಕಿಗೆ ತುತ್ತಾದ 30 ದಿನಗಳ ಅಂತರದಲ್ಲೇ ಮತ್ತೊಮ್ಮೆ ಕೊರೋನಾ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲ ಬಾರಿ ಸೋಂಕಿತರಾಗಿದ್ದಾಗ ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ, 2ನೇ ಬಾರಿ ಸೋಂಕಿತರಾದಾಗ 13 ದಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪ್ರಕರಣವನ್ನು ಗುಜರಾತ್‌ ಬಯೋಟೆಕ್ನಾಲಜಿ ಸಂಶೋಧನಾ ಸಂಸ್ಥೆ (ಜಿಬಿಆರ್‌ಸಿ) ಅಧ್ಯಯನ ನಡೆಸಿದ ವೇಳೆ ರಾಜೇಶ್‌ ದತ್‌ 2ನೇ ಬಾರಿಗೆ ಸೋಂಕಿಗೆ ತುತ್ತಾಗಲು ಡೆಲ್ಟಾವೈರಸ್‌ ಪ್ರಭೇದ ಕಾರಣ ಎಂಬ ಸಂಗತಿ ತಿಳಿದುಬಂದಿದೆ.

ಡೆಲ್ಟಾವೈರಸ್‌ನಲ್ಲಿ ಆಗಿರುವ ಬದಲಾವಣೆಯಿಂದಾಗಿ ಅದು ಸೋಂಕಿನ ಚೇತರಿಕೆಯಿಂದ ಅಥವಾ ಲಸಿಕೆ ಪಡೆದಿದ್ದರಿಂದ ಉಂಟಾದ ರೋಗ ನಿರೋಧಕ ಶಕ್ತಿಯನ್ನು ಡೆಲ್ಟಾವೈರಸ್‌ ಭೇದಿಸಬಲ್ಲದು ಎಂದು ಅಧ್ಯಯನದಿಂದ ತಿಳಿದುಬಂದಿದೆ.

\ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona