ಆಪ್ ಶಾಸಕ ಅಮಾನತುಲ್ಹಾ ಖಾನ್ ಬಂಧನ, 5 ಕಡೆ ದಾಳಿ ನಡೆಸಿ ಅಕ್ರಮ ಪಿಸ್ತೂಲ್, ನಗದು ವಶ!

ದೆಹಲಿ ಆಮ್ ಆದ್ಮಿ ಪಾರ್ಟಿ ಸಂಕಷ್ಟ ಹೆಚ್ಚಾಗಿದೆ. ಒಬ್ಬೊಬ್ಬ ನಾಯಕರೇ ಇದೀಗ ಜೈಲು ಸೇರುತ್ತಿದ್ದಾರೆ. ಸತ್ಯಪಾಲ್ ಜೈನ್ ಬಳಿಕ ಇದೀಗ ಆಪ್ ಶಾಸಕ ಅಮಾನತುಲ್ಹಾ ಖಾನ್ ಅರೆಸ್ಟ್ ಆಗಿದ್ದಾರೆ. ಖಾನ್ ಸೇರಿದ 5 ಕಡೆಗಳಲ್ಲಿ ದಾಳಿ ನಡೆಸಿದ ಪೊಲೀಸರು ಅಕ್ರಮ ಪಿಸ್ತೂಲ್ ಹಾಗೂ ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

Delhi Waqf Board corruption case AAP MLA Amanatullah Khan arrested by ACB ckm

ನವದೆಹಲಿ(ಸೆ.16):  ಆಮ್ ಆದ್ಮಿ ಪಾರ್ಟಿ ನಾಯಕರ ಜೈಲು ಪರೇಡ್ ಮುಂದುವರಿದಿದೆ. ಸಚಿವ ಸತ್ಯಪಾಲ್ ಜೈನ್ ಜೈಲು ಸೇರಿದ ಬಳಿಕ ಇದೀಗ ದೆಹಲಿ ಆಪ್ ಶಾಸಕ ಅಮಾನತುಲ್ಹಾ ಖಾನ್ ಅರೆಸ್ಟ್ ಆಗಿದ್ದಾರೆ. ವಕ್ಫ್ ಬೋರ್ಡ್‌ನಲ್ಲಿ ನಡೆಸಿದ ಭ್ರಷ್ಟಾಚಾರ ಪ್ರಕರಣದಡಿ ಅಮಾನತುಲ್ಹಾ ಬಂಧನಕ್ಕೊಳಗಾಗಿದ್ದಾರೆ. 2 ವರ್ಷಗಳ ಹಿಂದಿನ ಪ್ರಕರಣದಲ್ಲಿ ಇದೀಗ ಆಪ್ ನಾಯಕ ಜೈಲು ಸೇರಿದ್ದಾರೆ. ಇಂದು ಬೆಳಗ್ಗೆ ಅಮಾತುಲ್ಹಾ ಖಾನ್ ಸೇರಿದ 5 ಕಡೆಗಳಲ್ಲಿ ಎಸಿಬಿ ದಾಳಿ ಮಾಡಿತ್ತು. ಈ ವೇಳೆ ಅಕ್ರಮ ಪಿಸ್ತೂಲ್ ಹಾಗೂ 12 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.  ಗುರುವಾರ ಭ್ರಷ್ಟಾಚಾರ ನಿಗ್ರಹ ದಳ ಅಮಾನತುಲ್ಹಾ ಖಾನ್‌ಗೆ ವಿಚಾರಣೆಗೆ ಆಗಮಿಸಲು ನೋಟಿಸ್ ನೀಡಿತ್ತು. ಶುಕ್ರವಾರ 12 ಗಂಟೆಯಿಂದ ವಿಚಾರಣೆ ಆರಂಭಿಸಿದ ಎಸಿಬಿ, ಮಹತ್ವದ ಮಾಹಿತಿ ಕಲೆ ಹಾಕಿತ್ತು. ಬಳಿಕ ಅಮಾನತುಲ್ಹಾ ಖಾನ್ ಅವರನ್ನು ಬಂಧಿಸಿದೆ. 

1000 ಬಸ್‌ ಖರೀದಿ: ದೆಹಲಿ ಸರ್ಕಾರಕ್ಕೆ ಸಿಬಿಐ ತನಿಖೆ ಬಿಸಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಳ್ವಿಕೆ ನಡೆಸುತ್ತಿರುವ ಅರವಿಂದ್‌ ಕೇಜ್ರಿವಾಲ್‌(Arvind Kejriwal) ನೇತೃತ್ವದ ಆಮ್‌ ಆದ್ಮಿ ಪಕ್ಷದ(AAP) ಸರ್ಕಾರಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಅಬಕಾರಿ ನೀತಿ ವಿಚಾರದಲ್ಲಿ ಗೋಲ್‌ಮಾಲ್‌ ಆಗಿದೆ ಎಂಬ ಆರೋಪ ಸಂಬಂಧ ಸಿಬಿಐ ದಾಳಿ ನಡೆದ ಬೆನ್ನಲ್ಲೇ, ಆಪ್‌ ಸರ್ಕಾರ 1000 ಬಸ್‌ ಖರೀದಿ ವಿಚಾರದಲ್ಲಿ ಅವ್ಯವಹಾರ ನಡೆಸಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಉಪರಾಜ್ಯಪಾಲರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.

ಸಿಎಂ ಭಗವಂತ್ ಮಾನ್‌ಗೆ ತೀವ್ರ ಮುಖಭಂಗ, ಪಂಜಾಬ್‌ನಲ್ಲಿ ಹೂಡಿಕೆ ವರದಿ ಸುಳ್ಳು BMW ಸ್ಪಷ್ಟನೆ!

ಅಹಮದಾಬಾದ್‌ ಆಪ್‌ ಕಚೇರಿ ಮೇಲೆ ಪೊಲೀಸ್‌ ದಾಳಿ: ಆಪ್‌ ಆರೋಪ
ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರು 2 ದಿನಗಳ ಭೇಟಿಗಾಗಿ ಭಾನುವಾರ ಸಂಜೆ ನಗರಕ್ಕೆ ಬಂದಿಳಿದ ವೇಳೆ ಪಕ್ಷದ ನವರಂಗ್‌ಪುರದಲ್ಲಿನ ದತ್ತಾಂಶ ನಿರ್ವಹಣಾ ಕಚೇರಿ ಮೇಲೆ ಪೊಲೀಸರು ಅಕ್ರಮವಾಗಿ ದಾಳಿ ನಡೆಸಿದ್ದಾರೆ ಎಂದು ಆಮ್‌ಆದ್ಮಿ ಪಕ್ಷ ಆರೋಪಿಸಿದೆ. ವಾರಂಟ್‌ ಇಲ್ಲದೆಯೇ 2 ಗಂಟೆಗಳ ಪೊಲೀಸರು ಕಚೇರಿಯನ್ನು ಪೂರ್ಣ ತಪಾಸಣೆ ಮಾಡಿದ್ದಾರೆ. ಸಿಬ್ಬಂದಿಯನ್ನೂ ವಿಚಾರಣೆಗೆ ಗುರಿಪಡಿಸಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಉತ್ತರ ನೀಡಲು ಸಿದ್ಧರಿದ್ದರೆ ದಾಳಿ ಕುರಿತು ಸಾಕ್ಷ್ಯ ನೀಡಲು ನಾವು ಸಿದ್ಧ ಎಂದು ಆಪ್‌ ಹೇಳಿದೆ. ಆದರೆ ಇಂಥ ಯಾವುದೇ ದಾಳಿ ನಡೆಸಿಲ್ಲ ಎಂದು ಪೊಲೀಸರು ಸ್ಪಷ್ಪಪಡಿಸಿದ್ದಾರೆ.

 

Punjab AAP ಶಾಸಕರ ಖರೀದಿಗೆ ಆಪರೇಷನ್ ಕಮಲ , ಬಿಜೆಪಿ ವಿರುದ್ಧ ಕೇಜ್ರಿವಾಲ್ ಕಿಡಿ!

ಆಪ್‌ಗೆ ಇನ್ನೊಂದು ಸಂಕಷ್ಟ: ಕ್ಲಾಸ್‌ರೂಂ ನಿರ್ಮಾಣದಲ್ಲಿ ಅಕ್ರಮ?
ಅಬಕಾರಿ ಗುತ್ತಿಗೆ ನೀಡಿಕೆ ಹಗರಣದ ಬಳಿಕ ದಿಲ್ಲಿಯ ಅರವಿಂದ ಕೇಜ್ರಿವಾಲ್‌ ನೇತೃತ್ವದ ಸರ್ಕಾರಕ್ಕೆ ಈಗ ಶಾಲೆಗಳ ಕ್ಲಾಸ್‌ರೂಂ ನಿರ್ಮಾಣ ಅಕ್ರಮದ ಉರುಳು ಸುತ್ತಿಕೊಳ್ಳುವ ಸಾಧ್ಯತೆ ಇದೆ. ‘ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಕ್ಲಾಸ್‌ರೂಂ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ 2.5 ವರ್ಷ ಆದರೂ ಏಕೆ ವಿಚಕ್ಷಣ ಆಯೋಗದ ವರದಿ ಆಧರಿಸಿ ಕ್ರಮ ಕೈಗೊಂಡಿಲ್ಲ?’ ಎಂದು ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಅವರು ದಿಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ವರದಿ ಬಯಸಿದ್ದಾರೆ.
 

Latest Videos
Follow Us:
Download App:
  • android
  • ios