ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ಅಲುಗಾಡಿಸಲು ಬಿಜೆಪಿ ಯತ್ನಿಸುತ್ತಿದೆ  ಎಂದು ಆರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. 10 ಶಾಸಕರನ್ನು ಖರೀದಿಗೆ ಬಿಜೆಪಿ ಕೋಟಿ ಕೋಟಿ ರೂಪಾಯಿ ಸುರಿಯುತ್ತಿದೆ. ಈ ಕುರಿತು ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದ್ದಾರೆ.

ನವದೆಹಲಿ(ಸೆ.14): ಆಮ್ ಆದ್ಮಿ ಪಾರ್ಟಿ ಹಾಗೂ ಬಿಜೆಪಿ ನಡುವಿನ ತಿಕ್ಕಾಟ ಇದೀಗ ಮತ್ತೊಂದು ದಾರಿಯಲ್ಲಿ ಸಾಗುತ್ತಿದೆ. ಇದೀಗ ಪಂಜಾಬ್‌ನಲ್ಲಿ ಆಪ್ ಸರ್ಕಾರ ಅಲುಗಾಡಿಸಲು ಬಿಜೆಪಿ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಬಿಜೆಪಿ ಸೇರಲು ಮುಖಂಡರು ತಮ್ಮನ್ನು ಸಂಪರ್ಕಿಸಿದ್ದಾರೆ. ಕೋಟಿ ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದು ಪಂಜಾಬ್‌ನ 10 ಆಪ್ ಶಾಸಕರು ಹೇಳಿದ್ದಾರೆ. ಇದರ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್, ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಬಿಜೆಪಿ ಸರ್ಕಾರವನ್ನು ಬೀಳಿಸಲು ಇನ್ನಿಲ್ಲದ ಯತ್ನ ಮಾಡುತ್ತಿದೆ. ದೆಹಲಿಯಲ್ಲಿ ಏನೂ ಮಾಡಲು ಸಾಧ್ಯವಾಗದ ಕಾರಣ ಇದೀಗ ಬಿಜೆಪಿ ಪಂಜಾಬ್‌ನಲ್ಲಿ ಸರ್ಕಾರ ಉರುಳಿಸುವ ಯತ್ನ ಮಾಡುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಬಿಜೆಪಿ(BJP) ಈಗಾಗಲೇ ಹಲವು ರಾಜ್ಯಗಳಲ್ಲಿ ಇತರ ಪಕ್ಷಗಳ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸುತ್ತಿದೆ. ಇದೇ ತಂತ್ರವನ್ನು ದೆಹಲಿ(Delhi) ಹಾಗೂ ಪಂಜಾಬ್‌ನಲ್ಲಿ(Punjab) ಮಾಡಲು ಹೊರಟಿದೆ ಎಂದು ಅರವಿಂದ್ ಕೇಜ್ರಿವಾಲ್(Arvind Kejriwal) ಹೇಳಿದ್ದಾರೆ. ಆಪ್(AAP) ಜನರಿಂದ ಆಯ್ಕೆಯಾದ ಸರ್ಕಾರ. ಇಲ್ಲಿನ ಶಾಸಕರು ಆಮಿಷಗಳಿಗೆ ಬಲಿಯಾಗುವುದಿಲ್ಲ. ಬಿಜೆಪಿ ಪಕ್ಷದ ಸರ್ಕಸ್ ಆಮ್ ಆದ್ಮಿ ಪಾರ್ಟಿ ಮುಂದೆ ನಡೆಯುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಆಟೋ ಚಾಲಕನ ಮನೆಗೆ ಊಟಕ್ಕೆ ಹೋಗುವಾಗ ತಡೆದ ಪೊಲೀಸ್‌, ಜನರ ಜೊತೆ ಇರಲು ಬಿಡಿ ಎಂದ ಕೇಜ್ರಿವಾಲ್‌

ಆಮ್ ಆದ್ಮಿ ಪಂಜಾಬ್ ಶಾಸಕರಾದ ದಿನೇಶ್ ಚಡ್ಡಾ, ರಾಮನ್ ಆರೋರ, ಬುದ್ಧ್ ರಾಮ್, ಕುಲ್ವಂತ್ ಪಂಡೋರಿ, ನರೀಂದರ್ ಕೌರ್ ಭಾರಜ್, ರಾಜ್‌ನೀಶ್ ದಹಿಯಾ, ರೂಪಿಂದರ್ ಸಿಂಗ್ ಹ್ಯಾಪಿ, ಶೀತಲ್ ಅಂಗುರಲ್, ಮಂಜಿತ್ ಸಿಂಗ್ ಬಿಲಾಸಪುರ್, ಲಬ್ ಸಿಂಗ್ ಉಗೋಕೆ ಹಾಗೂ ಬಲ್ಜಿಂದರ್ ಕೌರ್ ಅವರನ್ನು ಬಿಜೆಪಿ ಸಂಪರ್ಕಿಸಿದೆ(Operation Lotus). ಕೋಟಿ ಕೋಟಿ ರೂಪಾಯಿ ಆಫರ್ ನೀಡಲಾಗುತ್ತಿದೆ ಎಂದು ಪಂಜಾಬ್ ಸಚಿವ ಹರ್ಪಾಲ್ ಚೀಮಾ ಹೇಳಿದ್ದಾರೆ.

ಅಹಮದಾಬಾದ್‌ ಆಪ್‌ ಕಚೇರಿ ಮೇಲೆ ಪೊಲೀಸ್‌ ದಾಳಿ: ಆಪ್‌ ಆರೋಪ
ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರು 2 ದಿನಗಳ ಭೇಟಿಗಾಗಿ ಭಾನುವಾರ ಸಂಜೆ ನಗರಕ್ಕೆ ಬಂದಿಳಿದ ವೇಳೆ ಪಕ್ಷದ ನವರಂಗ್‌ಪುರದಲ್ಲಿನ ದತ್ತಾಂಶ ನಿರ್ವಹಣಾ ಕಚೇರಿ ಮೇಲೆ ಪೊಲೀಸರು ಅಕ್ರಮವಾಗಿ ದಾಳಿ ನಡೆಸಿದ್ದಾರೆ ಎಂದು ಆಮ್‌ಆದ್ಮಿ ಪಕ್ಷ ಆರೋಪಿಸಿದೆ. ವಾರಂಟ್‌ ಇಲ್ಲದೆಯೇ 2 ಗಂಟೆಗಳ ಪೊಲೀಸರು ಕಚೇರಿಯನ್ನು ಪೂರ್ಣ ತಪಾಸಣೆ ಮಾಡಿದ್ದಾರೆ. ಸಿಬ್ಬಂದಿಯನ್ನೂ ವಿಚಾರಣೆಗೆ ಗುರಿಪಡಿಸಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಉತ್ತರ ನೀಡಲು ಸಿದ್ಧರಿದ್ದರೆ ದಾಳಿ ಕುರಿತು ಸಾಕ್ಷ್ಯ ನೀಡಲು ನಾವು ಸಿದ್ಧ ಎಂದು ಆಪ್‌ ಹೇಳಿದೆ. ಆದರೆ ಇಂಥ ಯಾವುದೇ ದಾಳಿ ನಡೆಸಿಲ್ಲ ಎಂದು ಪೊಲೀಸರು ಸ್ಪಷ್ಪಪಡಿಸಿದ್ದಾರೆ.

Gujarat Election ಬಿಜೆಪಿಯಿಂದ ಹಣ ಪಡೆದು ಆಪ್‌ಗಾಗಿ ಕೆಲಸ ಮಾಡಿ, ಕೇಸರಿ ಕಾರ್ಯಕರ್ತರಿಗೆ ಕೇಜ್ರಿ ಟಿಪ್ಸ್!

ಸಿಸೋಡಿಯಾಗೆ ಭಾರತ ರತ್ನ ಸಿಗಬೇಕಿತ್ತು: ಕೇಜ್ರಿವಾಲ್‌
ದೆಹಲಿಯ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಸುಧಾರಣೆ ಮಾಡಿದ್ದಕ್ಕೆ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕಾಗಿತ್ತು, ಆದರೆ ಕೇಂದ್ರ ಸರ್ಕಾರವು ರಾಜಕೀಯ ಉದ್ದೇಶಗಳಿಂದಾಗಿ ಅವರನ್ನು ಪೀಡಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೋಮವಾರ ಕಿಡಿಕಾರಿದ್ದಾರೆ.