ಶೃಂಗೇರಿ ಮಠದ ಶಿಕ್ಷಣ ಸಂಸ್ಥೆ ಶ್ರೀ ಶಾರದಾ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯನ್ ಮ್ಯಾನೇಜ್‌ಮೆಂಟ್‌ ನಿರ್ದೇಶಕನೂ ಆಗಿದ್ದ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿದ್ಯಾರ್ಥಿನಿಯರಿಗೆ ಐಲವ್‌ ಯೂ... ಬೇಬಿ... ನೀನು ಸುಂದರವಾಗಿ ಕಾಣ್ತಿದ್ದಿ... ಎಂಬ ಸಂದೇಶಗಳನ್ನು ಕಳುಹಿಸುತ್ತಿದ್ದ ವಿಚಾರ ಇದೀಗ ಬಯಲಾಗಿದೆ.

ನವದೆಹಲಿ: ಸ್ವಯಂಘೋಷಿತ ದೇವಮಾನವ, ಶೃಂಗೇರಿ ಮಠದ ಶಿಕ್ಷಣ ಸಂಸ್ಥೆ ಶ್ರೀ ಶಾರದಾ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯನ್ ಮ್ಯಾನೇಜ್‌ಮೆಂಟ್‌ ನಿರ್ದೇಶಕನೂ ಆಗಿದ್ದ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿದ್ಯಾರ್ಥಿನಿಯರಿಗೆ ಐಲವ್‌ ಯೂ... ಬೇಬಿ... ನೀನು ಸುಂದರವಾಗಿ ಕಾಣ್ತಿದ್ದಿ... ಎಂಬ ಸಂದೇಶಗಳನ್ನು ಕಳುಹಿಸುತ್ತಿದ್ದ ವಿಚಾರ ಇದೀಗ ಬಯಲಾಗಿದೆ.

ಸ್ವಾಮೀಜಿ ವಿರುದ್ಧ 17 ವಿದ್ಯಾರ್ಥಿನಿಯರು ದಾಖಲಿಸಿದ್ದ ದೂರಿನ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಸ್ಕಾಲರ್‌ಶಿಪ್‌ ವಿಭಾಗದ ವಿದ್ಯಾರ್ಥಿಗಳನ್ನೇ ಗುರಿಯಾಗಿಟ್ಟುಕೊಂಡು ಸ್ವಾಮೀಜಿ ಲೈಂ*ಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿನಿಯರ ಸುರಕ್ಷತೆ ಹೆಸರಿನಲ್ಲಿ ಸ್ವಾಮೀಜಿ ಹಾಸ್ಟೆಲ್‌ನಲ್ಲಿ ಹಿಡನ್‌ ಕ್ಯಾಮೆರಾ ಅಳವಡಿಕೆ ಮಾಡಿದ್ದ, ವಿದ್ಯಾರ್ಥಿನಿಯರನ್ನು ಹೊತ್ತಲ್ಲದ ಹೊತ್ತಲ್ಲಿ ಕರೆಸಿಕೊಳ್ಳುತ್ತಿದ್ದ, ಐ ಲವ್‌ ಯೂ, ಬೇಬಿ, ನೀನು ಸುಂದರವಾಗಿ ಕಾಣಿಸ್ತಿದ್ದಿ.. ನಿನ್ನನ್ನು ನಾನು ನೆನಪು ಮಾಡಿಕೊಳ್ಳುತ್ತಿದ್ದೇನೆ... ನೀನು ಹಾಕಿರೋ ಡ್ರೆಸ್‌ ಚೆನ್ನಾಗಿದೆ... ಹೀಗೆ ಸ್ವಾಮೀಜಿ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಸಂದೇಶ ಕಳುಹಿಸುತ್ತಿದ್ದ. ಒಂದು ವೇಳೆ ತಾನು ಕಳುಹಿಸಿದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದಿದ್ದರೆ, ತನ್ನ ತೆವಲಿಗೆ ಸಹಕರಿಸದಿದ್ದರೆ ಅಂಥ ವಿದ್ಯಾರ್ಥಿಗಳಿಗೆ ಅಂಕ ಕಡಿತದಂಥ ಬೆದರಿಕೆಗಳನ್ನೂ ಹಾಕಿಸುತ್ತಿದ್ದ ಎಂದು ಆರೋಪಿಸಲಾಗಿದೆ.

2025ರ ಋಷಿಕೇಷ್‌ ಪ್ರವಾಸದ ವೇಳೆ ಸ್ವಾಮೀಜಿ ಹೊತ್ತಲ್ಲದ ಹೊತ್ತಲ್ಲಿ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಲೈಂ*ಕ ಕಿರುಕುಳ ನೀಡುತ್ತಿದ್ದ. ಇದಕ್ಕೆ ಪ್ರತಿರೋಧ ತೋರಿದವರಿಗೆ ಪರೀಕ್ಷೆ ಕೂರುವುದರಿಂದ ತಡೆಯಲಾಗುತ್ತಿತ್ತು ಅಥವಾ ಅವರ ಅಂಕಗಳನ್ನು ಕಡಿತ ಮಾಡಲಾಗುತ್ತಿತ್ತು ಎಂದು ಆರೋಪ ಮಾಡಲಾಗಿದೆ.

2009, 2016ರಲ್ಲೇ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿತ್ತಾದರೂ ಅದನ್ನು ತನ್ನ ಪ್ರಭಾವ ಬಳಸಿ ಅದರಿಂದ ಬಚಾವಾಗಿದ್ದ ಎಂದು ಹೇಳಲಾಗಿದೆ.

- ಸುರಕ್ಷತೆ ಹೆಸರಲ್ಲಿ ಹಾಸ್ಟೆಲ್‌ನಲ್ಲಿ ರಹಸ್ಯ ಕ್ಯಾಮೆರಾ

- ಬಡ ಮಕ್ಕಳನ್ನೇ ಗುರಿಯಾಗಿಸಿ ಲೈಂ*ಕ ಕಿರುಕುಳ

- ಸ್ಪಂದಿಸದೇ ಇದ್ದರೆ ಅಂಕ ಕಟ್‌, ಇತರೆ ಕಿರುಕುಳ