ಹೊಸ ವರ್ಷಕ್ಕೆ ಮತ್ತಷ್ಟು ಕಿಕ್, ದೆಹಲಿಯಲ್ಲಿ 24 ಗಂಟೆ ಬಾರ್, ಪಬ್, ರೆಸ್ಟೋರೆಂಟ್ ಒಪನ್!

ಹೊಸ ವರ್ಷಕ್ಕೆ ಪಾರ್ಟಿ ಜೋರಾಗಿದೆ. ಸಂಭ್ರಮ ಮುಗಿಲು ಮುಟ್ಟಿದೆ. ಇದರ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ಮಂದಿಗೆ ಮತ್ತೊಂದು ಸಿಹಿ ಸುದ್ದಿ. 24 ಗಂಟೆ ಪಬ್, ಬಾರ್, ರೆಸ್ಟೋರೆಂಟ್ ತೆರೆದಿಡಲು ಅವಕಾಶ ನೀಡಲಾಗಿದೆ. ಇಷ್ಟೇ ಅಲ್ಲ ಕಾರ್ಯಕ್ರಮ ಆಯೋಜನೆಗೂ ಅವಕಾಶ ನೀಡಿದೆ.

Delhi pub bar and restaurants hotels to operate day and night Lieutenant governor simplified licensing procedure ckm

ನವದೆಹಲಿ(ಡಿ.31): ಹೊಸ ವರ್ಷದ ಸಂಭ್ರಮ ಶುರುವಾಗಿದೆ.  2023ನೇ ಹೊಸ ವರ್ಷ ಬರಮಾಡಿಕೊಳ್ಳಲು ಉತ್ಸಾಹ ಹೆಚ್ಚಾಗಿದೆ. ಇದರ ನಡುವೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಮಹತ್ವದ ಆದೇಶ ನೀಡಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ಬೆನ್ನಲ್ಲೇ 24 ಗಂಟೆ ಪಬ್ ಬಾರ್ ಹಾಗೂ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಿದ್ದಾರೆ. 5 ಸ್ಟಾರ್, 4 ಸ್ಟಾರ್, ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಟೆಲ್, ರೆಸ್ಟೋರೆಂಟ್, ರೈಲು ನಿಲ್ದಾಣದಲ್ಲಿರುವ ಹೊಟೆಲ್, ರೆಸ್ಟೋರೆಂಟ್, ಬಸ್ ನಿಲ್ದಾಣದಲ್ಲಿರುವ ಹೊಟೆಲ್‌ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ದಾಖಲೆ ಪತ್ರಗಳ ಸಲ್ಲಿಕೆ ಹಾಗೂ ಅನುಮತಿ ಪತ್ರ ಪಡೆಯುವಿಕೆ ವಿಧಾನವನ್ನು ಸರಳೀಕರಣಗೊಳಿಸಲಾಗಿದೆ.

ಲೆಫ್ಟಿನೆಂಟ್ ಗವರ್ನರ್ ಈ ಆದೇಶ ದೆಹಲಿಯ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ. ರಾತ್ರಿ ವೇಳೆಯ ಆರ್ಥಿಕತೆಗೆ ಮತ್ತೆ ವೇಗ ಸಿಗಲಿದೆ. 21 ಪುಟಗಳ ಅರ್ಜಿಯನ್ನು ಇದೀಗ 9 ಪುಟಕ್ಕೆ ಇಳಿಸಲಾಗಿದೆ. ಇನ್ನು 28 ದಾಖಲೆ ಪತ್ರ ನೀಡಬೇಕಾದ ಬದಲು ಅತೀ ಕಡಿಮೆ ದಾಖಲೆ ಪತ್ರಗಳನ್ನು ನೀಡಿ ಅನುಮತಿ ಪಡೆದುಕೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ.

ಬಾರ್‌ಗಳಿಗೆ ಭುವನೇಶ್ವರಿ ಚಿತ್ರ: ಕ್ರಮಕ್ಕೆ ಕಸಾಪ ಆಗ್ರಹ

ಹೊಸ ವರ್ಷದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿರುವುದು ದೆಹಲಿಯ ಸಂಭ್ರಮ ಮತ್ತಷ್ಟು ಹೆಚ್ಚಿಸಿದೆ. ಇದರ ಜೊತೆಗೆ ಕೆಲ ಷರತ್ತುಗಳನ್ನು ಹಾಕಲಾಗಿದೆ. ಹೊಟೆಲ್ ಮಾದರಿ, ಸ್ಟಾರ್ ಅನುಸರಿಸಿ ಸಮಯಗಳನ್ನು ನಿಗಧಿಪಡಿಸಲಾಗಿದೆ. ಇದರ ಜೊತೆಗೆ ಅಗ್ನಿ ಸುರಕ್ಷತೆ ಸೇರಿದಂತೆ ಇತರ ಸುರಕ್ಷತಾ ವಿಧಾನಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸದ್ಯ ಈ ಆದೇಶ ಹೊರಡಿಸಲಾಗಿದೆ. ಇದು ದಾಖಲೆ ನೀಡುವಿಕೆ, ಅನುಮತಿ ಪಡೆಯಲು ಕನಿಷ್ಠ 3 ವಾರಗಳ ಅವಶ್ಯಕತೆ ಇದೆ. ಹೀಗಾಗಿ ಜನವರಿ ಅಂತಿಮ ವಾರದಲ್ಲಿ ಕಾರ್ಯರೂಪಕ್ಕೆ ಬರಲಿದೆ. 

ವಾರಂಟ್‌ ಇಲ್ಲದೇ ಬಾರ್‌ ಮೇಲೆ ದಾಳಿಗೆ ಹೈಕೋರ್ಚ್‌ ನಿರ್ಬಂಧ
ಮದ್ಯ ಮಾರಾಟಕ್ಕೆ ಮಾತ್ರ ಪರವಾನಗಿ ಪಡೆದಿದ್ದರೂ ಮದ್ಯಪಾನಕ್ಕೆ ಸ್ಥಳಾವಕಾಶ ಕಲ್ಪಿಸಿದ ಮತ್ತು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಿದ ಪ್ರಕರಣದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಾರಂಟ್‌ ಇಲ್ಲದೆ ಮದ್ಯದಂಗಡಿ ಮೇಲೆ ದಾಳಿ ನಡೆಸುವಂತಿಲ್ಲ ಎಂದು ಹೈಕೋರ್ಚ್‌ ಆದೇಶಿಸಿದೆ.

New Year 2023: ಪಬ್, ಬಾರ್‌ ರೆಸ್ಟೋರೆಂಟ್‌ಗಳಿಗೆ ಮಾರ್ಗಸೂಚಿ

ಸಿಎಲ್‌-2 ಪರವಾನಗಿ ಷರತ್ತು ಉಲ್ಲಂಘನೆ ಸಂಬಂಧ ತಮ್ಮ ಮದ್ಯದಂಗಡಿ ಮೇಲೆ ವಾರೆಂಟ್‌ ಇಲ್ಲದೆ ದಾಳಿ ನಡೆಸಿ ಬಳಿಕ ಎಫ್‌ಐಆರ್‌ ದಾಖಲಿಸಿದ ಅಬಕಾರಿ ಇನ್ಸ್‌ಪೆಕ್ಟರ್‌ ಕ್ರಮ ಪ್ರಶ್ನಿಸಿ ಕೊಪ್ಪಳದ ಎಂ.ಸುದರ್ಶನ ಗೌಡ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಸಿಎಲ್‌-2 ಪರವಾನಗಿದಾರರು ಪರವಾನಗಿ ಷರತ್ತು ಉಲ್ಲಂಘಿಘಿಸಿರುವ ಪ್ರಕರಣದಲ್ಲಿ ಅಬಕಾರಿ ನಿರೀಕ್ಷಕರು ವಾರಂಟ್‌ ಪಡೆದು ದಾಳಿ ನಡೆಸಬೇಕು. ಇಲ್ಲವೇ ಷರತ್ತು ಉಲ್ಲಂಘನೆಯಾಗಿದೆ ಎಂದು ತಿಳಿದುಬಂದರೆ, ಶೋಧ ನಡೆಸುವುದಕ್ಕೆ ಇರುವ ಅಗತ್ಯ ಕಾರಣಗಳನ್ನು ದಾಖಲಿಸಿದ ಬಳಿಕ ಮದ್ಯದಂಗಡಿ ಮೇಲೆ ದಾಳಿ ನಡೆಸಿ ಶೋಧ ಮಾಡಬಹುದು. ಜತೆಗೆ, ಅಲ್ಲಿ ಅಕ್ರಮ ನಡೆಯುತ್ತಿದ್ದರೆ ಜಪ್ತಿ ಕಾರ್ಯ ಮಾಡಬಹುದು. ಆದರೆ, ವಾರಂಟ್‌ ಇಲ್ಲದೆ ದಾಳಿ ನಡೆಸುವಂತಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ಅಭಿಪ್ರಾಯಟ್ಟಿದೆ.
 

Latest Videos
Follow Us:
Download App:
  • android
  • ios