ಕೆಂಪುಕೋಟೆ ಬಳಿ ನಡೆದ ಆತ್ಮಾಹುತಿ ದಾಳಿಯ ಉಗ್ರಜಾಲವನ್ನು ಭೇದಿಸುತ್ತಿರುವ ದೆಹಲಿ ಪೊಲೀಸರು, ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ  ವೈದ್ಯಕೀಯ ಪದವಿ ಪಡೆದು, ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಮಾಹಿತಿ ನೀಡುವಂತೆ ನೊಟೀಸ್‌ ಜಾರಿ ಮಾಡಿದ್ದಾರೆ.

ನವದೆಹಲಿ: ಕೆಂಪುಕೋಟೆ ಬಳಿ ನಡೆದ ಆತ್ಮಾಹುತಿ ದಾಳಿಯ ಉಗ್ರಜಾಲವನ್ನು ಭೇದಿಸುತ್ತಿರುವ ದೆಹಲಿ ಪೊಲೀಸರು, ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (ಯುಎಇಓ) ವೈದ್ಯಕೀಯ ಪದವಿ ಪಡೆದು, ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಮಾಹಿತಿ ನೀಡುವಂತೆ ದೆಹಲಿಯ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಶನಿವಾರ ನೊಟೀಸ್‌ ಜಾರಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಬಾಂಬ್‌ ಸ್ಫೋಟದಲ್ಲಿ ಅಲ್‌ ಫಲಾ ವಿವಿಯ ವೈದ್ಯರ ಕೈಚಳಕ

ಬಾಂಬ್‌ ಸ್ಫೋಟದಲ್ಲಿ ಅಲ್‌ ಫಲಾ ವಿವಿಯ ವೈದ್ಯರ ಕೈಚಳಕವಿರುವುದು ಹಾಗೂ ಅವರಿಗೆ ನಿಷೇಧಿತ ಉಗ್ರಸಂಘಟನೆ ಜೈಷ್‌-ಎ-ಮೊಹಮ್ಮದ್‌ನ ನಂಟಿರುವುದು ದೃಢವಾದ ಬೆನ್ನಲ್ಲೇ, ತನಿಖಾಧಿಕಾರಿಗಳು ದೆಹಲಿ ವೈದ್ಯರ ಬೆನ್ನು ಹತ್ತಿದ್ದಾರೆ.

ಮಾಹಿತಿ ನೀಡುವಂತೆ ಆಸ್ಪತ್ರೆಗಳ ಆಡಳಿತ ಮಂಡಳಿಗಳಿಗೆ ನೊಟೀಸ್‌

 ಈ ಹಿನ್ನೆಲೆ ಪಾಕ್, ಬಾಂಗ್ಲಾ, ಚೀನಾ ಹಾಗೂ ಯುಎಇಯಲ್ಲಿ ಓದಿದ ವೈದ್ಯರ ಹೆಸರು ಮತ್ತು ಮಾಹಿತಿ ನೀಡುವಂತೆ ಆಸ್ಪತ್ರೆಗಳ ಆಡಳಿತ ಮಂಡಳಿಗಳಿಗೆ ಸೂಚಿಸಿದ್ದಾರೆ.

ಪ್ರಕರಣದಲ್ಲಿ ಈಗಾಗಲೇ ವೈದ್ಯರಾದ ಡಾ. ಶಾಹೀನ್‌, ಡಾ. ಮುಜಮ್ಮಿಲ್‌, ಡಾ. ಅದೀಲ್‌ರನ್ನು ಬಂಧಿಸಲಾಗಿದೆ.