ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಪತ್ರ ಶುರುವಾಗಿದೆ. ಕಾಂಗ್ರೆಸ್ ನಾಯಕ ಸೋನಿಯಾ ಗಾಂಧಿಗ ಪತ್ರ ಬರೆದು ಗಾಂಧಿ ಕುಟುಂಬವೇ ಕಾಂಗ್ರೆಸ್ ಮುನ್ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ನವದೆಹಲಿ (ಡಿ.12) ಕಾಂಗ್ರೆಸ್‌ನಲ್ಲಿ ಎಲ್ಲೆಡೆ ಕೋಲಾಹಲ ಶುರುವಾಗಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಅಲುಗಾಡುತ್ತಿದ್ದರೆ, ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರ್ಚಗೂ ಆಪತ್ತು ಎದುರಾಗಿದೆ. ಇದೀಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ಕೂಗು ಕೇಳಿಬರುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಬದಲು ಪ್ರಿಯಾಂಕಾ ವಾದ್ರಾ ಗಾಂಧಿಯನ್ನು ಕರೆತರಲು ಹೋರಾಟ ಆರಂಭಗೊಂಡಿದೆ. ಕಾಂಗ್ರೆಸ್ ಮುನ್ನಡೆಸಲು ಗಾಂಧಿ ಕುಟುಂಬವೇ ಬೇಕು ಎಂಬ ಜೋರಾದ ಕೂಗು ಕೇಳಿಬಂದಿದೆ. ಈ ಸಂಬಂಧ ಕಾಂಗ್ರೆಸ್ ಮಾಜಿ ಶಾಸಕ ಮೊಹಮ್ಮದ್ ಮೊಖಿಮ್ ಪತ್ರ ಬರೆದಿದ್ದಾರೆ.ಸೋನಿಯಾ ಗಾಂಧಿಗೆ ಪತ್ರ ಬರೆದು ಅಧ್ಯಕ್ಷರ ಬದಲಾವಣೆಗೆ ಆಗ್ರಹಿಸಿದ್ದಾರೆ.
ಖರ್ಗೆ ಬದಲಾವಣೆಗೆ ಕೆಲ ನಾಯಕರ ಆಗ್ರಹ
ಒಡಿಶಾ ಕಾಂಗ್ರೆಸ್ ನಾಯಕ ಮೊಹಮ್ಮದ್ ಮೊಖಿಮ್ ಈ ಪತ್ರ ಬರೆಯುವ ಮೂಲಕ ದೇಶಾದ್ಯಂತ ಭಾರಿ ಚರ್ಚೆ ಹುಟ್ಟು ಹಾಕಿದ್ದಾರೆ. ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯಿಂದ ಒಡಿಶಾದಲ್ಲಿ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ. ಹೀಗಾಗಿ ಪ್ರಿಯಾಂಕಾ ಗಾಂಧಿಯನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಲು ಆಗ್ರಹಿಸಿದ್ದಾರೆ. ಮೊಹಮ್ಮದ್ ಪತ್ರಕ್ಕೆ ಕೆಲ ನಾಯಕರು ಬೆಂಬಲ ಸೂಚಿಸಿದ್ದಾರೆ. ಪಾರ್ಟಿ ಸೋಲನ್ನೇ ಕಾಣುತ್ತಿದೆ. ಹೀಗಾಗಿ ಬದಲಾವಣೆ ಅಗತ್ಯ ಎಂದು ಕೆಲ ನಾಯಕರು ಧನಿಗೂಡಿಸಿದ್ದಾರೆ. ಆದರೆ ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಜಯದೇವ್ ಜೆನಾ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ ಈ ರೀತಿ ಅಸಂಬದ್ಧ ಪತ್ರ ಬರೆದು ಗೊಂದಲು ಸೃಷ್ಟಿಸಬಾರದು ಎಂದು ಮೊಹಮ್ಮದ್ ಮೊಖಿಮ್‌ಗೆ ಎಚ್ಚರಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಆಡಿದ ಮಾತಿಗೆ ಹಲವರು ಗರಂ
ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಿರೋಧ ಪಕ್ಷ ನಾಯಕರಾಗಿ ಕಾಂಗ್ರೆಸ್ ಅಭಿಪ್ರಾಯಗಳು, ಪ್ರಶ್ನೆಗಳನ್ನು ಸಮರ್ಥವಾಗಿ ಪ್ರಸ್ತತಪಡಿಸುತ್ತಿದ್ದರೆ. ರಾಹುಲ್ ಗಾಂಧಿಯಿಂದ ಪಕ್ಷದ ಅವನತಿಯಾಗುತ್ತಿದೆ ಅನ್ನೋ ಆರೋಪವನ್ನು ಒಪ್ಪಲು ಸಾಧ್ಯವಿಲ್ಲ.ಈ ಕುರಿತು ಕ್ಷಮೆ ಕೇಳುವಂತೆ ಒಡಿಶಾ ಕಾಂಗ್ರೆಸ್‌ನಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಜಯದೇವ್ ಜೆನಾ, ಒಡಿಶಾ ಮಾಜಿ ಸಂಸದ ಅನಂತ ಪ್ರಸಾದ್ ಸೇರಿದಂತೆ ಕೆಲ ನಾಯಕರು ಪ್ರಶ್ನಿಸಿದ್ದಾರೆ.
ಇದೇ ವೇಳೆ ಒಡಿಶಾ ಕಾಂಗ್ರೆಸ್ ನರಸಿಂಗ ಮಿಶ್ರಾ, ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಬೆಂಬಲ ಸೂಚಿಸಿದ್ದರೆ. ಕಾಂಗ್ರೆಸ್ ಅಧ್ಯಕ್ಷತೆಯಲ್ಲಿ ಹಲವು ಚುನಾವಣೆ ಸೋತಿರುವುದು ಮಾತ್ರವಲ್ಲ, ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ಕ್ಷೀಣಿಸುತ್ತಿದೆ. ಹೀಗಾಗಿ ಸೋಲು, ಅವನಿತಿಗೆ ನೈತಿಕ ಹೊಣೆ ಹೊತ್ತು ಅಧ್ಯಕ್ಷರು ರಾಜೀನಾಮೆ ನೀಡಬೇಕು. ಆದರೆ ಆಗಿಲ್ಲ, ಹೀಗಾಗಿ ಮೊಹಮ್ಮದ್ ಮೊಖಿಮ್ ಹೇಳಿದಂತೆ ಅದ್ಯಕ್ಷರ ಬದಲಾವಣೆ ಸೂಕ್ತ ಎಂದಿದ್ದಾರೆ. ಆದರೆ ಯಾರು ಅಧ್ಯಕ್ಷರಾಗಬೇಕು ಅನ್ನೋದು ಮಿಶ್ರಾ ಸ್ರಷ್ಟಪಡಿಸಿಲ್ಲ.


