ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಬಂಧಿತನಾಗಿರುವ ಫ್ಯಾಕ್ಟ್ ಚೆಕ್ ವೆಬ್‌ಸೈಟ್ ಆಲ್ಟ್ ನ್ಯೂಸ್‌ನ ಸಹಸಂಸ್ಥಾಪಕ ಮೊಹಮದ್ ಜುಬೇರ್ ವಿರುದ್ಧ ದೆಹಲಿ ಪೊಲೀಸ್ ಮತ್ತೆ ಮೂರು ಆರೋಪಗಳನ್ನು ಹೊರಿಸಿದೆ. ಇದರಲ್ಲಿ ಪ್ರಮುಖವಾಗಿ ಸಾಕ್ಷ್ಯ ನಾಶ ಹಾಗೂ ಅಕ್ರಮವಾಗಿ ವಿದೇಶಿ ದೇಣಿಗೆ ಪಡೆದ ಆರೋಪ ಹೊರಿಸಲಾಗಿದೆ. ಇದರ ನಡುವೆ ದೆಹಲಿ ಕೋರ್ಟ್ ಈತನ ಜಾಮೀನು ಅರ್ಜಿ ತಿರಸ್ಕರಿಸಿದ್ದು, ಇನ್ನು 14 ದಿನ ಜೈಲೇ ಗತಿಯಾಗಿದೆ.
ನವದೆಹಲಿ (ಜುಲೈ 2): ಆಲ್ಟ್ ನ್ಯೂಸ್ (Alt News) ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ (Mohammed Zubair) ವಿರುದ್ಧ ದೆಹಲಿ ಪೊಲೀಸರು (Delhi Police) ಇನ್ನಷ್ಟು ಹೊಸ ಕೇಸ್‌ಗಳನ್ನು ದಾಖಲಿಸಿದ್ದಾರೆ. 2018ರಲ್ಲಿ ಪೋಸ್ಟ್ ಮಾಡಿದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಟ್ವೀಟ್‌ನಲ್ಲಿ ದೆಹಲಿ ಪೊಲೀಸರು ಇವರನ್ನು ಮೊದಲ ಬಾರಿಗೆ ಬಂಧಿಸಿದ್ದರೂ, ಈಗ ಸಾಕ್ಷ್ಯ ನಾಶ, ಅಕ್ರಮ ವಿದೇಶಿ ದೇಣಿಗೆ ಪಡೆದ ಆರೋಪವನ್ನು ಅವರ ಮೇಲೆ ಹೊರಿಸಿದೆ.
ದೆಹಲಿ ಪೊಲೀಸರು ವಿದೇಶಿ ದೇಣಿಗೆ ಪಡೆದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 201 (ಸಾಕ್ಷ್ಯ ನಾಶಕ್ಕೆ ಕಾರಣವಾಗುವುದು), 120B (ಕ್ರಿಮಿನಲ್ ಪಿತೂರಿ), ಮತ್ತು ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ (FCRA) ಸೆಕ್ಷನ್ 35 ಅನ್ನು ಜುಬೇರ್ ಮೇಲೆ ಹಾಲಿದ್ದಾರೆ. ತನಿಖೆಯ ಭಾಗವಾಗಿ ತನಿಖಾಧಿಕಾರಿಗಳು ಜುಬೈರ್ ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಹಾರ್ಡ್ ಡಿಸ್ಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಂಧನಕ್ಕೆ ಒಳಗಾಗುವ ಉನ್ನ ಜುಬೇರ್ ತಮ್ಮ ಮೊಬೈಲ್‌ಅನ್ನು ಫಾರ್ಮಾಟ್ ಮಾಡಿದ್ದು, ಕೆಲವು ಟ್ವೀಟ್‌ಗಳನ್ನು ಅಳಿಸಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಜಾಮೀನು ಅರ್ಜಿ ತಿರಸ್ಕೃತ: ಇದರ ನಡುವೆ ಮೊಹಮದ್ ಜುಬೇರ್ ಜಾಮೀನು ಕೋರಿ ದೆಹಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ಕೋರ್ಟ್, ಅರ್ಜಿಯನ್ನು ತಿರಸ್ಕರಿಸಿದೆ. ಅದಲ್ಲದೆ, 14 ದಿನಗಳ ನ್ಯಾಯಾಂಗ ಬಂಧನವನ್ನೂ ವಿಧಿಸಿದೆ.
ಮೊಹಮ್ಮದ್ ಜುಬೇರ್ ಅವರನ್ನು ಜೂನ್ 27 ರಂದು ದೆಹಲಿ ಪೊಲೀಸರು ತಮ್ಮ ಟ್ವೀಟ್‌ಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಬಂಧಿಸಿದ್ದರು ಮತ್ತು ಅದೇ ದಿನ ವಿಚಾರಣಾ ನ್ಯಾಯಾಲಯವು ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಿತ್ತು. ಅದರ ಬೆನ್ನಲ್ಲಿಯೇ ದೆಹಲಿ ಪೊಲೀಸ್ ಐದು ದಿನಗಳ ಕಷ್ಟಡಿ ಅವಧಿ ನೀಡುವಂತೆ ಮನವಿ ಮಾಡಿದ ಬಳಿಕ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (CMM) ಅವರ ಕಸ್ಟಡಿಯನ್ನು ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಿತ್ತು.
ಆರಂಭದಲ್ಲಿ ಜುಬೈರ್ ವಿರುದ್ಧ IPC ಯ ಸೆಕ್ಷನ್ 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಮತ್ತು 295A (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.
120ಬಿ, IPC ಯ 201 ಮತ್ತು 35 FCRA ಸೆಕ್ಷನ್‌ಗಳನ್ನು ಸೇರಿಸುವುದರಿಂದ ಜಾರಿ ನಿರ್ದೇಶನಾಲಯವು ಜುಬೈರ್ ವಿರುದ್ಧ ಪ್ರಕರಣ ದಾಖಲಿಸಲು ದಾರಿ ಮಾಡಿಕೊಡುತ್ತದೆ. ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ) ನಿಗದಿತ ಅಪರಾಧವಾಗಿರುವುದರಿಂದ, ಹಣಕಾಸು ತನಿಖಾ ಸಂಸ್ಥೆಯು ಈಗ ಪ್ರಕರಣವನ್ನು ದಾಖಲಿಸುವ ಸಿದ್ಧತೆಯಲ್ಲಿದೆ.
ಧರ್ಮದ್ವೇಷದ ಟ್ವೀಟ್ ತನಿಖೆಗೆ ಪತ್ರಕರ್ತ ಅಸಹಕಾರ, ಜುಬೇರ್ 4 ದಿನ ಪೊಲೀಸ್ ವಶಕ್ಕೆ!
ಜುಬೈರ್ ಆರಂಭಿಸಿದ 'ಟ್ವಿಟ್ಟರ್ ಸ್ಟ್ರೋಮ್ಸ್' ನಲ್ಲಿ ಭಾಗಿಯಾಗಿದ್ದ ಟ್ವಿಟರ್ ಪ್ರೊಫೈಲ್‌ಗಳ ಪಾತ್ರವನ್ನು ದೆಹಲಿ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಕೆಲವು ಟ್ವೀಟ್‌ಗಳನ್ನು ಇತ್ತೀಚೆಗೆ ಅಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಅದರ ಜಾಡು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಈ ವಾರದ ಆರಂಭದಲ್ಲಿ, ಜುಬೈರ್‌ನ ಖಾತೆ ವಿವರಗಳು ಮತ್ತು ಇತರ ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿ ಕೋರಿ ಪೊಲೀಸರು ಅನೇಕ ಬ್ಯಾಂಕ್‌ಗಳಿಗೆ ಪತ್ರ ಬರೆದಿದ್ದರು.
ನೂಪುರ್ ಶರ್ಮ ಅವಾಂತರಕ್ಕೆ ಕಾರಣವಾದ ಮೊಹಮದ್ ಜುಬೇರ್ ಖಾತೆಯಲ್ಲಿ 3 ತಿಂಗಳಲ್ಲಿ 50 ಲಕ್ಷ ಠೇವಣಿ!
ವಿದೇಶದಿಂದ 2.31 ಲಕ್ಷ ದೇಣಿಗೆ: ಮೊಹಮದ್ ಜುಬೇರ್ ತಮ್ಮ ವೆಬ್‌ಸೈಟ್‌ಗಾಗಿ ವಿದೇಶದ ಬಹುತೇಕ ದೇಶಗಳಿಂದ ದೇಣಿಗೆ ಪಡೆದುಕೊಂಡಿದ್ದು ಅವರ ಒಟ್ಟಾರೆ ದೇಣಿಗೆ ಮೊತ್ತ 2.31 ಲಕ್ಷ 933 ರೂಪಾಯಿ ಎಂದು ಹೇಳಲಾಗಿದೆ. ಇವುಗಳಲ್ಲಿ ಬ್ಯಾಂಕಾಕ್, ಆಸ್ಟ್ರೇಲಿಯಾ, ಮನಾಮ, ಉತ್ತರ ಹಾಲೆಂಡ್, ಸಿಂಗಾಪುರ, ವಿಕ್ಟೋರಿಯಾ, ನ್ಯೂಯಾರ್ಕ್, ಇಂಗ್ಲೆಂಡ್, ರಿಯಾದ್ ಪ್ರದೇಶ, ಶಾರ್ಜಾ, ಸ್ಟಾಕ್‌ಹೋಮ್, ಅಬುಧಾಬಿ, ವಾಷಿಂಗ್ಟನ್, ಕಾನ್ಸಾಸ್, ನ್ಯೂಜೆರ್ಸಿ, ಒಂಟಾರಿಯೊ, ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಲೋವರ್ ಸ್ಯಾಕ್ಸೋನಿ, ಬರ್ನ್, ದುಬೈ, ಉಸಿಮಾ, ಸ್ಕಾಟ್ಲೆಂಡ್ ಸೇರಿಸಲಾಗಿದೆ. ಒಟ್ಟಾರೆಯಾಗಿ ಪ್ರಾವ್ಡಾ ಮೀಡಿಯಾ ಈ ದೇಶಗಳು ಮತ್ತು ನಗರಗಳಿಂದ ಸುಮಾರು 2 ಲಕ್ಷದ 31 ಸಾವಿರದ 933 ರೂಪಾಯಿ ಹಣವನ್ನು ಪಡೆದಿದೆ.
