ನೂಪುರ್ ಶರ್ಮ ಅವಾಂತರಕ್ಕೆ ಕಾರಣವಾದ ಮೊಹಮದ್ ಜುಬೇರ್ ಖಾತೆಯಲ್ಲಿ 3 ತಿಂಗಳಲ್ಲಿ 50 ಲಕ್ಷ ಠೇವಣಿ!

ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ನೂಪುರ್ ಶರ್ಮ ಹೇಳಿಕೆಯ ಸಂಪೂರ್ಣ ಅವಾಂತರಕ್ಕೆ ಕಾರಣವಾಗಿದ್ದ ಫ್ಯಾಕ್ಟ್‌ ಚೆಕ್ ವೆಬ್ ಸೈಟ್ ಆಲ್ಟ್‌ ನ್ಯೂಸ್‌ನ ಸಹಸಂಸ್ಥಾಪಕ ಮೊಹಮದ್ ಜುಬೇರ್ ಅವರನ್ನು ದೆಹಲಿ ಪೊಲೀಸ್ ಸೋಮವಾರ ಬಂಧನ ಮಾಡಿದೆ. ಇದರ ಬೆನ್ನಲ್ಲಿಯೇ ಜುಬೇರ್ ಖಾತೆಯಲ್ಲಿ ಕಳೆದ 3 ತಿಂಗಳಲ್ಲಿ 50 ಲಕ್ಷ ಹಣ ಠೇವಣಿಯಾಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
 

Alt News co founder Mohammed Zubair received more than 50 lakhs in last 3 months another co founder Pratik Sinha denies san

ನವದೆಹಲಿ (ಜೂನ್ 28): ಪ್ರವಾದಿ ಮೊಹಮದ್ ಪೈಗಂಬರ್ (prophet muhammad paigambar) ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದ ಕಾರಣಕ್ಕೆ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮ (Nupur Sharma) ವಿರುದ್ಧ ನಡೆದ ವಿಶ್ವವ್ಯಾಪಿ ಪ್ರತಿಭಟನೆಗಳು ನಡೆದಿದ್ದವು. ಈ ವಿವಾದದ ವೇಳೆ ಮಾತನಾಡಿದ್ದ ನೂಪುರ್ ಶರ್ಮ, ತಾನು ಹೇಳಿದ್ದ ವಿವಾದಿತ ಅಂಶವನ್ನು ಮಾತ್ರವೇ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮದ್ ಜುಬೇರ್ (Mohammed Zubair) ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಹೇಳಿದ್ದರು. ಇಂಥ ಮೊಹಮದ್ ಜುಬೇರ್‌ಅನ್ನು ದೆಹಲಿ ಪೊಲೀಸರು (Delhi Police) ಸೋಮವಾರ ಬಂಧಿಸಿದ್ದಾರೆ.

ಆಲ್ಟ್‌ ನ್ಯೂಸ್ (Alt News) ಎನ್ನುವುದು ಫ್ಯಾಕ್ಟ್‌ ಚೆಕ್ ವೆಬ್ ಸೈಟ್‌. ಪ್ರವಾದಿ ಬಗ್ಗೆ ನೂಪುರ್ ಶರ್ಮ ಖಾಸಗಿ ಟಿವಿಯಲ್ಲಿ ಮಾತನಾಡಿದ್ದ ವಿಡಿಯೋದ ವಿವಾದಿತ ಅಂಶವನ್ನ ತೆಗೆದು ಜುಬೇರ್‌ ಪೋಸ್ಟ್‌ ಮಾಡಿದ್ದರು. ಇದು ದೊಡ್ಡ ವಿವಾದವಾದ ಬಳಿಕ ಮಾತನಾಡಿದ್ದ ನೂಪುರ್ ಶರ್ಮ, ತನಗೇನಾದರೂ ಅಪಾಯವಾದಲ್ಲಿ ಅದಕ್ಕೆ ಜುಬೇರ್ ಕಾರಣ ಎಂದು ನೇರವಾಗಿ ಹೇಳಿದ್ದರು. ಆದರೆ, ಮೊಹಮದ್ ಜುಬೇರ್ ಅವರನ್ನು ಬಂಧನ ಮಾಡಿರುವುದು ಈ ಪ್ರಕರಣದಲ್ಲಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಜುಬೇರ್‌ರನ್ನು ಬಂಧಿಸಲಾಗಿದ್ದು, ಇದರ ನಡುವೆ ಅವರ ಖಾತೆಯೆಲ್ಲಿ ಕಳೆದ 3 ತಿಂಗಳಲ್ಲಿ 50 ಲಕ್ಷ ಠೇವಣಿಯಾಗಿದೆ ಎನ್ನುವ ಮಾಹಿತಿಯೂ ಹೊರಬಿದ್ದಿದೆ.

ಕಳೆದ ಮೂರು ತಿಂಗಳಲ್ಲಿ ಈತನ ಖಾತೆಯಲ್ಲಿ 50 ಲಕ್ಷ ರೂಪಾಯಿಗಿಂತ  ಹೆಚ್ಚಿನ ಹಣ ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ತಮ್ಮ ಟ್ವೀಟ್‌ಗಳಲ್ಲಿ ಧಾರ್ಮಿಕ ಭಾವನೆಯನ್ನು ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಜುಬೇರ್‌ನನ್ನು ದೆಹಲಿ ಪೊಲೀಸ್‌ನ ಸೈಬರ್ ಯುನಿಟ್‌ ಬಂಧಿಸಿದೆ.

ಹಣವನ್ನು ವರ್ಗಾಯಿಸಿದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಐಡಿ ಮತ್ತು ಅದನ್ನು ಯಾವುದಕ್ಕಾಗಿ ಬಳಸಲಾಗಿದೆ ಎಂಬುದನ್ನು ಒಳಗೊಂಡಂತೆ ಈ ವಹಿವಾಟುಗಳನ್ನು ತನಿಖೆ ಮಾಡುವುದಾಗಿ ದೆಹಲಿ ಪೊಲೀಸರು ಮಂಗಳವಾರ ಹೇಳಿದ್ದಾರೆ. ಜುಬೈರ್ ಕೂಡ ಸಾಕಷ್ಟು ದೇಣಿಗೆ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ. ಈ ದೇಣಿಗೆ ನೀಡಿದವರು ಯಾರು ಮತ್ತು ಇದರ ಹಿಂದಿನ ಉದ್ದೇಶದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸ್ ಇನ್ನೂ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಸ್ತರಣೆ ಮಾಡುವಂತೆ ಕೇಳಿಕೊಂಡಿದೆ.

ನಿರಾಕರಿಸಿದ ಪ್ರತೀಕ್ ಸಿನ್ಹಾ:  ಈ ನಡುವೆ ಕಳೆದ ಮೂರು ತಿಂಗಳಲ್ಲಿ ಮೊಹಮದ್ ಜುಬೇರ್ ಖಾತೆಯಲ್ಲಿ 50 ಲಕ್ಷಕ್ಕಿಂತ ಹೆಚ್ಚಿನ ಹಣ ಠೇವಣಿಯಾಗಿದೆ ಎನ್ನುವ ಬಗ್ಗೆ ಆಲ್ಟ್‌ ನ್ಯೂಸ್‌ನ ಮತ್ತೊಬ್ಬ ಸಹಸಂಸ್ಥಾಪಕ ಪ್ರತೀಕ್ ಸಿನ್ಹಾ ಕಿಡಿಕಾರಿದ್ದಾರೆ. 'ಇದು ಸಂಪೂರ್ಣ ಸುಳ್ಳಿನ ಕಂತೆ. ಆಲ್ಟ್‌ ನ್ಯೂಸ್ ಪಡೆದಿರುವ ದತ್ತಿ ಹಣವನ್ನು ಪೊಲೀಸರು ಜುಬೇರ್‌ಗೆ ಲಿಂಕ್ ಮಾಡುತ್ತಿದ್ದಾರೆ. ಆಲ್ಟ್‌ ನ್ಯೂಸ್ ಪಡೆದುಕೊಳ್ಳುವ ಎಲ್ಲಾ ಹಣ ಕೂಡ ಸಂಸ್ಥೆಯ ಬ್ಯಾಂಕ್‌ಗೆ ಹೋಗುತ್ತದೆ. ಯಾರದೇ ವೈಯಕ್ತಿಕ ವ್ಯಕ್ತಿಯ ಖಾತೆಗೆ ಹೋಗುವುದಿಲ್ಲ. ನನ್ನ ಬಳಿ ಇರುವ ಜುಬೈರ್ ಅವರ ವೈಯಕ್ತಿಕ ಖಾತೆಯ ಬ್ಯಾಂಕ್ ಸ್ಟೇಟ್‌ಮೆಂಟ್ ಈ ಸುಳ್ಳನ್ನು ತಳ್ಳಿಹಾಕುತ್ತದೆ' ಎಂದು ಟ್ವೀಟ್‌ ಮಾಡಿದ್ದಾರೆ.

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ, ಪತ್ರಕರ್ತ ಮೊಹಮ್ಮದ್ ಜುಬೇರ್ ಅರೆಸ್ಟ್!

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವ ಉದ್ದೇಶದಿಂದ) ಮತ್ತು 295A (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಅದರ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪತ್ರಕರ್ತನ ಮೇಲೆ ಆರೋಪ ಹೊರಿಸಲಾಗಿದೆ.

ಪ್ರವಾದಿ ಅವಹೇಳನ: ನೂಪುರ್‌ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

ಪೊಲೀಸರು ಯಾವುದೇ ನೋಟಿಸ್ ನೀಡದ ಪ್ರಕರಣದಲ್ಲಿ ಜುಬೈರ್ ಅವರನ್ನು ಬಂಧಿಸಲಾಗಿದೆ ಎಂದು ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಪ್ರತೀಕ್ ಸಿನ್ಹಾ ಆರೋಪಿಸಿದ್ದಾರೆ, ಇದು ಆತನನ್ನು ಬಂಧಿಸಿರುವ ಸೆಕ್ಷನ್‌ಗಳಿಗೆ ಕಾನೂನಿನಡಿಯಲ್ಲಿ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios