ಜಾಲಿ ರೈಡ್ ಹೋದ ಸ್ಪೈಡರ್‌ಮ್ಯಾನ್-ಸ್ಪೈಡರ್‌ವುಮೆನ್‌ಗೆ ಶಾಕ್, ವಿಡಿಯೋ ಪೋಸ್ಟ್ ಮಾಡಿ ಅರೆಸ್ಟ್ ಆದ ಜೋಡಿ!

ಸ್ಪೈಡರ್‌ಮ್ಯಾನ್ ಸಿನಿಮಾ ಬಳಿಕ ವಿಶೇಷ ಕಾರ್ಯಕ್ರಮಗಳಲ್ಲಿ ಇದೇ ರೀತಿ ಸ್ಪೈಡರ್ ಪ್ರತ್ಯಕ್ಷವಾಗುವುದು ಸಾಮಾನ್ಯವಾಗಿದೆ. ಇದೀಗ ಸ್ಪೈಡರ್‌ಮ್ಯಾನ್ ಮಾತ್ರವಲ್ಲ ಜೊತೆಗೆ ಸ್ಪೈಡರ್‌ವುಮೆನ್ ಕೂಡ ಪ್ರತ್ಯಕ್ಷವಾಗಿದ್ದಾರೆ. ಜೊತೆಯಾಗಿ ಜಾಲಿ ರೈಡ್ ಹೋದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
 

Delhi Police Arrest Spiderman Spiderwoman dressed couple who went bike ride ckm

ದೆಹಲಿ(ಏ.26) ಹಾಲಿವುಡ್ ಚಿತ್ರ ಸ್ಪೈಡರ್‌ಮ್ಯಾನ್ ಮಕ್ಕಳು ಸೇರಿದಂತೆ ಬಹುತೇಕರಿಗೆ ಅಚ್ಚುಮೆಚ್ಚಿನ ಚಿತ್ರ. ಈ ಚಿತ್ರದ ಜನಪ್ರಿಯತೆ ಬಳಿಕ ಕಾರ್ಯಕ್ರಮ ಸೇರಿದಂತೆ ಹಲವು ವಿಶೇಷ ಸಂದರ್ಭಗಳಲ್ಲಿ ಇದೇ ರೀತಿಯ ಸ್ಪೈಡರ್‌ಮ್ಯಾನ್ ಹಾದಿ ಬೀದಿಗಳಲ್ಲೂ ಪ್ರತ್ಯಕ್ಷವವಾಗಿದ್ದಾರೆ. ಇದೀಗ ಸ್ಪೈಡರ್‌ಮ್ಯಾನ್ ಜೊತೆಗೆ ಸ್ಪೈಡರ್‌ವುಮೆನ್ ಕೂಡ ಪ್ರತ್ಯಕ್ಷವಾಗಿದ್ದಾರೆ. ಇಷ್ಟೇ ಅಲ್ಲ ಬೈಕ್ ಹತ್ತಿ ಜಾಲಿ ರೈಡ್ ಹೊರಡಿದ್ದಾರೆ. ದೆಹಲಿಯ ದ್ವಾರಕ ರಸ್ತೆಯಲ್ಲಿ ರೈಡ್ ಹೋದ ಈ ಸ್ಪೈಡರ್ ಜೋಡಿ ರೈಡ್ ಮುಗಿಸುವಷ್ಟರಲ್ಲೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಜೋಡಿಯ ಜಾಲಿ ರೈಡ್ ವಿಡಿಯೋ ವೈರಲ್ ಆಗಿದೆ. ಇದೇ ವಿಡಿಯೋ ಇವರನ್ನು ಜೈಲಿಗೆ ಕಳುಹಿಸಿದೆ. 

ದೆಹಲಿಯ ನಜಾಫಘಡ ನಿವಾಸಿಗಳಾದ 20 ವರ್ಷದ ಆದಿತ್ಯ ಹಾಗೂ 19 ವರ್ಷದ ಅಂಜಲಿ ಇಬ್ಬರು ಸ್ಪೈಡರ್‌ಮ್ಯಾನ್ ಹಾಗೂ ಸ್ಪೈಡರ್‌ವುಮೆನ್ ರೀತಿ ಡ್ರೆಸ್ ಹಾಕಿ ಸಜ್ಜಾಗಿದ್ದಾರೆ. ಬಳಿಕ ದೆಹಲಿಯ ದ್ವಾರಕ ರಸ್ತೆಯಲ್ಲಿ ಬೈಕ್ ಏರಿ ಜಾಲಿ ರೈಡ್ ಹೊರಟಿದ್ದಾರೆ. ಕೇವಲ ಇಷ್ಟೇ ಆಗಿದ್ದರೆ ಪೊಲೀಸರು ಇವರನ್ನು ಅರೆಸ್ಟ್ ಮಾಡುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. 

Watch: ದೆಹಲಿ ಮಟ್ರೋ ರೈಲಿನಲ್ಲಿ ಲವರ್‌ಗಳ ಕಿಸ್ಸಿಂಗ್‌, 'ಸ್ವಲ್ಪನಾದ್ರೂ ಸಂಸ್ಕತಿ ಉಳಿಸಿಕೊಳ್ಳಿ' ಎಂದು ಟೀಕಿಸಿದ ಜನ!

ಜಾಲಿ ರೈಡ್ ಹೊರಟ ಈ ಸ್ಪೈಡರ್‌ಮ್ಯಾನ್ ಹಾಗೂ ವುಮೆನ್ ಬೈಕ್‌ನಲ್ಲಿ ಸ್ಟಂಟ್ ಮಾಡಿದ್ದಾರೆ. ಟೈಟಾನಿಕ್ ಫೋಸನ್ನು ಬೈಕ್‌ನಲ್ಲೇ ನೀಡಿದ್ದಾರೆ. ಬೈಕ್ ಚಲಿಸುತ್ತಿರುವಾಗ ಇಬ್ಬರು ಕೈಗಳನ್ನು ಬಿಟ್ಟು ಫೋಸ್ ನೀಡಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡಿದ್ದಷ್ಟೇ ಅಲ್ಲ, ಹೆಲ್ಮೆಟ್ ಧರಿಸಿಲ್ಲ. ಬೈಕ್‌ನಲ್ಲಿ ರೇರ್ ಮಿರರ್ ಇಲ್ಲ. ಹೀಗೆ ಹಲವು ಮೋಟಾರು ವಾಹನ ನಿಯಮ ಉಲ್ಲಂಘಿಸಿದ್ದಾರೆ.

ಈ ಜಾಲಿ ರೈಡ್, ಸ್ಟಂಟ್‌ನ್ನು ರೀಲ್ಸ್‌ಗಾಗಿ ಶೂಟ್ ಮಾಡಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಸಾಲು ಸಾಲು ಮೋಟಾರು ವಾಹನ ನಿಯಮ ಉಲ್ಲಂಘಿಸಿ ವಿಡಿಯೋ ಶೂಟ್ ಮಾಡಿದ ಈ ಜೋಡಿ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಭಾರಿ ಪ್ರತಿಕ್ರಿಯಗಳು ವ್ಯಕ್ತವಾಗಿದೆ.

ಬಾನೆತ್ತರದ ಪ್ರೀತಿ, ವಿಮಾನದಲ್ಲಿ ಗಗನಸಖಿಗೆ ಲವ್ ಪ್ರಪೋಸ್ ಮಾಡಿದ ಪೈಲೆಟ್, ಮುಂದೇನಾಯ್ತು?

ವಿಡಿಯೋ ಸಂಚಲನ ಸೃಷ್ಟಿಸುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ದ್ವಾರಕ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ವಾಹನ ಪತ್ತೆ ಹಚ್ಚೆ ನಿಯಮ ಉಲ್ಲೆಂಘಿಸಿದ ಈ ಜೋಡಿಯನ್ನು ಬಂಧಿಸಿದ್ದಾರೆ.

 

 

Latest Videos
Follow Us:
Download App:
  • android
  • ios