ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಸನಿಹದ ಬಾಂಬ್ ಸ್ಫೋಟ ಪ್ರಕರಣ ಅನುಮಾನಸ್ಪದರ ವಿಡಿಯೋ ಬಹಿರಂಗ ಪಡಿಸಿದ ರಾಷ್ಟ್ರೀಯ ತನಿಖಾ ದಳ ಗುರುತ ಪತ್ತೆಹಚ್ಚಿದರೆ 10 ಲಕ್ಷ ರೂ ಬಹುಮಾನ ಘೋಷಿಸಿದ NIA

ನವದೆಹಲಿ(ಜೂ.15):  ರಾಷ್ಟ್ರ ರಾಜಧಾನಿ ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭಿವಿಸಿದ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಮಹತ್ವದ ವಿಡಿಯೋ ಬಿಡುಗಡೆ ಮಾಡಿದೆ. ಬರೋಬ್ಬರಿ 5 ತಿಂಗಳ ಬಳಿಕ NIA ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರ ಸಿಸಿಟಿ ವಿಡಿಯೋ ಬಹಿರಂಗ ಪಡಿಸಿದೆ.

ದಿಲ್ಲಿ ಸ್ಫೋಟ ಹಿಂದೆ ಇರಾನ್‌ ಕೈವಾಡ?: ತನ್ನ ಗಣ್ಯರ ಹತ್ಯೆಗೆ ಇರಾನ್‌ನಿಂದ ಪ್ರತೀಕಾರ ಶಂಕೆ!.

ದೆಹಲಿಯಲ್ಲಿರುವ ಇಸ್ರೇಲ್ ದೂತವಾಸ ಕಚೇರಿ ಸಮೀಪದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ದಿನ ಓಡಾಡಿದ, ಈ ಘಟನೆಯಲ್ಲಿ ಭಾಗಿಯಾಗಿರಬಹುದೆಂದು ಶಂಕಿಸಲಾದ ಇಬ್ಬರು ವ್ಯಕ್ತಿಗಳ ಸಿಸಿಟಿವ ದೃಶ್ಯ ಇದಾಗಿದೆ. ಈ ವ್ಯಕ್ತಿಗಳನ್ನು ಗುರುತಿಸಿದರೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ NIA ಘೋಷಿಸಿದೆ.

Scroll to load tweet…

ಅನುಮಾನಸ್ಪದರ ವಿಡಿಯೋ ಹಾಗೂ ಚಿತ್ರಗಳನ್ನು ಬಿಡುಗಡೆ ಮಾಡಿರುವ NIA ಇದೀಗ ಸಾರ್ವಜನಿಕರಿಗೆ ಇಮೇಲ್ ಐಡಿ ಹಾಗೂ ಫೋನ್ ನಂಬರ್ ಹಂಚಿಕೊಂಡಿದೆ. ಯಾವುದೇ ಮಾಹಿತಿ ಸಿಕ್ಕಲ್ಲಿ ರವಾನೆ ಮಾಡುವಂತೆ NIA ಮನವಿ ಮಾಡಿದೆ. ಇತ್ತ ತನಿಖೆ ಚುರುಕುಗೊಳಿಸಿರುವ NIA ಕೆಲ ಮಹತ್ವದ ಮಾಹತಿಗಳನ್ನು ಕಲೆಹಾಕಿದೆ.

ದೆಹಲಿ ಬಾಂಬ್ ಸ್ಫೋಟದ ಹಿಂದೆ ಜೈಶ್-ಉಲ್-ಹಿಂದ್ ಉಗ್ರಸಂಘಟನೆ ಕೈವಾಡ?

ಇಸ್ರೇಲ್ ದೂತವಾಸ ಸ್ಫೋಟ ಪ್ರಕರಣ:
ಜನವರಿ 29, 2021ರಂದು ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಸ್ರೇಲ್ ದೂತವಾಸ ಕಚೇರಿ ಬಳಿ ಕಡಿಮೆ ತೀವ್ರತೆ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಘಟನೆ ಸಂಭವಿಸದ ಸ್ಥಳದಿಂದ ಕೇವಲ 2.5 ಕಿಲೋಮೀಟರ್ ದೂರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಕಾರ್ಯಕ್ರಮ ನಡೆಯುತ್ತಿತ್ತು.