ದೆಹಲಿ(ಜ.30): ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಸ್ರೇಲ್ ಕಚೇರಿ ಬಳಿ ಜ.29ರಂದು ಸಂಭವಿಸಿದ ಬಾಂಬ್ ಸ್ಫೋಟದ ತನಿಖೆ ತೀವ್ರಗೊಂಡಿದೆ. ಕೇಂದ್ರ ತನಿಖಾ ಸಂಸ್ಥೆ ಸ್ಫೋಟಕ್ಕೆ  IED ಸುಧಾರಿತ ವಸ್ತು ಬಳಕೆ ಮಾಡಿರುವುದನ್ನು ಬಹಿರಂಗ ಪಡಿಸಿದೆ. ಇದರ ಬೆನ್ನಲ್ಲೇ ಸ್ಫೋಟದ ಹಿಂದೆ ಜೈಶ್ ಉಲ್ ಹಿಂದ್ ಉಗ್ರ ಸಂಘಟನೆ ಕೈವಾಡವಿರುವ ಮಾಹಿತಿ ಬಹಿರಂಗವಾಗಿದೆ.

ದೆಹಲಿ ಸ್ಫೋಟ ಬೆನ್ನಲ್ಲೇ ಎಲ್ಲಾ ವಿಮಾನ ನಿಲ್ದಾಣ ಸೇರಿ ಹಲವೆಡೆ ಹೈ ಅಲರ್ಟ್ ಘೋಷಣೆ!.

ಜೈಶ್ ಉಲ್ ಹಿಂದ್ ಸಂಘಟನೆ ಟೆಲಿಗ್ರಾಂ ಚಾಟ್ ಮೂಲಕ ಹಂಚಿಕೊಂಡಿರುವ ಕೆಲ ಮೆಸೇಜ್‌ಗಳು ತನಿಖಾ ತಂಡಕ್ಕೆ ಲಭ್ಯವಾಗಿದೆ. ಲಘು ಸ್ಫೋಟವನ್ನು ಯಶಸ್ವಿಯಾಗಿ ಮುಗಿಸಿರುವ ಸಂತಸ ಕುರಿತ ಮೆಸೇಜ್ ಪೊಲೀಸರಿಗೆ ಲಭ್ಯವಾಗಿದೆ. ಸ್ಫೋಟದ ಕುರಿತು ಹಲವು ಮಾಹಿತಿಗಳು ಜೈಶ್ ಉಲ್ ಹಿಂದ್ ಉಗ್ರ ಸಂಘಟನೆ ಹಂಚಿಕೊಂಡಿರುವುದನ್ನು ಕೇಂದ್ರ ತನಿಖಾ ಸಂಸ್ಥೆ ಕಲೆ ಹಾಕಿದೆ.

ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಫೋಟ; 4-5 ವಾಹನ ಡ್ಯಾಮೇಜ್!.

ಇಸ್ರೇಲ್ ಕಚೇರಿ ಬಳಿ ನಡೆಸಿದ ಸ್ಫೋಟವನ್ನು ಹೆಮ್ಮೆಯಿಂದ ಹೇಳಿಕೊಂಡಿರುವ ಹಾಗೂ ಈ ಕುರಿತು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿರುವ ಜೈಶ್ ಉಲ್ ಹಿಂದ್ ಉಗ್ರ ಸಂಘಟನೆಯ ಚಾಟ್ ಮೆಸೇಜ್‌ಗಳನ್ನು ತನಿಖಾ ಸಂಸ್ಥೆ ಕಲೆ ಹಾಕಿದೆ. 

ಜನವರಿ 29 ರಂದು ಇಸ್ರೇಲ್ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇಲ್ಲಿ ಪಾರ್ಕಿಂಗ್ ಮಾಡಿದ್ದ ಕಾರುಗಳು ಗಾಜುಗಳು ಪುಡಿ ಪಡಿಯಾಗಿತ್ತು. ಆದರೆ ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಭಾರತ ಹಾಗೂ ಇಸ್ರೇಲ್ ರಾಜತಾಂತ್ರಿಕ ಸಂಬಂಧಕ್ಕೆ 29 ವರ್ಷ ಪೂರೈಸಿದ ದಿನವೇ ಈ ಘಟನೆ ಸಂಭವಿಸಿದೆ.