Asianet Suvarna News Asianet Suvarna News

Batla House Encounter: ಗಲ್ಲು ಶಿಕ್ಷೆಯಿಂದ ಪಾರಾದ ಭಯೋತ್ಪಾದಕ ಆರೀಜ್‌ ಖಾನ್‌!

ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅಮಿತ್ ಶರ್ಮಾ ಅವರ ಪೀಠವು ವಿಚಾರಣಾ ನ್ಯಾಯಾಲಯವು, 2008ರ ಬಾಟ್ಲಾ ಹೌಸ್‌ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಆರೀಜ್‌ ಖಾನ್‌ಗೆ ನೀಡಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು.

Delhi HC upholds conviction of Ariz Khan for killing inspector MC Sharma in 2008 Batla House Encounter reduces sentence san
Author
First Published Oct 12, 2023, 6:50 PM IST

ನವದೆಹಲಿ (ಅ.12): 2008ರ ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಕೊಲೆ ಮಾಡಿದ್ದ ಭಯೋತ್ಪಾದಕ ಆರೀಜ್‌ ಖಾನ್‌ಗೆ ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ದೋಷಾರೋಪಣೆಯನ್ನು ಪ್ರಶ್ನಿಸುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ. ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅಮಿತ್ ಶರ್ಮಾ ಅವರ ಪೀಠವು ವಿಚಾರಣಾ ನ್ಯಾಯಾಲಯವು ನೀಡಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು. 
"ಚಾಲ್ತಿಯಲ್ಲಿರುವ ಚರ್ಚೆಯ ದೃಷ್ಟಿಯಿಂದ, ಅಪರಾಧದ ತೀರ್ಪು ಎತ್ತಿಹಿಡಿಯಲಾಗಿದೆ. ವಿಧಿಸಿದ ಮರಣದಂಡನೆಯನ್ನು ದೃಢೀಕರಿಸಲಾಗಿಲ್ಲ. ಮಾರ್ಚ್ 15ರ ಆದೇಶವನ್ನು ಆ ಮಟ್ಟಿಗೆ ಮಾರ್ಪಡಿಸಲಾಗಿದೆ. ಮೇಲ್ಮನವಿಯನ್ನು ಭಾಗಶಃ ಅನುಮತಿಸಲಾಗಿದೆ, ”ಎಂದು ಕೋರ್ಟ್ ಹೇಳಿದೆ.

2021 ರ ಮಾರ್ಚ್‌ನಲ್ಲಿ ವಿಚಾರಣಾ ನ್ಯಾಯಾಲಯವು ಖಾನ್‌ನ ಅಪರಾಧವನ್ನು "ಅಪರೂಪದಲ್ಲಿಯೇ ಅಪರೂಪ" ವರ್ಗದ ಅಡಿಯಲ್ಲಿ ಹಾಕಿತ್ತು. ಹಾಗಾಗಿ ಮರಣದಂಡನೆಯ ಗರಿಷ್ಠ ಶಿಕ್ಷೆಯನ್ನು ಸಮರ್ಥಿಸಿತು. 2021 ಜುಲೈನಲ್ಲಿ ವಕೀಲರಾದ ಎಂಎಸ್ ಖಾನ್ ಮತ್ತು ಕ್ವಾಸರ್ ಖಾನ್ ಮೂಲಕ ಖಾನ್ ತನಗೆ ಸಿಕ್ಕಿರುವ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಅರ್ಜಿ ಹಾಕಿದ್ದ.

ದೆಹಲಿ ಪೊಲೀಸ್‌ನ ಸ್ಪೆಷಲ್‌ನ ಸೆಲ್‌ನ ಅಧಿಕಾರಿಯಾಗಿದ್ದ ಮೋಹನ್‌ ಚಂದ್‌ ಶರ್ಮ 2008ರ ಸೆಪ್ಟೆಂಬರ್‌ 19 ರಂದು ದಕ್ಷಿಣ ದೆಹಲಿಯ ಜಾಮಿಯಾ ನಗರ್‌ ಪ್ರದೇಶದಲ್ಲಿ ಕೊಲೆಯಾಗಿದ್ದರು. ದೆಹಲಿಯಲ್ಲಿ ನಡೆದ ಸರಣಿ ಸ್ಪೋಟದಲ್ಲಿ 30 ಮಂದಿ ಸಾವು ಕಂಡು 100 ಮಂದಿ ಗಾಯಾಳುವಾದ 6 ದಿನಗಳ ಬಳಿಕ ಈ ಎನ್‌ಕೌಂಟರ್‌ ನಡೆದಿತ್ತು. ಖಚಿತ ಸುಳಿವಿನ ಮೇರೆಗೆ ಮೋಹನ್‌ ಚಂದ್‌ ಶರ್ಮಾ ಅವರನ್ನು ಒಳಗೊಂಡ ಪೊಲೀಸ್‌ ಟೀಮ್‌, ಬಾಟ್ಲಾ ಹೌಸ್‌ ಪ್ರದೇಶದ ಫ್ಲ್ಯಾಟ್‌ಅನ್ನು ರೈಡ್‌ ಮಾಡಿದ್ದರು. ಈ ಹಂತದಲ್ಲಿ 37 ವರ್ಷದ ಆರೀಜ್‌ ಖಾನ್‌, ಎನ್‌ಕೌಂಟರ್‌ ಪ್ರದೇಶದಿಂದ ತಪ್ಪಿಸಿಕೊಂಡಿದ್ದ. 2009 ರಲ್ಲಿ ಘೋಷಿತ ಅಪರಾಧಿ ಎಂದು ಈತನನ್ನು ಹೇಳಲಾಗಿತ್ತು. 2018ರ ಫೆಬ್ರವರಿ 14 ರಂದು ಈತನನ್ನು ಬಂಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯವು 2021ರ ಮಾರ್ಚ್ 8 ರಂದು ದೋಷಿ ಎಂದು ಘೋಷಿಸಿತು ಮತ್ತು ಮಾರ್ಚ್ 15 ರಂದು ಮರಣದಂಡನೆ ವಿಧಿಸಲಾಗಿತ್ತು.

ಬಾಟ್ಲಾ ಹೌಸ್ ಶೂಟೌಟ್ ನಲ್ಲಿ ಉಗ್ರ ಸತ್ತಾಗ ಸೋನಿಯಾ ಕಣ್ಣೀರು ಹಾಕಿದ್ರಂತೆ: Pralhad Joshi

ಅದರೊಂದಿಗೆ ವಿಚಾರಣಾ ನ್ಯಾಯಾಲಯವು ಖಾನ್‌ಗೆ 11 ಲಕ್ಷ ದಂಡವನ್ನು ವಿಧಿಸಿತು, ಮೃತ ಅಧಿಕಾರಿಯ ಕುಟುಂಬಕ್ಕೆ ತಕ್ಷಣ  ₹ 10 ಲಕ್ಷ ಬಿಡುಗಡೆ ಮಾಡುವಂತೆಯೂ ನಿರ್ದೇಶನ ನೀಡಿತ್ತು.  ಈತನ ಅಪರಾಧವನ್ನು "ಹೇಯ" ಎಂದು ಕರೆದ ನ್ಯಾಯಾಲಯ, ಅಪರಾಧಿ "ಬದುಕುವ ತನ್ನ ಹಕ್ಕನ್ನು ಕಳೆದುಕೊಂಡಿದ್ದಾನೆ" ಎಂದು ಅಭಿಪ್ರಾಯಪಟ್ಟಿತ್ತು. ಪ್ರಕರಣದ ಮತ್ತೋರ್ವ ಅಪರಾಧಿ ಶಹಜಾದ್ ಅಹಮದ್ ನನ್ನು 2010ರ ಜನವರಿ 1ರಂದು ಬಂಧಿಸಲಾಗಿತ್ತು.ಜುಲೈ 2013ರಲ್ಲಿ ಅಹ್ಮದ್ ಅಪರಾಧಿ ಎಂದು ಜೀವಾವಧಿ ಶಿಕ್ಷೆ ಪಡೆದುಕೊಂಡಿತ್ತು. ಇದರ ವಿರುದ್ಧ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಮೇಲ್ಮನವಿ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇದೆ. ಅಹ್ಮದ್, ಏಮ್ಸ್‌ನಲ್ಲಿಎರಡು ವಾರಗಳ ಕಾಲ ದಾಖಲಾಗಿದ್ದ ನಂತರ ಈ ವರ್ಷದ ಜನವರಿಯಲ್ಲಿ ಸಾವು ಕಂಡಿದ್ದ.

ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಉಗ್ರನಿಗೆ ಗಲ್ಲು!

Follow Us:
Download App:
  • android
  • ios