ಬಾಟ್ಲಾ ಹೌಸ್ ಶೂಟೌಟ್ ನಲ್ಲಿ ಉಗ್ರ ಸತ್ತಾಗ ಸೋನಿಯಾ ಕಣ್ಣೀರು ಹಾಕಿದ್ರಂತೆ: Pralhad Joshi

ಬಾಟ್ಲಾ ಹೌಸ್ ನಲ್ಲಿ ಭಯೋತ್ಪಾದಕರ ಮೇಲೆ‌ ಶೂಟ್ ಔಟ್ ಆದಾಗ ಒಬ್ಬ ಭಯೋತ್ಪಾದಕ ಸತ್ತು ಹೋಗಿದ್ದ. ಆದ್ರೆ ಸೋನಿಯಾ ಗಾಂಧಿ ಭಯೋತ್ಪಾದಕ ಸತ್ತಿದ್ದಕ್ಕೆ ಕಣ್ಣೀರು ಹಾಕಿದ್ರಂತೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿಕೆ ನೀಡಿ ಕಾಂಗ್ರೆಸ್ ಅನ್ನು ಕೆಣಕಿದ್ದಾರೆ.

Sonia Gandhi shed tears when terrorists killed in Batla House encounter gow

ವರದಿ: ರವಿ ಶಿವರಾಮ್ ಏಷ್ಯಾ ನೆಟ್ ಸುವರ್ಣ ನ್ಯೂಸ್  

ಬೆಂಗಳೂರು(ಜು.10): ಜಮ್ಮು - ಕಾಶ್ಮೀರಲ್ಲಿ ಮೊನ್ನೆ ಮೊನ್ನೆ ಅಲ್ಲಿನ ಸ್ಥಳಿಯರೇ ಸೇರಿ ಇಬ್ಬರು ಭಯೋತ್ಪಾದಕರನ್ನು ಸೆರೆಹಿಡಿದು ಪೊಲೀಸ್ ಗೆ ಒಪ್ಪಿಸಿದ್ದರು. ಅದರಲ್ಲಿ ಒಬ್ಬ ಭಯೋತ್ಪಾದಕ ತಾಲಿಬ್‌ ಹುಸೇನ್‌ ಶಾ ಈ ಹಿಂದೆ ಬಿಜೆಪಿಯ ಜಮ್ಮು ವಿಭಾಗದ ಅಲ್ಪ ಸಂಖ್ಯಾತ ಮೋರ್ಚಾದ ಸೋಷಿಯಲ್‌ ಮಿಡಿಯಾ ಘಟಕದ ಮುಖ್ಯಸ್ಥನಾಗಿ ಕೆಲಸ ಮಾಡಿದ್ದ ಎಂಬ ವಿಚಾರ ಗೊತ್ತಾಗುತ್ತಿದಂತೆ, ಕಾಂಗ್ರೆಸ್ ಬಿಜೆಪಿಯ ಮೇಲೆ ಆರೋಪ ಹೊರಿಸಿತ್ತು. ಬಿಜೆಪಿ ಪಾರ್ಟಿಯಲ್ಲಿ ಭಯೋತ್ಪಾದಕರು ಇದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿಬಿಟ್ಟು ಬಿಜೆಪಿಗೆ ಇರಿಸು‌ ಮುರುಸು ತಂದಿತ್ತು.

ಮಾತ್ರವಲ್ಲ ರಾಜಸ್ಥಾನದಲ್ಲಿ‌ ನಡೆದ ಕನ್ಹಯ್ಯಲಾಲ್ ಕೊಲೆ ಆರೋಪಿಯಲ್ಲಿ ಒಬ್ಬ ಬಿಜೆಪಿ ನಾಯಕರ ಜೊತೆ ನಿಂತಿದ್ದ ಫೋಟೊವನ್ನು ಹರಿಬಿಟ್ಟು ಕೊಲೆಗಡುಗ ಬಿಜೆಪಿಯವನು ಎಂಬ ಆರೋಪ ಮಾಡಿತ್ತು ವಿಪಕ್ಷಗಳು. ಈ ಆರೋಪಕ್ಕೆ ಕೌಂಟರ್ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಪಾಟ್ಲಾ ಹೌಸ್ ಶೂಟ್ ಔಟ್ ಪ್ರಕಣವನ್ನು ಮತ್ತೆ ಕೆದುಕಿ ನೇರವಾಗಿ ಸೋನಿಯಾ ಗಾಂಧಿ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಜೆಡಿಎಸ್‌ ಕೋಟೆ ಹಾಸನದಲ್ಲಿ ರಾಜ್ಯ ಬಿಜೆಪಿ ಸಭೆ

ಭಯೋತ್ಪಾದಕ ಸತ್ತಾಗ ಸೋನಿಯಾ ಅಳ್ತಾ ಇದ್ರಂತೆ
ಬಿಜೆಪಿ ಕಚೇರಿಯಲ್ಲಿ ಇಂದು ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಕಾರ್ಯಕಾರಿಣಿ ಸಭೆಯಲ್ಲಿ ಪ್ರಲ್ಹಾದ್ ಜೋಷಿ ಭಾಷಣ ಮಾಡಿದ್ರು.‌ ಬಿಜೆಪಿಗೆ ಭಯೋತ್ಪಾದಕರ ಜೊತೆ ನಂಟಿದೆ ಎಂದು ಕಾಂಗ್ರೆಸ್ ಆರೋಪ ಮಾಡ್ತಾ ಇರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು ಈ ಹಿಂದೆ (2008) ಸೋನಿಯಾ ಗಾಂಧಿ ಅಧಿಕಾರದಲ್ಲಿ ಇದ್ದಾಗ, ಮನಮೋಹನ್ ಸಿಂಗ್ ಸುಮ್ನೆ ಹೆಸರಿಗೆ ಪ್ರಧಾನಿ ಆಗಿದ್ರು. ಅಧಿಕಾರ ನಡೆಸೋದು ಸೋನಿಯಾ ಗಾಂಧಿ ಆಗಿತ್ತು.

ಆ ಸಮಯದಲ್ಲಿ ಬಾಟ್ಲಾ ಹೌಸ್ ನಲ್ಲಿ ಭಯೋತ್ಪಾದಕರ ಮೇಲೆ‌ ಶೂಟ್ ಔಟ್ ಆದಾಗ ಒಬ್ಬ ಭಯೋತ್ಪಾದಕ ಸತ್ತು ಹೋಗಿದ್ದ. ಆದ್ರೆ ಸೋನಿಯಾ ಗಾಂಧಿ ಭಯೋತ್ಪಾದಕ ಸತ್ತಿದ್ದಕ್ಕೆ ಕಣ್ಣೀರು ಹಾಕಿದ್ರಂತೆ. ಮಾತ್ರವಲ್ಲ ರಾಹುಲ್ ಗಾಂಧಿ ಅಫ್ಜಲ್ ಗುರು ಜೊತೆ ಫೋಟೊ ತೆಗೆಸಿಕೊಂಡವರು. ಇಂತವರು  ಇಂದು ಬಿಜೆಪಿ ಮೇಲೆ ಆರೋಪ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ಮಾಡಿದ್ರು. 

Lok Sabha election 2024; ‘ಪಸ್ಮಾಂದಾ’ ಮುಸ್ಲಿಮರ ಮೇಲೆ ಬಿಜೆಪಿ ಕಣ್ಣು!

ಬಾಟ್ಲಾ ಹೌಸ್ ಎನ್ ಕೌಂಟರ್ ಇತಿಹಾಸ
ಸೆಪ್ಟೆಂಬರ್ 2008 ರಂದು ಓಖ್ಲಾದ ಜಾಮಿಯಾ ನಗರದ ಬಾಟ್ಲಾ ಹೌಸ್ ಪ್ರದೇಶದಲ್ಲಿನ ಫ್ಲಾಟ್‌ನಲ್ಲಿ ಅಡಗಿಕೊಂಡಿದ್ದ ಇಂಡಿಯನ್ ಮುಜಾಹಿದ್ದೀನ್‌ನ ಭಯೋತ್ಪಾದಕರನ್ನು ಸೆರೆಹಿಡಿಯಲ ದೆಹಲಿ ಪೊಲೀಸರು ಸಶಸ್ತ್ರದಾರಿಗಳಾಗಿ ಕಾರ್ಯಾಚರಣೆಗೆ ಇಳಿದಿದ್ರು. ಆದ್ರೆ ಭಯೋತ್ಪಾದಕರು ಪ್ರತಿರೋಧ ತೋರಿ ಪೊಲೀಸ್ ಜೊತೆ ಗುಂಡಿನ ಚಕಮಕಿ ನಡೆಸಿದ್ರು.ಪರಿಣಾಣಮ ಕಾರ್ಯಾಚರಣೆಯಲ್ಲಿ ಒಬ್ಬ ಭಯೋತ್ಪಾದಕನನ್ನು ಪೊಲೀಸ್ ಎನ್ ಕೌಂಟರ್ ಮಾಡಿತ್ತು. ಈ ಘಟನೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ, ಮೋಹನ್ ಚಂದ್ ಶರ್ಮಾ ಹುತಾತ್ಮರಾಗಿದ್ರು.‌ 

ಈ ಎನ್ ಕೌಂಟರ್ ಸುಳ್ಳು ಎಂದಿದ್ದ ಕಾಂಗ್ರೆಸ್ ಮತ್ತು ಮಮತಾ
2008 ರಲ್ಲಿ ನಡೆದ ಈ ಏನ್ ಕೌಂಟರ್ ಬಳಿಕ ರಾಜಕೀಯ ತಿರುವು ಪಡೆಯಿತು. ಕಾಂಗ್ರೆಸ್ ಇದು ನಕಲಿ ಎನ್ ಕೌಂಟರ್ ಎಂದು ಆರೋಪ ಮಾಡಿದ್ರೆ, ಎನ್ ಕೌಂಟರ್ ಸತ್ಯ ಎಂದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆವ ಹೇಳಿಕೆ ನೀಡಿದ್ರು. ಆದ್ರೆ ತನಿಖೆ ಬಳಿಕ ಬಾಟ್ಲ್ ಹೌಸ್ ಎನ್ ಕೌಂಟರ್ ನಿಜ ಎಂದು ತೀರ್ಮಾನ ಆಗಿದ್ದು ಇತಿಹಾಸ. ಆ ಪ್ರಕರಣದಲ್ಲಿ ಕಾಂಗ್ರೆಸ್ ನಡೆದುಕೊಂಡ ಬಗ್ಗೆ ಮತ್ತೆ ಪ್ರಸ್ತಾಪ ಮಾಡೊ‌ ಮೂಲಕ ಕೇಂದ್ರ ಸಚಿವ ಜೋಷಿ ಕಾಂಗ್ರೆಸ್ ನಿಲುವಿನ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. 

370 ರದ್ದು ಮಾಡಿದ್ದು ಭಯೋತ್ಪಾದಕ ನಿರ್ನಾಮಕ್ಕೆ ಕಾರಣ
ಇಂದು ದೇಶದಲ್ಲಿ ಭಯೋತ್ಪಾದನೆ ನಿರ್ನಾಮ‌ ಆಗಿದೆ. ಯಾರಾದರೂ ಒಳನುಸುಳಲು ಬಂದ್ರೆ ನಮ್ಮ ಸೈನಿಕರು ಗಡಿಯಲ್ಲೇ ಹೊಸಕಿ ಹಾಕ್ತಾರೆ ಎಂದ ಜೋಷಿ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಆರ್ಟಿಕಲ್370 ರದ್ದು ಮಾಡಿದ್ದೂ ಕೂಡ ಇಂದು ಭಯೋತ್ಪಾದನೆ‌ ನಿರ್ನಾಮ ಆಗೋಕೆ ಪ್ರಮುಖ ಕಾರಣ ಎಂದು ಅಭಿಪ್ರಾಯ ಪಟ್ಟರು.‌

ವಿಷಯ ಡೈವರ್ಟ್ ಮಾಡಲು ಕಾಂಗ್ರೆಸ್ ತಂತ್ರ
ಈ ರೀತಿ ಆರೋಪ ಸುಳ್ಳುಗಳನ್ನು ಕಾಂಗ್ರೆಸ್ ಯಾಕೆ ಮಾಡ್ತಾ ಇದೆ ಎನ್ನೋದಕ್ಕೆ ಜೋಷಿ‌ ಕಾರಣವನ್ನು ನೀಡಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಮಾಡುವ ಜನಪರ ಕೆಲಸಗಳು, ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಮಾಡುವ ಯೋಜನೆಗಳು ಜನರಿಗೆ ತಲುಪಬಾರದು ಎನ್ನುವ ಉದ್ದೇಶಕ್ಕೆ ಈ ರೀತಿ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಪ್ರಲ್ಹಾದ್ ಜೋಷಿ ಆಕ್ರೋಶ ವ್ಯಕ್ತಪಡಿಸಿದರು. ‌

 ಕಾಂಗ್ರೆಸ್ ಸರ್ಕಾರ ಮಾಡಿದ್ದು ಸಾಲು ಸಾಲು ಹಗರಣ
ಇದೇ ವೇಳೆ ಕಾಂಗ್ರೆಸ್ ಮಾಡಿರುವ ಭ್ರಷ್ಟಾಚಾದರದ ಬಗ್ಗೆಯೂ ಪ್ರಸ್ತಾಪ ಮಾಡಿದ್ರು.
ದೇಶದಲ್ಲಿ ‌ಕಾಂಗ್ರೆಸ್ ಸಾಲು ಸಾಲು ಹಗರಣ ಮಾಡಿತು.‌ ಕಲ್ಲಿದ್ದಲು ಹಗರಣ, ಕಾಮನ್‌ವೆಲ್ತ್ ಹಗರಣ ಸೇರಿದಂತೆ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ.‌ಆದ್ರೆ ಮೋದಿ‌ ಸರ್ಕಾರದ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಹೇಳಿದರು.‌

ಬಿಜೆಪಿ ಗ್ರಾಮೀಣ ಮಟ್ಟದ ಪಕ್ಷ
ಬಿಜೆಪಿ ಮೇಲೆ‌ ಮೊದಲು ಇಂದು ನಗರ ಪಾರ್ಟಿ, ಉಳ್ಳವರ ಪಾರ್ಟಿ ಎಂದೆಲ್ಲಾ ಆರೋಪ‌ ಇತ್ತು. ಆದ್ರೆ ಇಂದು ಬಿಜೆಪಿ ಗ್ರಾಮೀಣ ಪಾರ್ಟಿ ಆಗಿದೆ ಮತ್ತು ಎಲ್ಲಾ ಗ್ರಾಮದಲ್ಲೂ ಬಿಜೆಪಿ ಪಾರ್ಟಿ ಇದೆ ಎಂದು ಪಕ್ಷದ ಸಂಘಟನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.‌

Latest Videos
Follow Us:
Download App:
  • android
  • ios