ಕಳೆದ ವರ್ಷ ದೆಹಲಿಯಲ್ಲಿ ನಡೆದ ಗಲಭೆ ದೇಶದ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿದೆ. ಈ ಗಲಭೆಯ ಸಂತ್ರಸ್ತರಿಗೆ ಸರಿಯಾದ ಪರಿಹಾರ ಇನ್ನೂ ಸಿಕ್ಕಿಲ್ಲ. ಕೆಲವರಿ ಬದುಕೇ ಕತ್ತಲಲ್ಲಿದೆ. ಆದರೆ ಸರ್ಕಾರ ಅಲ್ಪ ಮೊತ್ತ ಪರಿಹಾರ ನೀಡಿ ಕೈತೊಳೆದುಕೊಂಡಿದೆ.

ನವದೆಹಲಿ(ಮಾ.22): ಕಳೆದ ವರ್ಷ ದೆಹಲಿ ಇದ್ದಕ್ಕಿದ್ದಂತೆ ಹೊತ್ತಿ ಉರಿದಿತ್ತು. ದೆಹಲಿ ಗಲಭೆ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಕೇಂದ್ರ ಸರ್ಕಾರದ ಮಸೂದೆ ವಿರೋಧಿಸಿ ಆರಂಭಗೊಂಡ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಇಷ್ಟೇ ಅಲ್ಲ ಬಹುದೊಡ್ಡ ಗಲಭೆಯಾಗಿ ಮಾರ್ಪಟ್ಟಿತ್ತು. ಇದೀಗ ಈ ಗಲಭೆಯ ಸಂತ್ರಸ್ತರಲ್ಲಿ ಕೆಲವರಿಗೆ ಪರಿಹಾರ ಹಣ ಬಿಡುಗಡೆಯಾಗಿದೆ. ಆದರೆ ಈ ಹಣದಿಂದ ಹೊಸ ಬದುಕು ಮರೀಚಿಕೆಯಾಗಿದೆ ಅನ್ನೋದು ಸಂತ್ರಸ್ತರ ಅಳಲು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿ ಹಿಂಸಾಚಾರದ ವೇಳೆ ಏನಾಗಿತ್ತು? ಗನ್ ಹಿಡಿದವನಿಗೆ ಜಾಮೀನಿಲ್ಲ

2020ರ ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಗಲಭೆ ಕೋರರು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ್ದರು. ಹಲವು ಸ್ಥಳದಲ್ಲೇ ಪ್ರಾಣಬಿಟ್ಟಿದ್ದರು. ಈ ಹೀಗೆ ಗಲಭೆಕೋರರ ದಾಳಿಯಲ್ಲಿ ಮೊಹಮ್ಮದ್ ವಾಲ್ಕಿ ಕುಟುಂಬ ಕೂಡ ಸಿಲುಕಿತ್ತು. ಗಲಭೆಕೋರರು ಆ್ಯಸಿಡ್ ದಾಳಿಗೆ ಮೊಹಮ್ಮದ್ ವಾಲ್ಕಿ ಕಣ್ಣುಗಳೇ ಸುಟ್ಟು ಹೋಗಿದೆ.

ಗಲಭೆಕೋರರ ಆ್ಯಸಿಡ್ ದಾಳಿ ಸಿಲುಕಿದ ಮೊಹಮ್ಮದ್ ವಾಲ್ಕಿ ಕುಟುಂಬ ನೇರವಾಗಿ ಪಕ್ಕದಲ್ಲಿದ್ದ ಮಸೀದಿಗೆ ತೆರಳಿ ಆಶ್ರಯ ಪಡೆದಿತ್ತು. ಆದರೆ ಆ್ಯಸಿಡ್ ದಾಳಿಯಿಂದ ಕಣ್ಣು, ಮುಖ ಸುಟ್ಟು ಹೋದ ವಾಲ್ಕಿಗೆ ತಕ್ಷಣವೇ ಚಿಕಿತ್ಸೆಯ ಅಗತ್ಯವಿತ್ತು. ಆದರೆ ಮಸೀದಿಯಿಂದ ಹೊರಬಂದರೆ ಹತ್ಯೆಯಾಗುವ ಭೀತಿ ಎದುರಾಗಿತ್ತು. ಹೀಗಾಗಿ 12 ಗಂಟೆಗಳ ಬಳಿಕ ಮಧ್ಯ ರಾತ್ರಿ ವಾಲ್ಕಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ದಿಲ್ಲಿ ಹಿಂಸೆ: ಮೃತರ ಸಂಖ್ಯೆ 38ಕ್ಕೆ: ಮೃತರ ಕುಟುಂಬಕ್ಕೆ ಕೇಜ್ರಿ ತಲಾ 10 ಲಕ್ಷ ರೂ.!.

ಇದೀಗ ವಾಲ್ಕಿಗೆ ಕಣ್ಣುಗಳು ಕಾಣುವುದಿಲ್ಲ. ದೆಹಲಿ ಸರ್ಕಾರ ಕಣ್ಣು ಕಳೆದುಕೊಂಡವರಿಗೆ 2 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಿದೆ. ಈ ಹಣದಲ್ಲಿ ತನ್ನ ಚಿಕಿತ್ಸಾ ವೆಚ್ಚ ಕೂಡ ಸಾಲುವುದಿಲ್ಲ. ಹೀಗಾಗಿ ಕನಿಷ್ಠ 5 ಲಕ್ಷಕ್ಕೆ ಏರಿಸಬೇಕು ಎಂದು ವಾಲ್ಕಿ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರದಿಂದ ನನಗೆ ಎಷ್ಟು ಪರಿಹಾರ ಸಿಕ್ಕಿತ್ತು ಅನ್ನೋದಕ್ಕಿಂತ ನನ್ನ ಬದುಕೆ ಕತ್ತಲಲ್ಲಿದೆ ಎಂದು ವಾಲ್ಕಿ ನೋವಿನಿಂದ ಹೇಳಿಕೊಂಡಿದ್ದಾರೆ.

ದೆಹಲಿ ಗಲಭೆಯ ಸಂತ್ರಸ್ತರಿಗೆ ಸರ್ಕಾರ ಘೋಷಿಸಿದ ಪರಿಹಾರ ಮೊತ್ತ:
ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ
ಸಂಪೂರ್ಣ ಕಣ್ಣು ಕಳದೆುಕೊಂಡವರಿಗೆ 5 ಲಕ್ಷ ರೂಪಾಯಿ
ಗಲಭೆಯಲ್ಲಿ ಸಾವನ್ನಪ್ಪಿದ್ದವರಿಗೆ 10 ಲಕ್ಷ ರೂಪಾಯಿ