ನವದೆಹಲಿ(ನ.  22)  ಈ ವರ್ಷದ ಫೆಬ್ರವರಿ ವೇಳೆ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ  ಗುಂಡಿನ ದಾಳಿ ನಡೆಸಿದ ಆರೋಪಿಯ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್ ಅವರು ಆರೋಪಿ ವಿಕ್ರಮ್ ಸಿಂಗ್  ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.  ಪೊಲೀಸ್ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪ ಇದೆ.

ಜನರು ಮತ್ತು ಪೊಲೀಸರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು ಹಲವರು ಗಾಯಗೊಂಡಿದ್ದರು. ಸಿಸಿಟಿವಿಯಲ್ಲಿ ವಿಕ್ರಂ ಸಿಂಗ್ ಚಿತ್ರ ತೆರೆಯಾಗಿತ್ತು.

ದೆಹಲಿ ಗಲಭೆ, ಭಯಾನಕ ಅಂಶ ಬಿಚ್ಚಿಟ್ಟ ಪೊಲೀಸರು

ಆರೋಪಿ ಪರವಾಗಿ ಹಾಜರಾದ ವಕೀಲ ಅಶೋಕ್ ಕುಮಾರ್, ಸಿಂಗ್ ಆಪಾದಿತನಿಗೂ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಆತನನ್ನು ಪೊಲೀಸರು ಸುಳ್ಳು ಆರೋಪದ ಮೇಲೆ ಬಂಧಿಸಿದ್ದಾರೆ.  ಈ ವ್ಯಕ್ತಿಯ ದುಡಿಮೆಯ ಆಧಾರದ ಮೇಲೆ ಆತನ ಕುಟುಂಬ ನಡೆಯುತ್ತಿದೆ ಎಂದು ವಾದ ಮುಂದಿಟ್ಟರು.

ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಲೀಮ್ ಅಹ್ಮದ್ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.  ಕೈಯಲ್ಲಿ ಇಟ್ಟಿಗೆ ಹಿಡಿದಿದ್ದು ಕಾಣಿಸುತ್ತದೆ. ಹಾಗಾಗಿ ಜಾಮೀನು ಕೊಡಲು ಸಾಧ್ಯವಿಲ್ಲ ಎಂದರು.

ಪೊಲೀಸರು ಸಹ ಆರೋಪಿಯನ್ನು ಘಟನೆ ವೇಳೆ ನಾವು ಗುರುತಿಸಿದ್ದಾಗಿ ಹೇಳಿದ್ದಾರೆ.  ಅಸಿಸ್ಟ್ಂಟ್ ಸಬ್ ಇನ್ಸ್ ಪೆಕ್ಟರ್ ಧರ್ಮವೀರ್ ಸಿಂಗ್  ಅವರು ನೀಡಿದ್ದ ಹೇಳಿಕೆ ಆಧಾರದಲ್ಲಿಯೇ ದೂರು ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.