ನನ್ನ ಮನೆ, ಕಚೇರಿ ಮೇಲೆ ದಾಳಿ ಮಾಡಿ ಸಿಬಿಐ ಬರಿಗೈಲಿ ಹಿಂದಿರುಗಿದೆ: ಸಿಸೋಡಿಯಾ

ಅಬಕಾರಿ ನೀತಿ ಹಿನ್ನೆಲೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತಾಗಿ ನನ್ನ ಕಚೇರಿ ಹಾಗೂ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದಿದ್ದಾರೆ ಎಂದು ಆಪ್‌ ನಾಯಕ ಹಾಗೂ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿಕೊಂಡಿದ್ದಾರೆ.

Delhi Deputy Chief Minister Manish Sisodia said that CBI raids my house office nothing found akb


ನವದೆಹಲಿ: ಅಬಕಾರಿ ನೀತಿ ಹಿನ್ನೆಲೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತಾಗಿ ನನ್ನ ಕಚೇರಿ ಹಾಗೂ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದಿದ್ದಾರೆ ಎಂದು ಆಪ್‌ ನಾಯಕ ಹಾಗೂ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿಕೊಂಡಿದ್ದಾರೆ. ಆದರೆ, ಇದು ದಾಳಿ ಅಲ್ಲ. ಕೇವಲ ಕೆಲವು ದಾಖಲೆ ಸಂಗ್ರಹಿಸಲು ಹೋಗಿದ್ದೆವಷ್ಟೇ ಎಂದು ಸಿಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಟ್ವೀಟ್‌ ಮಾಡಿರುವ ಸಿಸೋಡಿಯಾ, ಸಿಬಿಐಗೆ ಸ್ವಾಗತ. ಸಿಬಿಐ ಮತ್ತೊಮ್ಮೆ ನನ್ನ ಕಚೇರಿ ಹಾಗೂ ಮನೆ ಮೇಲೆ ದಾಳಿ ಮಾಡಿದೆ. ಲಾಕರ್‌ ತಪಾಸಿಸಿದೆ. ನನ ಗ್ರಾಮದಲ್ಲೂ ನನ್ನ ಬಗ್ಗೆ ವಿಚಾರಿಸಿದೆ. ಆದರೆ ಕಳೆದ ಬಾರಿ ದಾಳಿ ಮಾಡಿದಾಗಲೂ ಅವರಿಗೆ ಏನೂ ದೊರೆಯಲಿಲ್ಲ. ಅದೇ ರೀತಿ ಈ ಬಾರಿಯೂ ಖಾಲಿ ಕೈಯಲ್ಲಿ ಹಿಂದಿರುಗಿದ್ದಾರೆ ಎಂದಿದ್ದಾರೆ. ಇದನ್ನು ತಳ್ಳಿಹಾಕಿದ ಸಿಬಿಐ ಅಧಿಕಾರಿಗಳು, ಒಂದಿಷ್ಟುದಾಖಲೆ ಸಂಗ್ರಹಕ್ಕೆ ಅವರ ಕಚೇರಿಗೆ ಹೋಗಿದ್ದೆವು. ಇದು ಯಾವುದೇ ದಾಳಿಯಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ.  ದೆಹಲಿಯಲ್ಲಿ ಜಾರಿ ಮಾಡಲಾದ ಅಬಕಾರಿ ನೀತಿಯಲ್ಲಿ (Excise policy) ಅಕ್ರಮ ನಡೆದಿದೆ ಎಂದು ಉಪರಾಜ್ಯಪಾಲ ವಿ.ಕೆ. ಸಕ್ಸೇನಾ (V.K. Saxena) ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ತನಿಖೆ ನಡೆಸುತ್ತಿದೆ.

Telangana ಶಾಸಕರ ಖರೀದಿ ಯತ್ನ ಆರೋಪ: ಅಮಿತ್ ಶಾ ಬಂಧಿಸಿ ಎಂದ Manish Sisodia

Gujarat Polls: ‘’ಸಿಸೋಡಿಯಾ ಮೇಲೆ ಸಿಬಿಐ ರೇಡ್‌ನಿಂದ ಎಎಪಿ ಮತಗಳಿಕೆ 4% ಹೆಚ್ಚಳ'

Latest Videos
Follow Us:
Download App:
  • android
  • ios