Asianet Suvarna News Asianet Suvarna News

wildlife Corridor; ದೆಹಲಿ - ಡೆಹ್ರಡೂನ್ ಏಷ್ಯಾದ ಅತೀ ದೊಡ್ಡ ವನ್ಯಜೀವಿ ಹೆದ್ದಾರಿ ಶೀಘ್ರದಲ್ಲೇ ಲೋಕಾರ್ಪಣೆ!

ಭಾರತದ ಹೆದ್ದಾರಿಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಮನಾಗುತ್ತಿದೆ. ನಿತಿನ್ ಗಡ್ಕರಿ ಸಾರಥ್ಯದಲ್ಲಿ ನವ ಭಾರತ ನಿರ್ಮಾಣವಾಗುತ್ತಿದೆ. ಇದೀಗ ಮತ್ತೊಂದು ಹೆದ್ದಾರಿ ಲೋಕಾರ್ಪಣೆಗೊಳ್ಳುತ್ತಿದೆ. ದೆಹಲಿ ಡೆಹ್ರಡೂನ್ ಹೆದ್ದಾರಿ ಹಲವು ವಿಶೇಷತೆಗಳನ್ನು ಹೊಂದಿದೆ. 6 ಗಂಟೆ ಪ್ರಯಾಣ ಇನ್ನು ಕೇವಲ 2.5 ಗಂಟೆಯಲ್ಲಿ ಸಾಧ್ಯ, ಇತ್ತ ಈ ಹೆದ್ದಾರಿ ಏಷ್ಯಾದ ಅತೀ ದೊಡ್ಡ ವನ್ಯಜೀವಿ ಕಾರಿಡಾರ್ ಹೆದ್ದಾರಿಯಾಗಿದೆ. 

Delhi Dehradun Expressway operational soon its Asia longest elevated wildlife corridor reduce travel time to 2 hrs ckm
Author
First Published Sep 3, 2022, 5:02 PM IST

ನವದೆಹಲಿ(ಸೆ.03): ಭಾರತದ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ಕಳೆದ 8 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಹೆದ್ದಾರಿ ಕಾಮಗಾರಿ, ಅತ್ಯುತ್ತಮ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣದಲ್ಲಿ ಭಾರತ ಈಗಾಗಲೇ ದಾಖಲೆ ಬರೆದಿದೆ. ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಶೇಷ ಪ್ರಯತ್ನದ ಮೂಲಕ ಈಗಾಗಲೇ ದೇಶದ ಮೂಲೆ ಮೂಲೆಗೂ ಸಂಪರ್ಕ ಸೇತುವೆಯನ್ನು ಸರಳ ಹಾಗೂ ಸುಲಭವಾಗಿಸಿದ್ದಾರೆ. ಇದೀಗ ದೆಹಲಿಯಿಂದ ಡೆಹ್ರಡೂನ್ ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆಗೆ ಸಜ್ಜಾಗಿದೆ. ರಾಜಧಾನಿಯಿಂದ ಉತ್ತರಖಂಡದ ಡೆಹ್ರಡೂನ್ ತಲುಪಲು ಸದ್ಯ 6 ಗಂಟೆ ಸಮಯ ಬೇಕು. ಆದರೆ ನೂತನ ಹೆದ್ದಾರಿಯಿಂದ ಪ್ರಯಾಣದ ಸಮಯ 2.5 ಗಂಟೆಗೆ ಇಳಿಕೆಯಾಗಲಿದೆ. ಈ ಹೆದ್ದಾರಿಯಲ್ಲಿ ಹಲವು ವಿಶೇಷತೆಗಳಿವೆ. ಇದು ಏಷ್ಯಾದಲ್ಲೇ ಅತೀ ದೊಡ್ಡ ವನ್ಯಜೀವಿ ಕಾರಿಡಾರ್ ಹೆದ್ದಾರಿ. ಅಂದರೆ ಈ ಹೆದ್ದಾರಿ 20 ಕಿಲೋಮೀಟರ್ ವನ್ಯಜೀವಿ ಸಂರಕ್ಷಿತ ಪ್ರದೇಶದಿಂದ ಹಾದು ಹೋಗುತ್ತಿದೆ. ಇಲ್ಲಿ 12 ಕಿಲೋಮೀಟರ್ ಫ್ಲೇ ಓವರ್ ರಸ್ತೆ ನಿರ್ಮಾಣ ಮಾಡಲಾಗಿದ್ದರೆ ಇನ್ನುಳಿದ 8 ಕಿಲೋಮೀಟರ್ ಸುರಂಗ ಮಾರ್ಗ ನಿರ್ಮಾಣ ಮಾಡಾಲಾಗಿದೆ. ಈ ಮೂಲಕ ವನ್ಯ ಜೀವಿಗಳ ವಾಸಕ್ಕೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ.

ದೆಹಲಿಯಿಂದ ಡೆಹ್ರಡೂನ್(Delhi- dehradun Highway)) ಸರಿಸುಮಾರು 300 ಕಿಲೋಮೀಟರ್ ದೂರವಿದೆ. ಸದ್ಯ ಇರುವ ಹೆದ್ದಾರಿ ಮೂಲಕ ಪ್ರಯಾಣಿಸಿದರೆ 6 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ನೂತನ ಹೆದ್ದಾರಿಯಿಂದ ಕೇವಲ 2.5 ಗಂಟೆಯಲ್ಲಿ ದೆಹಲಿಯಿಂದ ಉತ್ತರಖಂಡದ ಡೆಹ್ರಡೂನ್ ತಲುಪಲಿದೆ(Delhi-Dehradun Expressway). ಮಾಹಿತಿ ಮತ್ತು ತಂತ್ರಜ್ಞಾ ಇಲಾಖೆ ಈ ಕುರಿತು ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದೆ. ಇದು ಪ್ರಗತಿಯ ಹೆದ್ದಾರಿ ಎಂದು ಕರೆದಿದೆ. 

NHAI Guinness Record 108 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಾಣ,ಗಿನ್ನಿಸ್ ದಾಖಲೆ ಬರೆದ ಭಾರತ!

ರಾಜಾಜಿ ರಾಷ್ಟ್ರೀಯ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಈ ಹೆದ್ದಾರಿಯ ಫ್ಲೈ ಓವರ್ ನಿರ್ಮಾಣ(wildlife corridor) ಮಾಡಲಾಗಿದೆ. ಜೊತೆಗೆ ಸುರಂಗ ಮಾರ್ಗವನ್ನು ಮಾಡಾಗಿದೆ. ವನ್ಯ ಜೀವಿಗಳು ಯಾವುದೇ ಕಾರಣಕ್ಕೂ ಫೈ ಓವರ್ ಮೇಲೆ ಹಾಗೂ ಸುರಂಗ ಮಾರ್ಗದೊಳಗೆ ಪ್ರವೇಶಿಸಲು ಸಾಧ್ಯವಿಲ್ಲ. ಇದರಿಂದ ವನ್ಯ ಜೀವಿಗಳ ವಾಸಸ್ಥಾನಕ್ಕೆ ಯಾವುದೇ ಸಮಸ್ಯೆಯಾಗದಂತೆ ಅತೀ ದೊಡ್ಡ ಫೈಓವರ್ ನಿರ್ಮಾಣ ಮಾಡಲಾಗಿದೆ(Asia’s longest elevated wildlife corridor). ರಸ್ತೆ ಕಾಮಾಗಾರಿಯ ವೇಳೆಯೂ ವನ್ಯ ಜೀವಿಗಳಿಗೆ ಯಾವುದೇ  ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. 

 

 

ಬೆಂಗಳೂರು-ಮೈಸೂರು ಹೈವೇ ಅಕ್ಟೋಬರ್‌ಗೆ ರೆಡಿ

ಈ ಹೆದ್ದಾರಿ ಮೂಲಕ ದೆಹಲಿಯಿಂದ ಹರಿದ್ವಾರಕ್ಕೂ(Delhi - Haridwar) ತೆರಳಲು ಸಾಧ್ಯವಿದೆ. ಸದ್ಯ ದೆಹಲಿ ಹರಿದ್ವಾರ ಪ್ರಯಾಣದ ಸಮಯ 5 ಗಂಟೆ. ಆದರೆ ಈ ಹೆದ್ದಾರಿಯಿಂದ ಸಾಗಿದರೆ 2 ಗಂಟೆಗೆ ಇಳಿಕೆಯಾಗಲಿದೆ. ಈ ಹೆದ್ದಾರಿಯ ನಿರ್ಮಾಣದ ವೇಳೆ ಎದುರಾಗಿರುವ ಹಲವು ಐತಿಹಾಸಿಕ ಸ್ಮಾರಕ, ದೇವಾಲಯಗಳನ್ನು ಹಾಗೇ ಉಳಿಸಲಾಗಿದೆ. ಈ ಮೂಲಕ ಅತ್ಯುತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಿದೆ. ಅಂತಿಮ ಹಂತದ ಕಾಮಾಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ದೆಹಲಿ ಡೆಹ್ರಡೂನ್ ಹೆದ್ದಾರಿ ಲೋಕಾರ್ಪಣೆಗೊಳ್ಳಲಿದೆ. 

Follow Us:
Download App:
  • android
  • ios