Asianet Suvarna News Asianet Suvarna News

NHAI Guinness Record 108 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಾಣ,ಗಿನ್ನಿಸ್ ದಾಖಲೆ ಬರೆದ ಭಾರತ!

  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗಿನ್ನಿಸ್ ದಾಖಲೆ
  • 5 ದಿನದಲ್ಲಿ 75 ಕಿ,ಮೀ ಹೆದ್ದಾರಿ ನಿರ್ಮಾಣ
  • ಅತೀ ವೇಗದಲ್ಲಿ ಅತ್ಯಂತ ಗುಣಮಟ್ಟದ ರಸ್ತೆ ನಿರ್ಮಾಣ
NHAI construct 75 km national highway within 108 hours set new Guinness world Record ckm
Author
Bengaluru, First Published Jun 8, 2022, 3:55 PM IST

ನವದೆಹಲಿ(ಜೂ.08): ಭಾರತದ ಹೆದ್ದಾರಿ ಹೊಸ ರೂಪ ಪಡೆದುಕೊಂಡಿದೆ. ನಿತಿನ್ ಗಡ್ಕರಿ ರಸ್ತೆ ಮತ್ತು ಸಾರಿಗೆ ಸಚಿವರಾದ ಬಳಿಕ ಭಾರತದ ರಸ್ತೆಗಳ ಚಿತ್ರಣ ಬದಲಾಗಿದೆ. ಇದರ ಜೊತೆಗೆ ಹಲವು ದಾಖಲೆಯೂ ನಿರ್ಮಾಣವಾಗಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ರಸ್ತೆ ನಿರ್ಮಾಣದಲ್ಲಿ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದೆ. ಕೇವಲ 108 ಗಂಟೆಯಲ್ಲಿ 75 ಕಿಲೋಮೀಟರ್ ಹೆದ್ದಾರಿ ನಿರ್ಮಿಸಿ ಹೊಸ ಅಧ್ಯಾಯ ಬರೆದಿದೆ.

ಮಹಾರಾಷ್ಟ್ರದ ಅಮರಾವತಿಯಿಂದ ಅಕೋಲವರೆಗಿನ 75 ಕಿಲೋಮೀಟರ್ ರಸ್ತೆಯನ್ನು ಕೇವಲ 5 ದಿನದಲ್ಲಿ ಮುಗಿಸಲಾಗಿದೆ. ಹಾಗಂತ ಗುಣಮಟ್ಟದಲ್ಲಿ  ಯಾವುದೇ ಕೊರತೆಯಾಗಿಲ್ಲ. ಈ ಕುರಿತು ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿರುವ ಸಚಿವ ನಿತಿನ್ ಗಡ್ಕರಿ, NHAI ಸಾಧನೆಗೆ ವಿಶೇಷ ಅಭಿನಂದನೆ ತಿಳಿಸಿದ್ದಾರೆ.

ಪ್ರತಿ ದಿನ 60 ಕಿ.ಮೀ ರಸ್ತೆ ನಿರ್ಮಿಸುವ ಗುರಿ, ಹೊಸ ದಾಖಲೆಗೆ ಸಜ್ಜಾದ ನಿತಿನ್ ಗಡ್ಕರಿ!

ನಮ್ಮ ತಂಡವನ್ನು ಅಭಿನಂದಿಸಲು ಹೆಚ್ಚು ಸಂತಸವಾಗುತ್ತಿದೆ. ಮಹಾರಾಷ್ಟ್ರದ ಅಮರಾವತಿ-ಅಕೋಲ ನಡುವಿನ 75 ಕಿಲೋಮೀಟರ್ ದೂರದ NH-52 ಸಿಂಗಲ್ ಲೇನ್ ಕಾಂಕ್ರೀಟ್ ರಸ್ತೆಯನ್ನು 5 ದಿನದಲ್ಲಿ ಮುಗಿಸಿ, ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದ  NHAI ಅಧಿಕಾರಿಗಳು, ರಾಜಪಥ್ ಇನ್ಫೋಕಾನ್ ಪ್ರೈವೇಟ್ ಲಿಮಿಟೆಡ್, ಜಗದೀಶ್ ಕದಮ್, ಸಂಪರ್ಕ ಅಧಿಕಾರಿಗಳು ಸೇರಿದಂತೆ ಇಡೀ ತಂಡಕ್ಕೆ ಅಭಿನಂದನೆಗಳು. ಇದೇ ಸಂದರ್ಬದಲ್ಲಿ ಎಂಜಿನೀಯರ್ ಹಾಗೂ ಕಾರ್ಮಿಕರಿಗೆ ವಿಶೇಷ ಅಭಿನಂದನೆಗಳು ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.

ಅಮರಾವತಿ ಅಕೋಲ ನಡುವಿನ 75 ಕಿಲೋಮೀಟರ್ ರಸ್ತೆ ಕಾಮಕಾರಿಯನ್ನು ಜೂನ್ 3ರ ಬೆಳಗ್ಗೆ 6 ಗಂಟೆಗೆ ಆರಂಭಿಸಲಾಗಿದೆ. ಯೋಜನಾಧಿಕಾರಿ, ರಸ್ತೆ ಎಂಜಿನೀಯರ್, ಗುಣಮಟ್ಟ ಪರೀಕ್ಷಾ ಅಧಿಕಾರಿ, ಸುರಕ್ಷತಾ ಅಧಿಾರಿ ಸೇರಿದಂತೆ  800 ಉದ್ಯೋಗಿಗಳು, 700 ಕಾರ್ಮಿಕರು 108 ಗಂಟೆಗಳ ಕಾಲ ಕೆಲಸ ಮಾಡಿ ಕಾಮಾಗಾರಿ ಮುಗಿಸಿದ್ದಾರೆ. 

ಕಳೆದ 10 ವರ್ಷದಿಂದ ಈ ರಸ್ತೆ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿತ್ತು. ಇದೀಗ ನಿತಿನ್ ಗಡ್ಕರಿ ವಿಶೇಷ ಕಾಳಜಿ ವಹಿಸಿ ಕಾಯಕಲ್ಪ ನೀಡಿದ್ದಾರೆ. ಹಲವು ಬಾರಿ ರಸ್ತೆ ರಿಪೇರಿ ಕಾಮಾಗಾರಿ ಮಾಡಲಾಗಿತ್ತು. ಆದರೂ ಪ್ರಯೋಜನವಾಗಿರಲಿಲ್ಲ. ಇದೀಗ ಹೊಸ ರಸ್ತೆ ನಿರ್ಮಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗಿದೆ.

ಚಹಾಗಾಗಿ ಒಂದು ಗಂಟೆ ಕಾದ ಕೇಂದ್ರ ಸಚಿವ ಗಡ್ಕರಿ..!

ಪ್ರತಿ ದಿನ 60 ಕಿ.ಮೀ ಹೆದ್ದಾರಿ ಗುರಿ
5 ದಿನದಲ್ಲಿ 75 ಕಿಲೋಮೀಟರ್ ಹೆದ್ದಾರಿ ನಿರ್ಮಿಸಿ ದಾಖಲೆ ಬರೆದಿರುವ ಹೆದ್ದಾರಿ ಪ್ರಾಧಿಕಾರಕ್ಕೆ ನಿತಿನ್ ಗಡ್ಕರಿ ಹೊಸ ಟಾರ್ಗೆಟ್ ನೀಡಿದ್ದಾರೆ. ಪ್ರತಿ ದಿನ 60 ಕಿ.ಮೀ ರಸ್ತೆ ನಿರ್ಮಿಸುವ ಗುರಿ ಇಡಲಾಗಿದೆ. ಈ ಕುರಿತು ಸ್ವತಃ ನಿತಿನ್ ಗಡ್ಕರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸದ್ಯ ಪ್ರತಿ ದಿನ 28 ರಿಂದ 38 ಕಿ.ಮೀ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ದೂರವನ್ನು ಪ್ರತಿದಿನಕ್ಕೆ 60 ಕಿ.ಮೀ ಹೆಚ್ಚಿಸಲು ನಿತಿನ್ ಗಡ್ಕರಿ ಟಾರ್ಗೆಟ್ ಮಾಡಿದ್ದಾರೆ. ಇದರೊಂದಿಗೆ 2025ರ ವೇಳೆ ಭಾರತದ ಎಲ್ಲಾ ಹೆದ್ದಾರಿಗಳಿಗೆ ಹೊಸ ಕಾಯಕಲ್ಪ ನೀಡಲು ಮುಂದಾಗಿದ್ದಾರೆ.

ಬೆಂಗಳೂರು- ಪುಣೆ ನಡುವೆ ಹೊಸ ಹೆದ್ದಾರಿ
ಪುಣೆ ಹಾಗೂ ಬೆಂಗಳೂರು ನಡುವೆ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಘೋಷಣೆ ಮಾಡಿದ್ದಾರೆ.ಹಾಲಿ ಪುಣೆ- ಬೆಂಗಳೂರು ರಸ್ತೆ 775 ಕಿ.ಮೀ. ಉದ್ದವಿದ್ದು, ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದೆ. ಯಾವುದೇ ಸಂದರ್ಭದಲ್ಲೂ ಮುಳುಗಡೆಯಾಗದ ರೀತಿಯ ವಿನ್ಯಾಸವನ್ನು ಹೊಸ ಹೆದ್ದಾರಿ ಹೊಂದಿರಲಿದೆ ಎಂದು ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಘೋಷಣೆ ಮಾಡಿದ್ದಾರೆ.

Follow Us:
Download App:
  • android
  • ios