ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವ ಮುನ್ನವೇ ಶಾಸಕ ಕರ್ನೈಲ್ ಸಿಂಗ್ ವಕ್ಫ್ ಬೋರ್ಡ್ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಹಿಂದೂಗಳ ಭೂಮಿಯ ಮೇಲೆ ಹಕ್ಕು ಸಾಧಿಸುತ್ತಿರುವ ವಕ್ಫ್ ಮಂಡಳಿಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ದೆಹಲಿ (ಫೆ.10) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಕೆಲವೇ ದಿನಗಳು ಕಳೆದಿವೆ, ಪಕ್ಷ ಇನ್ನೂ ಸಿಎಂ ಯಾರೆಂದು ಘೋಷಿಸಿಲ್ಲ, ಆದರೆ ಸರ್ಕಾರ ರಚನೆಗೂ ಮೊದಲೇ ಅನೇಕ ಬಿಜೆಪಿ ಶಾಸಕರು ವಿವಾದಾತ್ಮಕ ಹೇಳಿಕೆ ನೀಡಲು ಪ್ರಾರಂಭಿಸಿದ್ದಾರೆ. ಶಕುರ್ ಬಸ್ಸಿಯಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಕರ್ನೈಲ್ ಸಿಂಗ್ ಅವರು ವಕ್ಫ್ ಬೋರ್ಡ್ ಕುರಿತು ಹೇಳಿಕೆ ವಿವಾದಾಕ್ಕೆ ಕಾರಣವಾಗಿದೆ.
ಸೋಮವಾರ (ಫೆ. 10) ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನೈಲ್ ಸಿಂಗ್ ಅವರು, ಹಿಂದೂಗಳ ಭೂಮಿಯ ಮೇಲೆ ಹಕ್ಕು ಸಾಧಿಸುತ್ತಿರುವ ದೆಹಲಿಯ ವಕ್ಫ್ ಮಂಡಳಿಯನ್ನ ರದ್ದುಗೊಳಿಸಬೇಕು ಈ ಬಗ್ಗೆ ನಾನು ಉನ್ನತ ನಾಯಕತ್ವಕ್ಕೆ ಪತ್ರ ಬರೆಯುತ್ತೇನೆ' ಎಂದಿದ್ದಾರೆ.
ಇದನ್ನೂ ಓದಿ: ದೇಶದ ಜನ ಬಿಜೆಪಿ ವಿರುದ್ಧ ಒಂದಲ್ಲ ಒಂದು ದಿನ ರೊಚ್ಚಿಗೇಳ್ತಾರೆ: ಸಚಿವ ಶಿವರಾಜ ತಂಗಡಗಿ ವಾಗ್ದಾಳಿ!
ಇದಷ್ಟೇ ಅಲ್ಲ, ಕರ್ನೈಲ್ ಸಿಂಗ್ ಅವರ ಪ್ರಕಾರ, ದೆಹಲಿಯಿಂದ ಕುಂಭಮೇಳದವರೆಗಿನ ಭೂಮಿಯ ಮೇಲೆ ವಕ್ಫ್ ಮಂಡಳಿಯ ಹಕ್ಕು ಬಂದಿದೆ. ದಾಖಲೆಯಿಲ್ಲದ ಪ್ರತಿಯೊಂದು ಆಸ್ತಿಯೂ ತನ್ನದೆಂದು ಹಕ್ಕು ಸಾಧಿಸುತ್ತಿದೆ. ದೆಹಲಿಯ ವಕ್ಫ್ ಮಂಡಳಿಯು ಭೂಮಿ ತನ್ನದೆನ್ನಲು ಸರಿಯಾದ ದಾಖಲೆ ತೋರಿಸಬೇಕು. ದಾಖಲೆ ತೋರಿಸಲು ಸಾಧ್ಯವಾಗದ ಭೂಮಿಯನ್ನ ಹಿಂದೂಗಳಿಗೆ ಹಿಂದಿರುಗಿಸಲಾಗುತ್ತದೆ. ವಕ್ಫ್ ಮಂಡಳಿಯನ್ನು ರದ್ದುಗೊಳಿಸುವುದು ಜನರ ಬೇಡಿಕೆಯಾಗಿದ್ದು, ಅದರ ರದ್ದತಿಯ ನಂತರವೇ ಎಲ್ಲಾ ಧರ್ಮಗಳ ನಡುವೆ ಸಮಾನತೆ ಇರುತ್ತದೆ ಎಂದು ಕರ್ನೈಲ್ ಸಿಂಗ್ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿ:
ಆಮ್ ಆದ್ಮಿ ಪಕ್ಷ ಮತ್ತು ಅದರ ನಾಯಕರ ಮೇಲೆ ದಾಳಿ ಮಾಡಿದ ಕರ್ನೈಲ್ ಸಿಂಗ್, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ರೋಹಿಣಿಯಲ್ಲಿರುವ ವಕ್ಫ್ ಮಂಡಳಿಗೆ ಕೋಟ್ಯಂತರ ರೂಪಾಯಿ ನೀಡುವುದಾಗಿ ಭರವಸೆ ನೀಡಿತ್ತು, ಆದರೆ ಈಗ ಅವರ ಸರ್ಕಾರ ಇಲ್ಲ. ತಿಹಾರ್ ಜೈಲಿನ ಹೊರಗೆ ಕೇಜ್ರಿವಾಲ್ ಅವರನ್ನು ಮರಳಿ ಕರೆತರಬೇಕು ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡಿವೆ, ಆದ್ದರಿಂದ ಅರವಿಂದ್ ಕೇಜ್ರಿವಾಲ್ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ' ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಗೆಲ್ಲುತ್ತೆ ಮುಂದಿನ ಸಲ ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗ್ತಾರೆ: ಶಿವರಾಜ ತಂಗಡಗಿ ಭವಿಷ್ಯ
ಮುಸ್ತಫಾಬಾದ್ ಹೆಸರು ಶಿವ ವಿಹಾರ್ ಆಗಿ ಬದಲು
ಮೋಹನ್ ಸಿಂಗ್ ಅವರು ಮುಸ್ತಫಾಬಾದ್ ಹೆಸರನ್ನು ಬದಲಾಯಿಸುವುದಾಗಿ ಘೋಷಿಸಿದ್ದರು. ಕಳೆದ ವಾರ (ಫೆ. 5) ಮತದಾನದ ದಿನದಂದು, ಮುಸ್ತಫಾಬಾದ್‌ನ ಬಿಜೆಪಿ ಶಾಸಕ ಮೋಹನ್ ಸಿಂಗ್ ಬಿಶ್ತ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 2026 ರೊಳಗೆ ಮುಸ್ತಫಾಬಾದ್‌ನ ಹೆಸರನ್ನು ಶಿವ ವಿಹಾರ್ ಅಥವಾ ಶಿವ ಪುರಿ ಎಂದು ಬದಲಾಯಿಸುವುದು ತಮ್ಮ ಗುರಿ ಎಂದು ಹೇಳಿದ್ದರು, ಇದಕ್ಕೆ ಆಮ್ ಆದ್ಮಿ ಪಕ್ಷ ನಿನ್ನೆ ತೀವ್ರವಾಗಿ ಪ್ರತಿಕ್ರಿಯಿಸಿ ಅವರ ಹೇಳಿಕೆಯನ್ನು ವಿರೋಧಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ, ಇಂದು ಕರ್ನಲ್ ಸಿಂಗ್ ಅವರ ವಕ್ಫ್ ಬೋರ್ಡ್ ಕುರಿತು ಹೇಳಿಕೆ ಇದೀಗ ಸರ್ಕಾರ ರಚನೆಗೆ ಮೊದಲೇ ವಿರೋಧ ಪಕ್ಷವು ಹೊಸ ಸಮಸ್ಯೆಯನ್ನು ಸೃಷ್ಟಿಸುವ ಎಲ್ಲಾ ಸಾಧ್ಯತೆಗಳಿವೆ
