ಲಂಚ ಪಡೆದ ಹಣವನ್ನು ಸಮನಾಗಿ ಮೂವರು ಟ್ರಾಫಿಕ್ ಪೊಲೀಸರು ಹಂಚಿಕೆ, ಸೆರೆಯಾಯ್ತು ದೃಶ್ಯ!

ಟ್ರಾಫಿಕ್ ಪೊಲೀಸರು ಕರ್ತವ್ಯದ ನಡುವೆ ಲಂಚವಾಗಿ ಪಡೆದ ಹಣವನ್ನು ಮೂವರು ಸಮನಾಗಿ ಹಂಚಿದ್ದಾರೆ. ಇದು ಪ್ರತಿ ನಿತ್ಯದ ಕೆಲಸ. ಆದರೆ ಈ ಬಾರಿ ಈ ಮೂವರು ಪೊಲೀಸರ ಕಳ್ಳಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Delhi 3 traffic police suspended after Cops dividing bribe money video surface ckm

ದೆಹಲಿ(ಆ.18) ಪೊಲೀಸರು ಲಂಚ ಪಡೆಯುತ್ತಾರೆ ಅನ್ನೋ ಆರೋಪಗಳು ಹೊಸದಲ್ಲ. ಇದೀಗ ಟ್ರಾಫಿಕ್ ಪೊಲೀಸರ ಕಳ್ಳಾಟವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಸಾಗುವ ವಾಹನ ಸವಾರರ ಹಿಡಿದು ದಂಡ ಹಾಕಿದ್ದಾರೆ. ಬಳಿಕ ದಂಡವನ್ನು ಸರ್ಕಾರಕ್ಕೆ ಪಾವತಿಯಾಗುಂತೆ ಕಟ್ಟಿಸಿಕೊಂಡಿಲ್ಲ. ತಮ್ಮ ಜೇಬು ತುಂಬಿಸಿಕೊಂಡಿದ್ದಾರೆ. ಹೀಗೆ ಸ್ವೀಕರಿಸಿದ ಲಂಚದ ಹಣವನ್ನು ಮೂವರು ಪೊಲೀಸರು ಸಮನಾಗಿ ಹಂಚಿದ್ದಾರೆ. ಈ ದೃಶ್ಯ ಪಕ್ಕದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪರಿಣಾಮ ಈ ಮೂವರು ಟ್ರಾಫಿಕ್ ಪೊಲೀಸರು ಸೇವೆಯಿಂದ ಅಮಾನತ್ತಾದ ಘಟನೆ ದೆಹಲಿಯಲ್ಲಿ ನಡೆದಿದೆ.

ಘಾಝಿಪುರದ ಥ್ರಿಲ್ ಲೌರಿ ಸರ್ಕಲ್ ಪೊಲೀಸ್ ಚೌಕಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರ ನಿಯಮ ಉಲ್ಲಂಘನೆಯನ್ನೇ ಬಂಡವಾಳ ಮಾಡಿಕೊಂಡ ಈ ಪೊಲೀಸರು, ಒಬ್ಬೊಬ್ಬರನ್ನೇ ಹಿಡಿದು ದಂಡ ಹಾಕಿದ್ದಾರೆ. ಆದರೆ ದಂಡ ಮಾತ್ರ ಸರ್ಕಾರದ ಖಜಾನೆಗೆ ಸೇರಿಲ್ಲ. ಬದಲಾಗಿದೆ ಈ ಪೊಲೀಸರ ಜೇಬು ಸೇರಿದೆ. 

Viral Video: ಅಟಲ್‌ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ, ಜುಟ್ಟು ಹಿಡಿದು ರಕ್ಷಿಸಿದ ಕ್ಯಾಬ್‌ ಡ್ರೈವರ್!

ಈ ವಿಡಿಯೋದಲ್ಲಿ ವಾಹನ ಚಾಲಕನೊಬ್ಬ ಚೌಕಿಯ ಬಳಿ ಬಂದು ಪೊಲೀಸರ ಜೊತೆ ಮಾತನಾಡುವ ದೃಶ್ಯವಿದೆ. ಕೆಲ ಹೊತ್ತಿನ ಮಾತುಕತೆ ಬಳಿಕ ಟ್ರಾಫಿಕ್ ಪೊಲೀಸ್ ಆತನಿಂದ ಲಂಚವಾಗಿ ಹಣ ಪಡೆದಿದ್ದಾರೆ. ಆದರೆ ನೇರವಾಗಿ ಹಣ ಪಡೆಯದೇ, ಕುಳಿತಿಕೊಂಡ ಬಳಿ ಇಡುವಂತೆ ಸೂಚಿದ್ದಾನೆ. ಲಂಚದ ರೂಪದಲ್ಲಿ ಹಣ ಇಟ್ಟು ವಾಹನ ಚಾಲಕ ತೆರಳಿದ್ದಾನೆ.

ಮತ್ತೊಂದು ವಿಡಿಯೋದಲ್ಲಿ ಈ ಮೂವರು ಪೊಲೀಸರು ಅದೇ ಸ್ಥಳಕ್ಕೆ ಬಂದು, ತಮ್ಮಲ್ಲಿರುವ ಹಣವನ್ನು ಸಮನಾಗಿ ಹಂಚಿಕೆ ಮಾಡಿದ್ದಾರೆ. ಅಂದಿನ ಲಂಚದ ಸಂಪಾದನೆಯನ್ನು ಸಮನಾಗಿ ಹಂಚಿ ನೆಮ್ಮದಿಯಿಂದ ತೆರಳಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಮೂವರು ಟ್ರಾಫಿಕ್ ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

 

 

ಮೂವರು ಪೊಲೀಸರು ಲಂಚ ಸ್ವೀಕರಿಸಿ ಹಂಚುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ತಕ್ಷಣವೇ ಮೂವರು ಟ್ರಾಫಿಕ್ ಪೊಲೀಸರನ್ನು ಅಮಾನತು ಮಾಡಲಾಗಿದೆ. ಈ ಕುರಿತು ಸಂಬಂಧಿಸಿದ ಇಲಾಖೆ ತನಿಖೆ ನಡೆಸಲಿದೆ ಎಂದು ವಿಕೆ ಸಕ್ಸೇನಾ ಹೇಳಿದ್ದಾರೆ. ಇದೇ ವೇಳೆ ಈ ರೀತಿ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ. ಈ ಮೂವರು ಇದೇ ರೀತಿ ಹಲವು ಬಾರಿ ಲಂಚ ಪಡೆದಿರುವ ಸಾಧ್ಯತೆ ಇದೆ. ಹೀಗಾಗಿ ತನಿಖಾ ತಂಡ ಸಂಪೂರ್ಣವಾಗಿ ತನಿಖೆ ನಡೆಸುಲು ಸೂಚಿಸಲಾಗಿದೆ.

VAC Traffic Signal: ಬೆಂಗ್ಳೂರಲ್ಲಿ ಕೆಲಸ ಮಾಡೋಕೆ ಶುರು ಮಾಡಿದ AI ಟ್ರಾಫಿಕ್‌ ಸಿಗ್ನಲ್‌, ಇದರ ಚಿಹ್ನೆಗಳ ಅರ್ಥ ತಿಳಿದುಕೊಳ್ಳಿ!
 

Latest Videos
Follow Us:
Download App:
  • android
  • ios