ಸುಮ್ಮನಿದ್ದ ಶ್ವಾನಕ್ಕೆ ಕಿರುಕುಳ ಬಣ್ಣದ ಹುಡಿ ಎರಚಿ ಕೆರಳಿಸಿದ ಯುವಕರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಹೋಳಿ ಹಬ್ಬ ಈಗಾಗಲೇ ಮುಗಿದು ಹೋಗಿದೆ. ದೇಶಾದ್ಯಂತ ಮಾ.17 ಹಾಗೂ 18 ರಂದು ಬಣ್ಣಗಳ ಹಬ್ಬ ಹೋಳಿಯನ್ನು ಜನ ಸಂಭ್ರಮದಿಂದ ಆಚರಿಸಿದರು. ಆದರೆ ಹೋಳಿಯ ಹೆಸರಲ್ಲಿ ಯುವಕರು ಹುಚ್ಚಾಟ ಮೆರೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡ್‌ನ ಡೆಹ್ರಾಡೂನ್‌ನ ವಿಡಿಯೋ ಇದಾಗಿದ್ದು, ಕಟ್ಟಿ ಹಾಕಿದ ನಾಯೊಯೊಂದಕ್ಕೆ ಹೋಳಿ ಆಚರಣೆ ಮಾಡುವ ಭರದಲ್ಲಿ ಯುವಕರು ಬಣ್ಣದ ಹುಡಿಯನ್ನು ತಂದು ತಂದು ಅದರ ಮುಖಕ್ಕೆ ಬಿಸಾಕುತ್ತಾರೆ. ಇದರಿಂದ ಕಿರಿ ಕಿರಿಗೊಳಗಾಗುವ ನಾಯಿ ಜೋರಾಗಿ ಬೊಗಳಿ ತನ್ನ ಸಿಟ್ಟು ತೋರಿಸುತ್ತದೆ. ಸುಮ್ಮನಿದ್ದ ನಾಯಿಗೆ ಈ ರೀತಿ ಕಿರುಕುಳ ನೀಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. 

ಈ ವಿಡಿಯೋವನ್ನು ಉತ್ತರಾಖಂಡದ (Uttrakhand) ಡೆಹ್ರಾಡೂನ್‌ನಿಂದ (Dehradun) ಆದಿತ್ಯ ಠಾಕೂರ್ (Aditya Thakur) ಎಂಬುವರು ಪೋಸ್ಟ್ ಮಾಡಿದ್ದಾರೆ. ಕಟ್ಟಿ ಹಾಕಿದ ನಾಯಿಯ ಮುಖಕ್ಕೆ ಬಣ್ಣ ಬೀಳುತ್ತಿದ್ದಂತೆ ಸಿಟ್ಟುಗೊಂಡ ಅದು ಬೆದರಿ ಬೊಬ್ಬೆ ಹೊಡೆಯಲು ಶುರು ಮಾಡುತ್ತದೆ. ಆದರೂ ಬಿಡದ ಯುವಕನೋರ್ವ ಮತ್ತೆ ಅದರ ಮೇಲೆ ಬಣ್ಣವೆರಚುತ್ತಾನೆ. ಇದನ್ನು ಆತನ ಸ್ನೇಹಿತರಾರೋ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

View post on Instagram

ಇದು 2022 ಆಗಿದ್ದರೂ ಪ್ರಾಣಿಗಳ ಮೇಲಿನ ಹಿಂಸೆ ಮಾತ್ರ ನಿಂತಿಲ್ಲ. ಪ್ರಾಣಿಗಳಿಗೆ ತುಂಬಾ ನೋವು ಮತ್ತು ಮಾನಸಿಕ ಆಘಾತವನ್ನು ಉಂಟುಮಾಡುವುದು ತಮಾಷೆಯಲ್ಲ ಎಂಬುದು ಜನರಿಗೆ ಇನ್ನೂ ಅರ್ಥವಾಗುತ್ತಿಲ್ಲ. ಈ ವೀಡಿಯೊದಲ್ಲಿ ನಾಯಿ ಸ್ಪಷ್ಟವಾಗಿ ತೊಂದರೆಯಲ್ಲಿರುವಂತೆ ಕಾಣಿಸುತ್ತದೆ. ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

Holi 2022: ಬಣ್ಣದೋಕುಳಿಯಲ್ಲಿ ಕಣ್ಣುಗಳನ್ನು ರಕ್ಷಿಸುವುದು ಹೇಗೆ ?

ರಾಸಾಯನಿಕಗಳನ್ನು ಒಳಗೊಂಡಿರುವ ಮತ್ತು ನಿಮ್ಮ ಚರ್ಮವನ್ನು ಕೆರಳಿಸುವ ಬಣ್ಣಗಳನ್ನು ನೀವಾದರೋ ತೊಳೆಯಬಹುದು, ಆದರೆ ಪ್ರಾಣಿಗಳಿಗೆ ಇದು ಸಾಧ್ಯವಿಲ್ಲ. ಅವರ ತುಪ್ಪಳದ ಮೇಲೆ ಬಣ್ಣಗಳನ್ನು ಹಾಕುವುದು ತಮಾಷೆಯಲ್ಲ. ಇದು ದಿನಗಳು ಮತ್ತು ತಿಂಗಳುಗಳವರೆಗೆ ಅವರನ್ನು ಕೆರಳಿಸುತ್ತದೆ. ಮನುಷ್ಯರಂತೆ ವರ್ತಿಸಿ ಅಥವಾ ಬಹುಶಃ ನಾನು ಹೇಳಬೇಕು ಎಂದಾದರೆ ಪ್ರಾಣಿಗಳಂತೆ ವರ್ತಿಸಿ, ಏಕೆಂದರೆ ಅವರು ಖಂಡಿತವಾಗಿಯೂ ನಮಗಿಂತ ಉತ್ತಮರು ಎಂದು ಬರೆದು ಯುವಕರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಲಾಗಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ವೀಡಿಯೊವನ್ನು ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 

Holi Hair Care: ಹೋಳಿಯ ರಂಗಿನಿಂದ ಕೂದಲು ಹಾನಿಯಾಗದಿರಲು ಹೀಗೆ ಮಾಡಿ 
ಬಾನಿ ಜೆ ( Bani J) ಮತ್ತು ಕರಿಷ್ಮಾ ತನ್ನಾ (Karishma Tanna) ಅವರಂತಹ ಹಲವಾರು ಸೆಲೆಬ್ರಿಟಿಗಳು ಕೂಡ ಈ ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ. ಹೀಗೆ ಪ್ರಾಣಿಗೆ ಬಣ್ಣ ಹಚ್ಚಿ ಹಿಂಸೆ ನೀಡಿದವರನ್ನು ಪತ್ತೆಹಚ್ಚಲಾಗಿದೆ ಮತ್ತು ಅವರು ಕ್ಷಮೆಯಾಚಿಸಿದ್ದಾರೆ ಮತ್ತು ನಾಯಿ ಈಗ ಚೆನ್ನಾಗಿದೆ. ಆದರೆ ಇದು ನಮ್ಮ ದೇಶದ ಸ್ಥಿತಿ. ಕ್ರೂರ ಮನುಷ್ಯರು, ಅನಕ್ಷರಸ್ಥರು. ಅವರು ಕೆಲವು ವಿಕೃತವಾದ ಆನಂದವನ್ನು ಪಡೆಯುತ್ತಾರೆ. ಹತಾಶೆಗೊಂಡ ಮಾನವರು ಎಂದು ಕರಿಷ್ಮಾ ತನ್ನಾ ಬರೆದಿದ್ದಾರೆ. ಇದಕ್ಕೆ ಬಾನಿ ಜೆ, 'ಓ ಮೈ ಗಾಡ್' ಎಂದು ಕಾಮೆಂಟ್ ಮಾಡಿದ್ದಾರೆ.

ಕಾಮದಹನವನ್ನು ಫಾಲ್ಗುಣ ಮಾಸದ ಪೂರ್ಣಿಮ((Full Moon night) ತಿಥಿಯಂದು ರಾತ್ರಿ ಆಚರಿಸಲಾಗುತ್ತದೆ. ಹೋಲಿಕಾ ದಹನ್ ಎಂದೂ ಕರೆಯಲ್ಪಡುವ ಈ ವಿಧಿವಿಧಾನದಿಂದ ಹಬ್ಬ ಆರಂಭವಾಗುತ್ತದೆ. ಅಕ್ಕಪಕ್ಕದ ಜನರೆಲ್ಲ ಸೇರಿ ಒಂದೆಡೆ ಬೆಂಕಿ ಹಾಕುತ್ತಾರೆ. ಆಸಕ್ತಿಕರ ವಿಷಯವೆಂದರೆ ಈ ಆಚರಣೆಗೂ ವಿಷ್ಣುವಿನ ನಾಲ್ಕನೇ ಅವತಾರವಾದ ಭಗವಾನ್ ನರಸಿಂಹ(Lord Narasimha)ನಿಗೂ ಸಂಬಂಧವಿದೆ. ಹಾಗಾಗಿ, ಹೋಳಿ ಹುಣ್ಣಿಮೆಯ ದಿನ ಜನರು ನರಸಿಂಹನನ್ನು ನೆನೆಯುತ್ತಾರೆ.