ಭಾರತ ಸರ್ಕಾರ, ಪಾಕಿಸ್ತಾನದೊಳಗಿನ ನಾಗರಿಕರನ್ನು 'ಉಗ್ರರು' ಎಂದು ಕರೆದು ಅವರನ್ನು ಹತ್ಯೆ ಮಾಡುವುದಾಗಿ ಹೇಳಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅಂತಾರಾಷ್ಟ್ರೀಯ ಸಮಯ ದಾಯವು ಭಾರತದ ಈ ಹೀನ ಹಾಗೂ ದುಷ್ಕೃತ್ಯವನ್ನು ತಡೆಯಬೇಕು' ಎಂದು ಕಿಡಿಕಾರಿದ ಪಾಕಿಸ್ತಾನದ ವಿದೇಶಾಂಗ ಇಲಾಖೆ 

ನವದೆಹಲಿ(ಏ.07): ಭಾರತದಲ್ಲಿ ದುಷ್ಕೃತ್ಯ ಎಸಗುವ ಉಗ್ರರು ಪಾಕಿಸ್ತಾನದೊಳಗೆ ನುಗ್ಗಿದರೂ, ಆ ದೇಶದೊಳಗೆ ನುಗ್ಗಿ ಹೊಡಿತೀವೆ ಎಂಬ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಪ್ರಚೋದನಾಕಾರಿಯಾಗಿದೆ ಮತ್ತು ಶಾಂತಿ ಕದಡುವಂತಿದೆ ಎಂದು ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಂಗ್ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆ, 'ಭಾರತ ಸರ್ಕಾರ, ಪಾಕಿಸ್ತಾನದೊಳಗಿನ ನಾಗರಿಕರನ್ನು 'ಉಗ್ರರು' ಎಂದು ಕರೆದು ಅವರನ್ನು ಹತ್ಯೆ ಮಾಡುವುದಾಗಿ ಹೇಳಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅಂತಾರಾಷ್ಟ್ರೀಯ ಸಮಯ ದಾಯವು ಭಾರತದ ಈ ಹೀನ ಹಾಗೂ ದುಷ್ಕೃತ್ಯವನ್ನು ತಡೆಯಬೇಕು' ಎಂದು ಕಿಡಿಕಾರಿದೆ. 

ಉಗ್ರರ ದೇಶದೊಳಗೆ ನುಗ್ಗಿ ಹೊಡಿತೀವಿ: ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದೇನು?

ಪಾಕಿಸ್ತಾನದಲ್ಲಿ ಅನಾಮ ಧೇಯ ವ್ಯಕ್ತಿಗಳಿಂದ ಹತರಾದ 20ಕ್ಕೂ ಹೆಚ್ಚು ಉಗ್ರರ ಸಾವಿಗೆ ಭಾರತ ಕಾರಣ ಎಂದು ಬ್ರಿಟನ್ ನ ಗಾರ್ಡಿಯನ್ ಪತ್ರಿಕೆ ವರದಿಗೆ ಪ್ರತಿಕ್ರಿಯಿಸಿದ ಸಚಿವ ಸಿಂಗ್ ಭಾರತಕ್ಕೆ ತೊಂದರೆ ಕೊಡುವವರು ಪಾಕಿಸ್ತಾನಕ್ಕೆ ತೆರಳಿದರೂ, ಅಲ್ಲೇ ಹೊಗಿ ಕೊಲ್ಲುತ್ತೇವೆ' ಎಂದಿದ್ದರು.