ಉಗ್ರರ ದೇಶದೊಳಗೆ ನುಗ್ಗಿ ಹೊಡಿತೀವಿ: ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದೇನು?
ದೇಶದ ಶಾಂತಿಯನ್ನು ಹಾಳುಗೆಡವಲು ಯತ್ನಿಸುವ ಉಗ್ರರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿರುವ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಒಂದು ವೇಳೆ ಉಗ್ರರು ಅವರು ಪಾಕಿಸ್ತಾನದೊಳಗೆ ನುಗ್ಗಿದರೆ, ಅವರನ್ನು ಆ ದೇಶದೊಳಗೆ ನುಗ್ಗಿ ಅಲ್ಲಿಯೇ ಮುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ (ಏ.06): ದೇಶದ ಶಾಂತಿಯನ್ನು ಹಾಳುಗೆಡವಲು ಯತ್ನಿಸುವ ಉಗ್ರರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿರುವ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಒಂದು ವೇಳೆ ಉಗ್ರರು ಅವರು ಪಾಕಿಸ್ತಾನದೊಳಗೆ ನುಗ್ಗಿದರೆ, ಅವರನ್ನು ಆ ದೇಶದೊಳಗೆ ನುಗ್ಗಿ ಅಲ್ಲಿಯೇ ಮುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಾಕ್‌ನಲ್ಲಿ ಕಳೆದ 2 ವರ್ಷದಲ್ಲಿ ನಡೆದ 20 ಉಗ್ರರ ನಿಗೂಢ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಬ್ರಿಟನ್ ಪತ್ರಿಕೆ ವರದಿ ಬೆನ್ನಲ್ಲೇ, ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಸಚಿವ ಸಿಂಗ್ ಈ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಈಗಾಗಲೇ ಸತ್ಯವನ್ನು ಸ್ಪಷ್ಟಪಡಿಸಿದ್ದಾರೆ. ಭಾರತಕ್ಕೆ ಈ ಸಾಮರ್ಥ್ಯ ಇದೆ ಮತ್ತು ಇದೀಗ ಪಾಕಿಸ್ತಾನ ಕೂಡಾ ಅದನ್ನು ಅರ್ಥಮಾಡಿಕೊಳ್ಳುತ್ತಿದೆ ಎಂದು ಸಿಂಗ್ ಹೇಳಿದರು.
ವನವಾಸ ಮುಗಿಸಿ ಬಂದ ಟೀವಿ ರಾಮನಿಗೆ ಗೆಲುವು ಒಲಿವುದೇ?: ಎಸ್ಪಿಯಿಂದ ಸುನಿತಾ ಪ್ರಧಾನ್ ಸವಾಲು
ಸೈನಿಕರು ನಮ್ಮನ್ನು ರಕ್ಷಿಸುವ ದೇವರಿದ್ದಂತೆ: ನಿಕರು ಅತ್ಯಂತ ಕನಿಷ್ಠ ತಾಪಮಾನದಲ್ಲಿ ಶತ್ರುಗಳು ಹಾರಿಸುವ ಗುಂಡಿಗೆ ತಮ್ಮ ಎದೆಯೊಡ್ಡಿ ರಾಷ್ಟ್ರದ ಜನತೆ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಿಸುವಂತೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ನಮ್ಮನ್ನು ರಕ್ಷಿಸುವ ದೇವರಿದ್ದಂತೆ ಎಂಬುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದರು. ಈ ವೇಳೆ ಮಾತನಾಡಿದ ಅವರು, ‘ಅತ್ಯಂತ ಕೊರೆವ ಚಳಿಯಲ್ಲಿ ಎಲ್ಲರೂ ಮನೆಯೊಳಗೆ ಇರಲು ಬಯಸುತ್ತಾರೆ.
ಆದರೆ ನೀವು (ಸೈನಿಕರು) ಅಂತಹ ಪ್ರತಿಕೂಲ ಹವಾಮಾನದಲ್ಲೂ ನಮ್ಮ ದೇಶವನ್ನು ರಕ್ಷಿಸುವ ಛಲದೊಂದಿಗೆ ಹೋರಾಡುತ್ತೀರಿ. ಇದು ದೈವಿಕ ಕೆಲಸವಾಗಿದ್ದು, ಶತ್ರುಗಳ ಮೇಲೆ ಗುಂಡು ಹಾರಿಸುವ ಜೊತೆಗೆ ತಮ್ಮದೇ ಎದೆಯೊಡ್ಡಿ ಗುಂಡು ನಮ್ಮ ದೇಶ ಪ್ರವೇಶಿಸುವುದನ್ನು ತಡೆಯುತ್ತೀರಿ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ನಿಮ್ಮನ್ನು ಸಂಕಷ್ಟಹರ ದೇವಾನುದೇವತೆಗಳೆಂದು ಕರೆದರೂ ಅಡ್ಡಿಯಿಲ್ಲ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
Lok Sabha Election 2024: ಬಿಹಾರದಲ್ಲಿ ಮತ್ತೆ ಕ್ಲೀನ್‌ಸ್ವೀಪ್ ನಿರೀಕ್ಷೆಯಲ್ಲಿ ಎನ್‌ಡಿಎ ಮೈತ್ರಿಕೂಟ!
ಶೌರ್ಯದ ರಾಜಧಾನಿ: ಭಾರತಕ್ಕೆ ದೆಹಲಿ ರಾಷ್ಟ್ರ ರಾಜಧಾನಿಯಾದರೆ ಮುಂಬೈ ಆರ್ಥಿಕ ರಾಜಧಾನಿಯಾಗಿದೆ. ಬೆಂಗಳೂರು ತಾಂತ್ರಿಕ ರಾಜಧಾನಿಯಾಗಿ ಗುರುತಿಸಲ್ಪಟ್ಟಿದೆ. ಪ್ರತಿಕೂಲ ಹವಾಮಾನದಲ್ಲೂ ಸೈನಿಕರು ಶತ್ರುಗಳ ವಿರುದ್ಧ ಸದಾಕಾಲ ಕೆಚ್ಚೆದೆಯಿಂದ ಹೋರಾಡುವುದರಿಂದ ಲೇಹ್‌ಅನ್ನು ಭಾರತದ ಶೌರ್ಯ ಮತ್ತು ಧೈರ್ಯದ ರಾಜಧಾನಿ ಎನ್ನಬಹುದು ಎಂದು ತಿಳಿಸಿದರು.