MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಪಂಜಾಬ್‌ ಚುನಾವಣೆ ಸಮಯದಲ್ಲೇ ಸಿಎಂ ಭಗವಂತ್‌ ಮಾನ್‌ 'ಗುರುದ್ರೋಹಿ' ಎಂದು ಘೋಷಿಸಿದ ಅಖಲ್‌ ತಖ್ತ್‌

ಪಂಜಾಬ್‌ ಚುನಾವಣೆ ಸಮಯದಲ್ಲೇ ಸಿಎಂ ಭಗವಂತ್‌ ಮಾನ್‌ 'ಗುರುದ್ರೋಹಿ' ಎಂದು ಘೋಷಿಸಿದ ಅಖಲ್‌ ತಖ್ತ್‌

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸಿಖ್ಖರ ಅತ್ಯುನ್ನತ ಧಾರ್ಮಿಕ ಪೀಠವಾದ 'ಅಖಲ್ ತಖ್ತ್' 'ಗುರು ದ್ರೋಹಿ' ಎಂದು ಘೋಷಿಸಿದೆ. ವಿವಾದಾತ್ಮಕ ವಿಡಿಯೋವೊಂದರ ಕುರಿತು ಸುಳ್ಳು ಹೇಳಿದ ಆರೋಪದ ಮೇಲೆ ಈ ಕಠಿಣ ನಿಲುವು ತಳೆಯಲಾಗಿದೆ.

3 Min read
Author : Santosh Naik
Published : Jun 16 2026, 02:26 PM IST
Share this Photo Gallery
  • FB
  • TW
  • Linkdin
  • Whatsapp
18
ಪಂಜಾಬ್‌ ಸಿಎಂ ವಿರುದ್ಧ ಕಠಿಣ ನಿಲುವು ತಳೆದ ತಖ್ತ್‌
Image Credit : ANI

ಪಂಜಾಬ್‌ ಸಿಎಂ ವಿರುದ್ಧ ಕಠಿಣ ನಿಲುವು ತಳೆದ ತಖ್ತ್‌

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಅತ್ಯಂತ ಕಠಿಣ ನಿಲುವು ತಳೆದಿರುವ ಸಿಖ್ಖರ ಅತ್ಯುನ್ನತ ಧಾರ್ಮಿಕ ಪೀಠವಾದ ‘ಅಖಲ್ ತಖ್ತ್’ (Akal Takht), ಅವರನ್ನು ‘ಗುರು ದ್ರೋಹಿ’ (Anti-Guru) ಎಂದು ಘೋಷಿಸಿದೆ. ಅಷ್ಟೇ ಅಲ್ಲದೆ, ಇಡೀ ಸಿಖ್ ಸಮುದಾಯ ಅಥವಾ ‘ಪಂಥ್’ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಹೊಂದಿರಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ. ಅಕಲ್ ತಖ್ತ್ ಸಿಖ್ ಧರ್ಮದ ಅತ್ಯುನ್ನತ ಮತ್ತು ಪವಿತ್ರ ಧಾರ್ಮಿಕ ಪೀಠವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಏನಿದು ವಿವಾದ? ಕರಗಿದ ಎಐ (AI) ಸುಳ್ಳಿನ ಮುಖವಾಡ!
Image Credit : ANI

ಏನಿದು ವಿವಾದ? ಕರಗಿದ ಎಐ (AI) ಸುಳ್ಳಿನ ಮುಖವಾಡ!

ಸಿಖ್ ಶ್ರದ್ಧಾಳುಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಅಖಲ್ ತಖ್ತ್ ಸಮನ್ಸ್ ಜಾರಿ ಮಾಡಿತ್ತು. ಇದರನ್ವಯ ಅವರು ಜನವರಿ 15 ರಂದು ಪೀಠದ ಮುಂದೆ ಹಾಜರಾಗಿದ್ದರು. ಈ ವೇಳೆ, ಭಗವಂತ್ ಮಾನ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಸಿಖ್ ಗುರುಗಳ ಚಿತ್ರಗಳ ಮೇಲೆ ಮದ್ಯವನ್ನು ಚಿಮುಕಿಸುತ್ತಿರುವ ವೀಡಿಯೋ ಒಂದರ ಕುರಿತು ಧರ್ಮಗುರುಗಳು ಎಎಪಿ (AAP) ನಾಯಕನನ್ನು ತೀವ್ರವಾಗಿ ಪ್ರಶ್ನಿಸಿದ್ದರು.

Related Articles

Related image1
ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಪುತ್ರಿಗೆ ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ಕಿರುಕುಳ, ಜೀವಬೆದರಿಕೆ!
Related image2
ಇಂದಿನಿಂದ ಆಪ್‌ ಕಾ ಪಂಜಾಬ್: ಸಿಎಂ ಆಗಿ ಭಗವಂತ್‌ ಮಾನ್‌ ಪ್ರಮಾಣವಚನ ಸ್ವೀಕಾರ
38
ಆರೋಪ ನಿರಾಕರಿಸಿದ್ದ ಮಾನ್‌
Image Credit : Facebook

ಆರೋಪ ನಿರಾಕರಿಸಿದ್ದ ಮಾನ್‌

ಆಗ ಈ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದ ಮುಖ್ಯಮಂತ್ರಿ ಮಾನ್, "ಆ ವೀಡಿಯೋ ನಕಲಿಯಾಗಿದ್ದು, ಅದನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗಿದೆ" ಎಂದು ಸಮರ್ಥಿಸಿಕೊಂಡಿದ್ದರು. ಆದರೆ, ಸೋಮವಾರ ಈ ಕುರಿತ ವಿಧಿವಿಜ್ಞಾನ (Forensic) ಪ್ರಯೋಗಾಲಯದ ವರದಿ ಬಹಿರಂಗವಾಗಿದ್ದು, ಆ ವೀಡಿಯೋ ಅಸಲಿ ಎಂದು ಸಾಬೀತಾಗಿದೆ. ಇದರ ಬೆನ್ನಲ್ಲೇ ಆಡಳಿತಾರೂಢ ಎಎಪಿ ಪಕ್ಷವು ಪ್ರತ್ಯುತ್ತರ ನೀಡಿ, "ವರದಿಯಲ್ಲಿ ವೀಡಿಯೋ ಅಸಲಿ ಎಂದು ಹೇಳಲಾಗಿದೆಯೇ ಹೊರತು, ಅದರಲ್ಲಿರುವ ವ್ಯಕ್ತಿ ಭಗವಂತ್ ಮಾನ್ ಹೌದೋ ಅಲ್ಲವೋ ಎಂಬುದು ಸ್ಪಷ್ಟವಾಗಿಲ್ಲ" ಎಂದು ವಾದಿಸಿದೆ.

48
ಲ್ಯಾಬ್ ವರದಿಯಿಂದ ಬಯಲಾಯ್ತು ಸಿಎಂ ಸುಳ್ಳು
Image Credit : X

ಲ್ಯಾಬ್ ವರದಿಯಿಂದ ಬಯಲಾಯ್ತು ಸಿಎಂ ಸುಳ್ಳು

ಸೋಮವಾರ ಐದು ಮಂದಿ ಸಿಂಗ್ ಸಾಹಿಬ್‌ಗಳ ಮಹತ್ವದ ಸಭೆಯ ನಂತರ, ಅಖಲ್ ತಖ್ತ್ ಜತ್ಹೇದಾರ್ ಕುಲದೀಪ್ ಸಿಂಗ್ ಗರ್ಗಜ್ ಅವರು ಈ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದರು. "ನಾವು ವೀಡಿಯೋ ಕುರಿತು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದಾಗ, ಅವರು ಅದು ಎಐ-ಜನರೇಟೆಡ್ (AI-generated) ಎಂದು ಹೇಳಿದ್ದರು. ಈ ಬಗ್ಗೆ ಪುರಾವೆ ನೀಡುವಂತೆ ನಾವು ಅವರಿಗೆ ಸೂಚಿಸಿದ್ದೆವು. ಆದರೆ ಆರು ತಿಂಗಳಾದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ನಾವು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಎರಡು ಪ್ರಮುಖ ಪ್ರಯೋಗಾಲಯಗಳಲ್ಲಿ ಆ ವೀಡಿಯೋವನ್ನು ಪರೀಕ್ಷೆಗೆ ಒಳಪಡಿಸಿದೆವು. ವರದಿಯಲ್ಲಿ ಆ ವೀಡಿಯೋ ನಕಲಿಯೂ ಅಲ್ಲ, ಎಐ ಮೂಲಕ ಸೃಷ್ಟಿಸಿದ್ದೂ ಅಲ್ಲ, ಅದು ಸಂಪೂರ್ಣ ಅಸಲಿ ಎಂಬುದು ಸಾಬೀತಾಗಿದೆ. ಹಾಗಾಗಿ ಇಂದು ‘ಪಂಥ್’ ಈ ವಿಷಯದಲ್ಲಿ ಕಠಿಣ ನಿರ್ಧಾರ ಕೈಗೊಂಡಿದೆ" ಎಂದು ಗರ್ಗಜ್ ತಿಳಿಸಿದ್ದಾರೆ.

58
ಅಖಲ್‌ ತಖ್ತ್‌ಗೆ ಸುಳ್ಳು ಹೇಳಿದ್ದಾರೆ
Image Credit : x.com@BhagwantMann

ಅಖಲ್‌ ತಖ್ತ್‌ಗೆ ಸುಳ್ಳು ಹೇಳಿದ್ದಾರೆ

ಜತ್ಹೇದಾರ್ ಅವರು ಮಾನ್ ವಿರುದ್ಧ ವಾಗ್ದಾಳಿ ನಡೆಸಿ, "ಮುಖ್ಯಮಂತ್ರಿಯವರು ಪವಿತ್ರ ಅಖಲ್ ತಖ್ತ್‌ಗೆ ಬಂದು ಸುಳ್ಳು ಹೇಳಿದ್ದಾರೆ. ಹೀಗಾಗಿ ಅವರನ್ನು ಗುರುಗಳ ಮುಂದೆ ಅಪರಾಧಿ ಅಥವಾ ‘ಗುರು ದ್ರೋಹಿ’ ಎಂದು ಘೋಷಿಸಲಾಗಿದೆ. ಸಿಖ್ಖರಿಗೆ ಮುಖ್ಯಮಂತ್ರಿಯವರ ಮೇಲೆ ಯಾವುದೇ ನಿರೀಕ್ಷೆಗಳಿಲ್ಲ. ಹೀಗಾಗಿ ಇಡೀ ಪಂಥ್ ಮತ್ತು ಗುರುಗಳ ಅನುಯಾಯಿಗಳು ಅವರೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು" ಎಂದು ಕರೆ ನೀಡಿದ್ದಾರೆ.

68
ಪಂಜಾಬ್ ಇಡೀ ಸಚಿವ ಸಂಪುಟಕ್ಕೆ ಸಮನ್ಸ್!
Image Credit : x.com@BhagwantMann

ಪಂಜಾಬ್ ಇಡೀ ಸಚಿವ ಸಂಪುಟಕ್ಕೆ ಸಮನ್ಸ್!

ಮುಂದಿನ ವರ್ಷ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿರುವ ಬೆನ್ನಲ್ಲೇ ಅಖಲ್ ತಖ್ತ್ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಇತ್ತೀಚೆಗೆ ಪಂಜಾಬ್ ಸರ್ಕಾರ ಜಾರಿಗೆ ತಂದ ‘ಜಗತ್‌ ಜೋತ್ ಶ್ರೀ ಗುರು ಗ್ರಂಥ್ ಸಾಹಿಬ್ ಸತ್ಕಾರ್ (ತಿದ್ದುಪಡಿ) ವಿಧೇಯಕ, 2026’ ಕ್ಕೆ ಸಂಬಂಧಿಸಿದಂತೆ ಜೂನ್ 29 ರಂದು ತನ್ನ ಮುಂದೆ ಹಾಜರಾಗುವಂತೆ ಪಂಜಾಬ್‌ನ ಇಡೀ ಸಚಿವ ಸಂಪುಟಕ್ಕೆ ಸಮನ್ಸ್ ಜಾರಿ ಮಾಡಿದೆ. ಸಿಖ್ ಧರ್ಮದ ಪವಿತ್ರ ಗ್ರಂಥಕ್ಕೆ ಅಪಚಾರ ಎಸಗುವ ಕೃತ್ಯಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಇದಾಗಿದೆ.

78
ಗುರುಗಳ ಸಿಂಹಾಸನಕ್ಕೆ ಸವಾಲು ಹಾಕಬಾರದು
Image Credit : ANI

ಗುರುಗಳ ಸಿಂಹಾಸನಕ್ಕೆ ಸವಾಲು ಹಾಕಬಾರದು

ಈ ಬಗ್ಗೆ ಮಾತನಾಡಿದ ಗರ್ಗಜ್, "ಗುರುಗಳ ಸಿಂಹಾಸನಕ್ಕೆ ಯಾರೇ ಆಗಲಿ ಸವಾಲು ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಇತ್ತೀಚೆಗೆ ಪಂಜಾಬ್ ಸರ್ಕಾರವು ಸಿಖ್ ಸಮುದಾಯ, ಧಾರ್ಮಿಕ ಸಂಸ್ಥೆಗಳು ಅಥವಾ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯನ್ನು (SGPC) ಸಂಪರ್ಕಿಸದೆ ಏಕಪಕ್ಷೀಯವಾಗಿ ಈ ಕಾಯ್ದೆಯನ್ನು ತಂದಿದೆ. ಭಗವಂತ್ ಮಾನ್ ಸರ್ಕಾರ ಹಠಮಾರಿ ಧೋರಣೆ ಪ್ರದರ್ಶಿಸಿ ವಿಧಾನಸಭೆ ಮತ್ತು ರಾಜ್ಯಪಾಲರಿಂದ ಇದಕ್ಕೆ ಅನುಮೋದನೆ ಪಡೆದುಕೊಂಡಿದೆ. ಈ ಕಾನೂನು ‘ಪಂಥ್’ ಒಳಗೆ ಬಿರುಕು ಮೂಡಿಸುತ್ತದೆ. ಪಂಥ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ಕಾನೂನು ರೂಪಿಸುವ ಯಾವುದೇ ಅಧಿಕಾರ ಸರ್ಕಾರಕ್ಕಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.

88
ರಾಜೀನಾಮೆಗೆ ಕಾಂಗ್ರೆಸ್ ತೀವ್ರ ಒತ್ತಾಯ
Image Credit : ANI

ರಾಜೀನಾಮೆಗೆ ಕಾಂಗ್ರೆಸ್ ತೀವ್ರ ಒತ್ತಾಯ

ಅಖಲ್ ತಖ್ತ್ ತೀರ್ಪು ಹೊರಬೀಳುತ್ತಿದ್ದಂತೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಮುಖ್ಯಮಂತ್ರಿ ಭಗವಂತ್ ಮಾನ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಎಕ್ಸ್ (X) ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, "ಅಖಲ್ ತಖ್ತ್ ಸಾಹಿಬ್ ನಡೆಸಿದ ವಿಧಿವಿಜ್ಞಾನ ತನಿಖೆಯ ನಂತರ ಭಗವಂತ್ ಮಾನ್ ಅವರನ್ನು ‘ತಂಖೈಯಾ’ (ಧಾರ್ಮಿಕ ದುರ್ನಡತೆಯ ಅಪರಾಧಿ) ಎಂದು ಘೋಷಿಸಲಾಗಿದೆ ಮತ್ತು ಸಿಖ್ ಸಂಘಟನೆಯು ಅವರಿಂದ ದೂರವಿರಲು ಸೂಚಿಸಲಾಗಿದೆ. ಇಷ್ಟು ಗಂಭೀರವಾದ ನಿರ್ಧಾರದ ನಂತರ ಭಗವಂತ್ ಮಾನ್ ಸಿಎಂ ಹುದ್ದೆಯಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ಅಕಲ್ ತಖ್ತ್ ಸಾಹಿಬ್‌ನ ಸರ್ವೋಚ್ಚ ಅಧಿಕಾರ ಮತ್ತು ಸಿಖ್ ಭಾವನೆಗಳನ್ನು ಗೌರವಿಸಿ ಭಗವಂತ್ ಮಾನ್ ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಪಂಜಾಬ್
ಸಿಖ್ ಸಮುದಾಯ
ಭಾರತ
ಭಾರತ ಸುದ್ದಿ

Latest Videos
Recommended Stories
Recommended image1
ಬೆಂಗಳೂರಿನಿಂದ ರಾಮೇಶ್ವರ, ಮಧುರೈ, ಕನ್ಯಾಕುಮಾರಿಗೆ IRCTC ಟೂರ್ ಪ್ಯಾಕೇಜ್; ₹10 ಸಾವಿರಕ್ಕೆ 5 ದಿನದ ಪ್ರವಾಸ!
Recommended image2
ಕೇಂದ್ರ ಸರ್ಕಾರದ ನಡೆ ಟೀಕಿಸಿ ಹೊಸ ಅಪಾಯದ ಕುರಿತು ಎಚ್ಚರಿಕೆ ನೀಡಿದ ಕೆ. ಅಣ್ಣಾಮಲೈ
Recommended image3
ಯಾರ ಮೇಲೂ ಡಿಪೆಂಡ್‌ ಆಗ್ಬೇಡಿ; ಮದುವೆ ಬಗ್ಗೆ ಫಸ್ಟ್‌ ಟೈಮ್‌ ಮಾತನಾಡಿದ ಅಂಬಾನಿ ಸೊಸೆ Radhika Merchant
Related Stories
Recommended image1
ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಪುತ್ರಿಗೆ ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ಕಿರುಕುಳ, ಜೀವಬೆದರಿಕೆ!
Recommended image2
ಇಂದಿನಿಂದ ಆಪ್‌ ಕಾ ಪಂಜಾಬ್: ಸಿಎಂ ಆಗಿ ಭಗವಂತ್‌ ಮಾನ್‌ ಪ್ರಮಾಣವಚನ ಸ್ವೀಕಾರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved