India Corona Case ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಕೊರೋನಾ, ಹೋಮ್ ಕ್ವಾರಂಟೈನ್!
- ದೇಶದಲ್ಲಿ ಗಣನೀಯ ಏರಿಕೆ ಕಂಡ ಕೊರೋನಾ, ಆತಂಕ ಹೆಚ್ಚಳ
- ರಕ್ಷಣಾ ಸಚಿವರಿಗೆ ಅಂಟಿಕೊಂಡ ಕೊರೋನಾ, ಹೋಮ್ ಕ್ವಾರಂಟೈನ್
- ಸಂಪರ್ಕದಲ್ಲಿದ್ದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಮನವಿ

ನವದೆಹಲಿ(ಜ.10): ದೇಶದಲ್ಲಿ ಕೊರೋನಾ(Coronavirus Case) ಪ್ರಕರಣಗಳು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಈಗಾಗಲೇ ಪ್ರತಿ ದಿನ 1.5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗುತ್ತಿದೆ. ಇದರ ಜೊತೆಗೆ ಒಮಿಕ್ರಾನ್(Omicron) ವೇರಿಯೆಂಟ್ ಕೂಡ ಕಾಣಿಸಿಕೊಳ್ಳುತ್ತಿದೆ. ಈ ಆತಂಕದ ನಡುವೆ ಇದೀಗ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ(Rajnath Singh) ಕೊರೋನಾ ಅಂಟಿಕೊಂಡಿದೆ.
ಮೈಲ್ಡ್ ರೋಗಲಕ್ಷಣಗಳು ಕಂಡು ಬಂದ ಕಾರಣ ರಾಜನಾಥ್ ಸಿಂಗ್ ಇಂದು(ಜ.10) ಮಧ್ಯಾಹ್ನ ಕೊರೋನಾ ಪರೀಕ್ಷೆ(Covid test) ಮಾಡಿಸಿದ್ದಾರೆ. ಈ ವೇಳೆ ವೈರಸ್ ತಗುಲಿರುವುದು ದೃಢಪಟ್ಟಿದೆ. ಕೊರೋನಾ ಕಾಣಿಸಿಕೊಂಡ ಬೆನ್ನಲ್ಲೇ ರಾಜನಾಥ್ ಸಿಂಗ್ ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
Mekedatu Project: ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಕೊರೋನಾ ಟೆಸ್ಟ್, ಡಿಕೆಶಿ ಗರಂ
ಈ ಕುರಿತು ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್, ಇಂದು ನನ್ನ ಕೊರೋನಾ ವೈರಸ್ ವರದಿ ಪಾಸಿಟಿವ್ ಬಂದಿದೆ. ಮೈಲ್ಡ್ ರೋಗಲಕ್ಷಣಗಳು ಇದೆ. ಹೀಗಾಗಿ ನಾನು ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ರಾಜನಾಥ್ ಸಿಂಗ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಶನಿವಾರ(ಜ.8) ರಾಜನಾಥ್ ಸಿಂಗ್ ವೆಬಿನಾರ್ ಮೂಲಕ ಸೈನಿಕ್ ಶಾಲೆ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹೆಣ್ಣು ಮಕ್ಕಳಿಗಾಗಿ 100 ಸೈನಿಕ ಶಾಲೆ ಆರಂಭಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಹೆಣ್ಣು ಮಕ್ಕಳು ಸೇನೆ ಸೇರಲು ನೆರವಾಗುವ ವಾತಾರವಣ ನಿರ್ಮಿಸಲಾಗುವುದು ಎಂದು ರಾಜನಾಥ್ ಸಿಂಗ್ ಹೇಳಿದ್ದರು.
ದೇಶದಲ್ಲಿನ ಹಲವು ನಾಯಕರಿಗೆ ಈಗಾಗಲೆ ಕೊರೋನಾ ಅಂಟಿಕೊಂಡಿದೆ. ಇದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ(Nalin Kumar Kateeel) ಕೊರೋನಾ ಅಂಟಿಕೊಂಡಿದೆ. ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ವರದಿ ಕೂಡ ಕೊರೋನಾ ಪಾಸಿಟೀವ್ ಆಗಿತ್ತು.
Combating Covid 19: ಅದ್ಧೂರಿ ಮದುವೆಯ ಕನಸು ಕಾಣುತ್ತಿದ್ದವರಿಗೆ ಮತ್ತೆ ನಿರಾಸೆ
ದೇಶದ ಪ್ರಮುಖ ನಗರಗಳಲ್ಲಿ ಕೊರೋನಾ ಸಂಖ್ಯೆ ಮೀತಿ ಮೀರುತ್ತಿದೆ. ದೆಹಲಿಯಲ್ಲಿ ಭಾನುವಾರ(ಜ.09) 22,751 ಹೊಸ ಕೊರೋನಾ ಕೇಸ್ ಪತ್ತೆಯಾಗಿತ್ತು. ಇದು ಕಳೆದ ಮೇ ತಿಂಗಳಿನಿಂದ ದಾಖಲಾದ ಗರಿಷ್ಠ ಕೇಸ್ ಆಗಿದೆ. ಈ ಮೂಲಕ ದೆಹಲಿಯಲ್ಲಿ ಸಕ್ರಿಯ ಕೊರೋನಾ ಪ್ರಕರಣ ಸಂಖ್ಯೆ 60,733ಕ್ಕೆ ಏರಿಕೆಯಾಗಿದೆ. ದಹೆಲಿಯಲ್ಲಿ ಸದ್ಯ ಲಾಕ್‌ಡೌನ್ ಜಾರಿಯಾಗಿಲ್ಲ. ಆದರೆ ಕೊರೋನಾ ನಿಯಂತ್ರಣಕ್ಕೆ ಕಠಿಣ ನಿಯಮಗಳನ್ನು ಜಾರಿಮಾಡಲಾಗಿದೆ.
ದೇಶದ ಕೊರೋನಾ ಪ್ರಕರಣ ಸಂಖ್ಯೆ ಆತಂಕ ಹೆಚ್ಚಿಸಿದೆ. ದೇಶದಲ್ಲಿ ಇಂದು 1.79 ಲಕ್ಷ ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ. ನಿನ್ನೆ ಈ ಸಂಖ್ಯೆ 1.5 ಲಕ್ಷ ಆಗಿತ್ತು. ಸದ್ಯ ದೇಶದಲ್ಲಿ ಸಕ್ರೀಯ ಕೊರೋನಾ ಪ್ರಕರಣ ಸಂಖ್ಯೆ 7.23 ಲಕ್ಷಕ್ಕೆ ಏರಿಕೆಯಾಗಿದೆ. ಇದುವರೆಗೆ ದೇಶದಲ್ಲಿ 4,000 ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ ಮಹಾರಾಷ್ಟ್ರ ಒಂದರಲ್ಲೆ 1,216 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಹರ್ಯಾಣದಲ್ಲೂ ಕೊರೋನಾ ಪ್ರಕರಣ ಸಂಖ್ಯೆ ಆತಂಕ ಹೆಚ್ಚಿಸಿದೆ. ಹೀಗಾಗಿ ಎಲ್ಲಾ ಶಾಲಾ ಕಾಲೇಜುಗಳನ್ನು ಜನವರಿ 26ರ ವರೆಗೆ ಬಂದ್ ಮಾಡಲಾಗಿದೆ.
ದೇಶದಲ್ಲಿ ಬೂಸ್ಟರ್ ಡೋಸ್:
ಕೊರೋನಾ ವೈರಸ್ ಸಂಖ್ಯೆ ಹಾಗೂ ಒಮಿಕ್ರಾನ್ ಪ್ರಕರಣದಿಂದ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ದೇಶದಲ್ಲಿ ಆರೋಗ್ಯ ಕಾರ್ಯಕರ್ತೆಯರು, ಫ್ರಂಟ್‌ಲೈನ್ ವಾರಿಯರ್ಸ್‌ಗೆ ಬೂಸ್ಟರ್ ಡೋಸ್(Booster Dose) ಲಸಿಕೆ ನೀಡಲಾಗುತ್ತಿದೆ. ಇದರ ಜೊತೆಗೆ 60 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೂ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಇನ್ನು ಜನವರಿ 3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿದೆ.