ಚೀನಾಗೆ ಠಕ್ಕರ್‌ ಕೊಡಲು ನಾಳೆಯಿಂದ 2 ದಿನ ಭಾರತೀಯ ವಾಯುಪಡೆ ಸಮರಾಭ್ಯಾಸ..!

ಹಲವಾರು ಯುದ್ಧ ವಿಮಾನಗಳು, ಸಾರಿಗೆ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ 2 ದಿನಗಳ ಸಮರಾಭ್ಯಾಸದಲ್ಲಿ ಭಾಗವಹಿಸಲಿವೆ.

days after tawang clash iaf to hold massive exercise to test capabilities on china front ash

ಭಾರತ (India) ಮತ್ತು ಚೀನಾದ (China) ಸೈನಿಕರ ನಡುವಿನ ಗಡಿ ಸಂಘರ್ಷ (Border Tussle) ನಡೆದ ಕೆಲವೇ ದಿನಗಳ ಬಳಿಕ ಭಾರತೀಯ ವಾಯುಪಡೆಯು (Indian Airforce) ಡಿಸೆಂಬರ್ 15-16 ರಂದು ಪೂರ್ವ ವಲಯದಲ್ಲಿ ಸಮರಾಭ್ಯಾಸ (Exercise) ನಡೆಸಲಿದೆ ಎಂದು ತಿಳಿದುಬಂದಿದೆ. ಚೀನಾ ಫ್ರಂಟ್‌ನಲ್ಲಿ ತನ್ನ ಸಾಮರ್ಥ್ಯಗಳನ್ನು ಪರೀಕ್ಷಿಸಲು ಕಮಾಂಡ್ ಮಟ್ಟದಲ್ಲಿ (Command Level) ಈ ಸಮರಾಭ್ಯಾಸ ನಡೆಯಲಿದೆ ಎಂದು ಐಎಎಫ್ (IAF)  ಮೂಲಗಳು ತಿಳಿಸಿವೆ. ಅಸ್ಸಾಂ (Assam) ಮತ್ತು ಪಶ್ಚಿಮ ಬಂಗಾಳದಲ್ಲಿ (West Bengal) ನಡೆಯಲಿರುವ ಈ 2 ದಿನಗಳ ಸಮರಾಭ್ಯಾಸದಲ್ಲಿ ಹಲವಾರು ಯುದ್ಧ ವಿಮಾನಗಳು, ಸಾರಿಗೆ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳು (ಯುಎವಿ) ಭಾಗವಹಿಸಲಿವೆ ಎಂದು ತಿಳಿದುಬಂದಿದೆ.

ಅಸ್ಸಾಂನ ತೇಜ್‌ಪುರ್, ಛಬುವಾ ಮತ್ತು ಜೋರ್ಹತ್ ಹಾಗೂ ಪಶ್ಚಿಮ ಬಂಗಾಳದ ಹಸಿಮಾರಾ ವಾಯುನೆಲೆಗಳನ್ನು ಈ ಸಮರಾಭ್ಯಾಸದ ಸಮಯದಲ್ಲಿ ಸಕ್ರಿಯಗೊಳಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ರಫೇಲ್ ಯುದ್ಧವಿಮಾನಗಳು ಭೂತಾನ್‌ ಗಡಿ ಬಳಿಯ ಹಸಿಮಾರಾ ಎಂಬಲ್ಲಿ ನೆಲೆಗೊಂಡಿವೆ ಎಂಬುದು ಸಹ ಪ್ರಮುಖವಾದ ಅಂಶ. ಇತ್ತೀಚಿನ ಘರ್ಷಣೆಯಲ್ಲಿ, ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಯಾಂಗ್‌ಟ್ಸೆ ಪ್ರದೇಶದಲ್ಲಿ ಎರಡೂ ಕಡೆಯ ಸೈನಿಕರು ಗಾಯಗೊಂಡಿದ್ದರು. 

ಇದನ್ನು ಓದಿ: ಚೀನಾದ ತವಾಂಗ್‌ ತಂಟೆಗೆ ಬ್ರೇಕ್‌; ತಿರುಗೇಟಿನ ಬಳಿಕ ಕೆಂಪು ಸೈನಿಕರು ವಾಪಸ್‌: ಸಂಸತ್ತಿಗೆ ಕೇಂದ್ರ ಮಾಹಿತಿ

ಆದರೆ, ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ನಡೆದ ಭಾರತ - ಚೀನಾದ ಇತ್ತೀಚಿನ ಗಡಿ ಸಂಘರ್ಷಕ್ಕೂ ಈ ಸಮರಾಭ್ಯಾಸಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸಾಮಾನ್ಯವಾದ ಸಮರಾಭ್ಯಸವಾಗಿದ್ದು, ಮುಂಚಿತವಾಗಿಯೇ ಪ್ಲ್ಯಾನ್‌ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. 

ಡಿಸೆಂಬರ್ 9 ರಂದು ನಡೆದ ಈ ಘರ್ಷಣೆಯು ಪೂರ್ವ ಲಡಾಖ್‌ನಲ್ಲಿ 2020 ರ ಗಾಲ್ವಾನ್ ಕಣಿವೆ ಘರ್ಷಣೆಯ ನಂತರ 2 ದೇಶಗಳ ನಡುವಿನ ಮೊದಲ ಪ್ರಮುಖ ಘರ್ಷಣೆಯಾಗಿದೆ.ಪೂರ್ವ ಲಡಾಖ್‌ನಲ್ಲಿ ಎರಡೂ ಕಡೆಯ 30 ತಿಂಗಳ ಗಡಿ ಬಿಕ್ಕಟ್ಟಿನ ನಡುವೆ ಕಳೆದ ಶುಕ್ರವಾರ ಸೂಕ್ಷ್ಮ ವಲಯದ LAC ಉದ್ದಕ್ಕೂ ಯಾಂಗ್‌ಟ್ಸೆ ಬಳಿ ಘರ್ಷಣೆ ಸಂಭವಿಸಿದೆ.

ಇದನ್ನೂ ಓದಿ: ರಾಜೀವ್‌ ಗಾಂಧಿ ಟ್ರಸ್ಟ್‌ಗೆ ಚೀನಾ ಹಣ; ಒಂದಿಂಚೂ ಜಾಗ ಬಿಟ್ಟುಕೊಡಲ್ಲ ಎಂದ ಅಮಿತ್ ಶಾ

ಡಿಸೆಂಬರ್ 9 ರಂದು, ಪಿಎಲ್‌ಎ ಪಡೆಗಳು ತವಾಂಗ್ ಸೆಕ್ಟರ್‌ನಲ್ಲಿನ ಎಲ್‌ಎಸಿಯನ್ನು ಸಂಪರ್ಕಿಸಿದವು, ಇದನ್ನು ಭಾರತೀಯ ಪಡೆಗಳು ದೃಢವಾದ ರೀತಿಯಲ್ಲಿ ತಿರುಗೇಟು ನೀಡಿದವು. ಈ ಮುಖಾಮುಖಿಯು ಎರಡೂ ಕಡೆಯ ಕೆಲವು ಯೋಧರಿಗೆ ಸಣ್ಣಪುಟ್ಟ ಗಾಯಗಳಿಗೆ ಕಾರಣವಾಯಿತು" ಎಂದು ಭಾರತೀಯ ಭೂ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. "ಎರಡೂ ಕಡೆಯವರು ತಕ್ಷಣವೇ ಆ ಪ್ರದೇಶದಿಂದ ಹೊರಗುಳಿದರು. ಘಟನೆಯ ಅನುಸರಣೆಯಂತೆ, ಪ್ರದೇಶದಲ್ಲಿನ ಭಾರತೀಯ ಕಮಾಂಡರ್ ಶಾಂತಿಯನ್ನು ಪುನಃಸ್ಥಾಪಿಸಲು ರಚನಾತ್ಮಕ ಕಾರ್ಯವಿಧಾನಗಳಿಗೆ ಅನುಗುಣವಾಗಿ ಸಮಸ್ಯೆಯನ್ನು ಚರ್ಚಿಸಲು ಚೀನಾದ ಕಮಾಂಡರ್‌ ಜತೆಗೆ ಧ್ವಜ ಸಭೆಯನ್ನು ನಡೆಸಿದರು," ಎಂದೂ ಸೇನೆ ಹೇಳಿದೆ.  

ಇನ್ನೊಂದೆಡೆ,ಭಾರತ - ಚೀನಾ ನಡುವಿನ ಈ ಮುಖಾಮುಖಿಯಲ್ಲಿ ಭಾಗಿಯಾಗಿರುವ ಸೈನಿಕರ ಸಂಖ್ಯೆಯನ್ನು ಸೇನೆಯು ಸ್ಪಷ್ಟಪಡಿಸದಿದ್ದರೂ, ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ 200 ಕ್ಕೂ ಹೆಚ್ಚು ಸೈನಿಕರು ಮೊನಚಾದ ದೊಣ್ಣೆಗಳು ಮತ್ತು ಕೋಲುಗಳನ್ನು ಹೊಂದಿದ್ದರು ಹಾಗೂ ಚೀನಾದ ಕಡೆಯ ಯೋಧರಿಗೆ ಗಾಯಗಳು ಹೆಚ್ಚಿರಬಹುದು ಎಂದೂ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ. 

ಇದನ್ನೂ ಓದಿ: ಲಡಾಖ್ ಬಳಿಕ ತವಾಂಗ್‌‌ನಲ್ಲಿ ಚೀನಾ ಕಿರಿಕ್, ಸೇನಾ ಚಕಮಕಿಯಲ್ಲಿ ಯೋಧರಿಗೆ ಗಾಯ!

Latest Videos
Follow Us:
Download App:
  • android
  • ios