ಕರ್ನಾಟಕದ ಸೊರಬದ ದತ್ತಾತ್ರೇಯ ಹೊಸಬಾಳೆ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾಗಿ ಮರು ಆಯ್ಕೆಯಾಗಿದ್ದಾರೆ. ಮೂರು ವರ್ಷಗಳ ಅವಧಿಗೆ ಅವರು ಈ ಸ್ಥಾನದಲ್ಲಿ ಇರಲಿದ್ದಾರೆ. 

ಬೆಂಗಳೂರು (ಮಾ.17): ಕರ್ನಾಟಕ ಮೂಲದ ದತ್ತಾತ್ರೇಯ ಹೊಸಬಾಳೆ ಅವರು ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾಗಿ (ಪ್ರಧಾನ ಕಾರ್ಯದರ್ಶಿ) ಆಗಿ ಮರು ಆಯ್ಕೆಯಾಗಿದ್ದಾರೆ. ಸಂಘ ಪರಿವಾರದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ABPS) 2024-2027ರ ಮೂರು ವರ್ಷಗಳ ಅವಧಿಗೆ ಆರೆಸ್ಸೆಸ್‌ನ ನಂ. 2 ಹುದ್ದೆಗೆ ಹೊಸಬಾಳೆ ಅವರನ್ನು ಆಯ್ಕೆ ಮಾಡಿದೆ. ನಾಗ್ಪುರದಲ್ಲಿ ನಡೆಯುತ್ತಿರುವ ಎಬಿಪಿಎಸ್ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಒಂಬತ್ತು ವರ್ಷಗಳ ಕಾಲ ಮೂರು ಅವಧಿಗೆ ಹುದ್ದೆಯನ್ನು ಅಲಂಕರಿಸಿದ ಸುರೇಶ್ 'ಭೈಯಾಜಿ' ಜೋಶಿ ಅವರ ಬದಲಿಗೆ 2021 ರಿಂದ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರು ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಆರೆಸ್ಸೆಸ್‌ನಲ್ಲಿ ಸರಕಾರ್ಯವಾಹ ಎನ್ನುವುದು ನಂ.2 ಎಂದೇ ಪರಿಗಣಿಸಲಾಗುತ್ತದೆ. ಪ್ರಸ್ತುತ ಡಾ. ಮೋಹನ್‌ ಭಾಗವತ್‌ ಅವರು ನಂ.1 ಸ್ಥಾನವಾದ ಸರಸಂಘಚಾಲಕ್‌ ಪದವಿಯಲ್ಲಿದ್ದಾರೆ. 70 ವರ್ಷದ ದತ್ತಾತ್ರೇಯ ಹೊಸಬಾಳೆ ಕರ್ನಾಟಕದ ಶಿವಮೊಗ್ಗದ ಸೊರಬ ಮೂಲದವರು. ಇಂಗ್ಲೀಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಾಗಿದ್ದಾರೆ. 1986ರಲ್ಲಿ ಆರೆಸ್ಸೆಸ್‌ ಸೇರಿದ್ದ ಇವರು 1972ರಲ್ಲಿ ಎಬಿವಿಪಿಗೆ ಸೇರಿದ್ದರು. 1978ರಿಂದ ಸಂಘದ ಪ್ರಚಾರರಾಗಿ ಕೆಲಸ ಮುಂದುವರಿಸಿದ್ದರು. ಅಸ್ಸಾಂನ ಗುವಾಹಟಿಯಲ್ಲಿ ಯುವ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದರು.

ಮಣಿ​ಪು​ರ​ದಲ್ಲಿ ಶಾಂತಿ ಕಾಪಾ​ಡಿ: ಆರೆ​ಸ್ಸೆಸ್‌ ಮನ​ವಿ

ಅವರು ಕನ್ನಡ ಮತ್ತು ಇಂಗ್ಲಿಷ್ ಮಾಸಿಕ ಅಸೀಮಾದ ಸ್ಥಾಪಕ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಅವರು 2004 ರಲ್ಲಿ ಸಹ-ಬೌಧಿಕ್ ಪ್ರಮುಖ್ ಆಗಿದ್ದರು. ದತ್ತಾತ್ರೇಯ ಹೊಸಬಾಳೆ ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ಸರಾಗವಾಗಿ ಮಾತನಾಡುತ್ತಾರೆ.

ಗೋಮಾಂಸ ತಿಂದವ್ರನ್ನೂ ಹಿಂದೂ ಧರ್ಮಕ್ಕೆ ಮರಳಿ ಕರೆತರಬಹುದು: RSS ನಾಯಕ ದತ್ತಾತ್ರೇಯ ಹೊಸಬಾಳೆ

Scroll to load tweet…