ದಕ್ಷಿಣ ಏಷ್ಯನ್ ವಿಶ್ವವಿದ್ಯಾಲಯದ 6 ತಿಂಗಳ ಹಿಂದೆ ದಲಿತ ವಿದ್ಯಾರ್ಥಿ ಭೀಮರಾಜ್ ಎಂನನ್ನು ಹೊರಹಾಕಿತ್ತು. ಅಶಿಸ್ತಿನ ಕಾರಣಕ್ಕೆ ಹೊರಬಿದ್ದ ಪಿಹೆಚ್‌ಡಿ ವಿದ್ಯಾರ್ಥಿಯ ಎಂಫಿಲ್ ಕಾನೂನು ವಿದ್ಯಭ್ಯಾಸಕ್ಕೆ ಆಕ್ಸ್‌ಪರ್ಡ್ ಯೂನಿವರ್ಸಿಟಿ ಬಾಗಿಲ ತೆರೆದಿದೆ. ಇಷ್ಟೇ ಅಲ್ಲ ಭೀಮರಾಜ್ ಒಂದು ರೂಪಾಯಿ ಪಾವತಿಸಬೇಕಿಲ್ಲ.  ಖರ್ಚು ಮಾಡಬೇಕಿಲ್ಲ, ಸಂಪೂರ್ಣ ಸ್ಕಾಲರ್‌ಶಿಪ್ ನೀಡಲಾಗಿದೆ.

ನವದೆಹಲಿ(ಜೂ.26)ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಿಂದ ಹೊರದಬ್ಬಿದ ದಲಿತ ವಿದ್ಯಾರ್ಥಿಗೆ ಇದೀಗ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸಂಪೂರ್ಣ ಸ್ಕಾಲರ್‌ಶಿಪ್ ನೀಡಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದೆ. ತಮಿಳುನಾಡಿನ ದಲಿತ ವಿದ್ಯಾರ್ಥಿ ಭೀಮರಾಜ್ ಎಂ, 6 ತಿಂಗಳ ಹಿಂದೆ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಿಂದ ಹೊರಹಾಕಲ್ಪಟ್ಟಿದ್ದರು. ಪಿಹೆಚ್‌ಡಿ ವಿದ್ಯಾರ್ಥಿಯಾಗಿದ್ದ ಭೀಮರಾಜ್‌ನನ್ನು ಅಶಿಸ್ತಿನ ಕಾರಣ ನೀಡಿ ವಿಶ್ವವಿದ್ಯಾಲಯದಿಂದ ಡಿಬಾರ್ ಮಾಡಲಾಗಿತ್ತು. ಇದೀಗ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಭೀಮರಾಜ್ ಕಾನೂನು ವಿಷಯದಲ್ಲಿ ಎಂಫಿಲ್ ಮಾಡಲು ಅವಕಾಶ ನೀಡಲಾಗಿದೆ. ವಿದ್ಯಾಭ್ಯಾಸದ ಫೀಸ್, ಹಾಸ್ಟೆಲ್ ವೆಚ್ಚ, ಇತರ ಖರ್ಚು ವೆಚ್ಚಗಳಿಗೆ ಸ್ಕಾಲರ್‌ಶಿಪ್ ನೀಡಲಾಗಿದೆ. 

ದಲಿತ ವಿದ್ಯಾರ್ಥಿಗೆ ಆಕ್ಸ್‌ಫರ್ಡ್ ಇಂಡಿಯಾ ವಿಶ್ವವಿದ್ಯಾಲಯ ರತನಶಾ ಬೊಮಾಂಜಿ ಝೈವಾಲ ಸ್ಕಾಲರ್‌ಶಿಪ್ ನೀಡಲಾಗಿದೆ.ಭೀಮರಾಜ್ ಇದುವರೆಗೆ ಕ್ರೌಂಡ್ ಫಂಡಿಂಗ್ ಮೂಲಕ ತಮ್ಮ ವಿದ್ಯಾಭ್ಯಾಸ ಪೂರೈಸಿದ್ದಾರೆ. ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಲ್ಲೂ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿದ್ದರು. ಆದರೆ ವಿಶ್ವವಿದ್ಯಾಲದಯ ಸರಿಯಾಗಿ ಸ್ಕಾಲರ್‌ಶಿಪ್ ನೀಡದ ಕಾರಣ ಸಮಸ್ಯೆ ಎದುರಾಗಿತ್ತು

JEE ಪಾಸಾದರೂ ಶುಲ್ಕ ಕಟ್ಟಲು ಅಸಾಧ್ಯ : ದಲಿತ ವಿದ್ಯಾರ್ಥಿಯ ನೆರವಿಗೆ ಸುಪ್ರೀಂ ಕೋರ್ಟ್!

28 ವರ್ಷದ ಭೀಮರಾಜ್, 2017ರಲ್ಲಿ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ತೆರಳಿದ್ದರು. 2018ರಲ್ಲಿ ಯುಜಿಸಿ ಜ್ಯೂನಿಯರ್ ಫೆಲೋಶಿಪ್ ಪರೀಕ್ಷೆಯಲ್ಲಿ ತೇರ್ಗೆಡೆಯಾಗಿದ್ದಾನೆ.ಮೊದಲ ರ್ಯಾಂಕ್ ಪಡೆದು 2020ರಲ್ಲಿ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿಗಾಗಿ ಸೇರಿಕೊಂಡಿದ್ದಾನೆ. 2020ರಲ್ಲಿ ಕೋರೊನಾ ಕಾರಣ ಆನ್‌ಲೈನ್ ಕ್ಲಾಸ್ ಮಾಡಲಾಗಿದೆ. 2021ರಿಂದ ತರಗತಿಗಳು ಆರಂಭಗೊಂಡಿದೆ. ಆದರೆ ಕಾಲುಜು ಸ್ಕಾಲರ್‌ಶಿಪ್ ನೀಡದೆ ಸತಾಯಿಸಿದೆ. ಆರಂಭಿಕ 45,000 ಫೀಸ್ ಕಟ್ಟಲು ಭೀಮರಾಜ್ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಪೋಷಕರು ತಮ್ಮ ಒಡವೆ ಮಾಡಿ ಹಣ ಹೊಂದಿಸಿದ್ದಾರೆ.

ಜೆಆರ್‌ಎಫ್ ಪಡೆದುಕೊಂಡಿದ್ದರು. ವಿಶ್ವವಿದ್ಯಾಲಯ ಸ್ಕಾಲರ್‌ಶಿಪ್ ನೀಡಿಲ್ಲ. ಈ ವಿಚಾರವಗಿ ಆಡಳಿತ ಮಂಡಳಿ ಜೊತೆ ವಾಗ್ವಾದ ನಡೆದಿದೆ. ಹೀಗಾಗಿ ಆಡಳಿತ ಮಂಡಳಿ ಅಶಿಸ್ತಿನ ಕಾರಣ ನೀಡಿ ಭೀಮರಾಜ್ ಎಂಗೆ ವಿಶ್ವವಿದ್ಯಾಲದಿಂದ ಗೇಟ್‌ಪಾಸ್ ನೀಡಲಾಗಿತ್ತು. ಕಳೆದ 6ತಿಂಗಳಿಂದ ಈ ಸಮರ ನಡೆದಿದೆ. ಇದೀಗ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸಂಪೂರ್ಣ ಸ್ಕಾಲರ್‌ಶಿಪ್ ನೀಡಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದೆ.

ಬಿಡದ ಛಲ, MBBS ಸೀಟು ಪಡೆಯಲು ಯಶಸ್ವಿಯಾದ ದನ ಕಾಯೋ ಹುಡುಗಿ!

ಭೀಮರಾಜ್ ಜೊತೆ ಇತರ ಕೆಲ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ನ್ನು ದಕ್ಷಿಣ ಏಷ್ಯಾ ವಿಶಿವಿದ್ಯಾಲಯ ತಡೆ ಹಿಡಿದೆ. ಹಲವು ಭಾರಿ ಮನವಿ ಮಾಡಿದರೂ ವಿಶ್ವವಿದ್ಯಾಲಯ ಸ್ಕಾಲರ್‌ಶಿಪ್ ನೀಡಿಲ್ಲ. 70 ರಿಂದ 80 ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಹಣದಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಭೀಮರಾಜ್ ಎಂ ಸೇರಿದಂತೆ ಹಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ವಿರುದ್ಧ ನಡೆಸಿದ ಪ್ರತಿಭಟನೆಗೆ ಭಾರಿ ಬೆಂಬಲ ಸಿಕ್ಕಿತ್ತು.

ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೇ ವೇಳೆ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯ, ಭೀಮರಾಜ್ ಎಂ ಸೇರಿದಂತೆ ಇತರ ಕೆಲ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯಿಂದ ಹೊರಹಾಕಿತ್ತು.