2019 ರಲ್ಲಿ, ದಲೈ ಲಾಮಾ ಅವರು, ‘ನನ್ನ ಉತ್ತರಾಧಿಕಾರಿ ಮಹಿಳೆಯಾಗಬೇಕಾದರೆ, ಅವರು ಆಕರ್ಷಕವಾಗಿರಬೇಕು’ ಎಂದು ಹೇಳಿ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದರು.‘ಹೆಣ್ಣು ದಲೈಲಾಮಾ ಬಂದರೆ ಹೆಚ್ಚು ಆಕರ್ಷಕವಾಗಿರಬೇಕು’ ಎಂದಿದ್ದರು.

ನವದೆಹಲಿ (ಏಪ್ರಿಲ್ 10, 2023) : ಬೌದ್ಧ ಧರ್ಮಗುರು ದಲೈ ಲಾಮಾ ಅವರು ಮಗುವಿನ ತುಟಿಗಳಿಗೆ ಚುಂಬಿಸುತ್ತಿರುವುದನ್ನು ತೋರಿಸುವ ವಿಡಿಯೋ ಮತ್ತು ನಂತರ ತನ್ನ ನಾಲಿಗೆಯನ್ನು ನೆಕ್ಕುವಂತೆ ಕೇಳುತ್ತಿರುವುದನ್ನು ತೋರಿಸುವ ದೃಶ್ಯ ವಿವಾದಕ್ಕೀಡಾಗಿದೆ. ಸಮಾರಂಭವೊಂದರಲ್ಲಿ ಲಾಮಾಗೆ ಗೌರವ ಸಲ್ಲಿಸಲು ಬಾಲಕನೊಬ್ಬ ಬಾಗಿದಾಗ ದಲೈ ಲಾಮಾ, ಆ ಹುಡುಗನ ತುಟಿಗಳಿಗೆ ಮುತ್ತು ಕೊಟ್ಟಿದ್ದು ಕಂಡುಬರುತ್ತದೆ. ಬಳಿಕ ಲಾಮಾ ಅವರು ಮಗುವಿಗೆ ‘ನಾಲಿಗೆ ನೆಕ್ಕು’ ಅನ್ನುತ್ತಾರೆ. ಆಗ ದಲೈ ಲಾಮಾ ತಮ್ಮ ನಾಲಿಗೆಯನ್ನು ಚಾಚಿಕೊಂಡಿರುವುದು ಕಂಡುಬರುತ್ತದೆ.

ಈ ವಿಡಿಯೋ ಬಗ್ಗೆ ಟ್ವಿಟ್ಟರ್‌ ಬಳಕೆದಾರರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇದು ಅನಪೇಕ್ಷಿತ ಮತ್ತು ಈ ದುಷ್ಕೃತ್ಯವನ್ನು ಯಾರೂ ಸಮರ್ಥಿಸಬಾರದು’ ಎಂದು ದೀಪಿಕಾ ಪುಷ್ಕರ್‌ ನಾಥ್‌ ಎಂಬ ಬಳಕೆದಾರರು ಟೀಕಿಸಿದ್ದಾರೆ. ‘ನಾನು ಏನು ನೋಡುತ್ತಿದ್ದೇನೆ? ಇದು ದಲೈ ಲಾಮಾ ಅವರೇ ಹೌದೇ? ಶಿಶುಕಾಮಕ್ಕಾಗಿ ಬಂಧಿಸಬೇಕಾಗಿದೆ. ಅಸಹ್ಯಕರ’ ಎಂದು ಜಾಸ್‌ ಒಬೆರಾಯ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ.

ಇದನ್ನು ಓದಿ: ಬೌದ್ಧರ 3ನೇ ಉನ್ನತ ಹುದ್ದೆಗೆ ಅಮೆರಿಕದಲ್ಲಿ ಜನಿಸಿದ 8ರ ಬಾಲಕನ ನೇಮಿಸಿದ ದಲೈ ಲಾಮಾ: ಚೀನಾ ಕೆಂಗಣ್ಣು?

Scroll to load tweet…

2019 ರಲ್ಲಿ, ದಲೈ ಲಾಮಾ ಅವರು, ‘ನನ್ನ ಉತ್ತರಾಧಿಕಾರಿ ಮಹಿಳೆಯಾಗಬೇಕಾದರೆ, ಅವರು ಆಕರ್ಷಕವಾಗಿರಬೇಕು’ ಎಂದು ಹೇಳಿ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದರು.‘ಹೆಣ್ಣು ದಲೈಲಾಮಾ ಬಂದರೆ ಹೆಚ್ಚು ಆಕರ್ಷಕವಾಗಿರಬೇಕು’ ಎಂದಿದ್ದರು. ಧರ್ಮಶಾಲಾದಲ್ಲಿ ಇರುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ದಲೈ ಲಾಮಾ ಅವರನ್ನು ಬಿಬಿಸಿ ಸಂದರ್ಶನ ಮಾಡುತ್ತಿದ್ದಾಗ ಅವರು ಈ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ಜಗತ್ತಿನಾದ್ಯಂತ ಟೀಕೆಗೆ ಗುರಿಯಾದ ನಂತರ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಿದ್ದರು.

ಕಳೆದ ತಿಂಗಳು, ದಲೈ ಲಾಮಾ ಅವರು ಅಮೆರಿಕ ಮೂಲದ ಮಂಗೋಲಿಯನ್ ಹುಡುಗನನ್ನು 10 ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಎಂದು ಹೆಸರಿಸಿದ್ದರು. ಇದು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಶ್ರೇಣಿಯಾಗಿದೆ. 8 ವರ್ಷದ ಬಾಲಕನನ್ನು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಲಾಮಾ ಎಂದು ನೇಮಕ ಮಾಡುವ ಕ್ರಮವು ಚೀನಾವನ್ನು ಕೆರಳಿಸುವ ಸಾಧ್ಯತೆಯಿದೆ. ಏಕೆಂದರೆ, ಅದು ತನ್ನದೇ ಸರ್ಕಾರದಿಂದ ಆಯ್ಕೆಯಾದ ಬೌದ್ಧ ನಾಯಕರನ್ನು ಮಾತ್ರ ಗುರುತಿಸುತ್ತದೆ ಎಂದು ಈ ಹಿಂದೆಯೇ ಹಲವು ಬಾರಿ ಹೇಳಿದೆ. 

ಇದನ್ನೂ ಓದಿ: ಬೌದ್ಧ ಧರ್ಮಗುರು ದಲೈಲಾಮಾ ವಿರುದ್ಧ ಗೂಢಚರ್ಯೆ : ಚೈನೀಸ್ ಮಹಿಳೆಯ ಬಂಧನ

ಇನ್ನೊಂದೆಡೆ, ದಲೈ ಲಾಮಾ ಅವರು ಟಿಬೆಟ್‌ನಲ್ಲಿ ಪ್ರತ್ಯೇಕತಾವಾದವನ್ನು ಪ್ರಚೋದಿಸುತ್ತಿದ್ದಾರೆ ಎಂದು ಚೀನಾ ಆರೋಪಿಸಿದೆ. ಅಲ್ಲದೆ, ಭಾರತ, ನೇಪಾಳ, ಕೆನಡಾ ಮತ್ತು ಅಮೆರಿಕ ಸೇರಿದಂತೆ ಸುಮಾರು 30 ದೇಶಗಳಲ್ಲಿ ವಾಸಿಸುವ ಸುಮಾರು 100,000 ದೇಶಭ್ರಷ್ಟ ಟಿಬೆಟಿಯನ್ನರನ್ನು ಪ್ರತಿನಿಧಿಸುವ ಕೇಂದ್ರ ಟಿಬೆಟಿಯನ್ ಆಡಳಿತವನ್ನು (CTA) ಚೀನಾ ಸರ್ಕಾರ ಗುರುತಿಸುವುದಿಲ್ಲ.

ಇದನ್ನೂ ಓದಿ: ಯಾವಾಗ್ಲೂ ಖುಷಿಯಾಗಿರಲು ಏನ್ಮಾಡ್ಬೇಕು, ದಲೈಲಾಮಾ ಏನ್ ಹೇಳ್ತಾರೆ ಕೇಳಿ