ಬೌದ್ಧ ಧರ್ಮಗುರು ದಲೈಲಾಮಾ ವಿರುದ್ಧ ಗೂಢಚರ್ಯೆ : ಚೈನೀಸ್ ಮಹಿಳೆಯ ಬಂಧನ
ಬೌದ್ಧ ಧರ್ಮ ಗುರು ದಲೈಲಾಮಾ ಅವರ ಬಗ್ಗೆ ಗೂಢಾಚಾರಿಕೆ ಮಾಡುತ್ತಿದ್ದ ಚೈನೀಸ್ ಮಹಿಳೆಯನ್ನು ಬಿಹಾರದ ಗಯಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಬಳಿಕ ಈಕೆಯನ್ನು ಮತ್ತೆ ಚೀನಾಗೆ ಗಡೀಪಾರು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ನವದೆಹಲಿ: ಬೌದ್ಧ ಧರ್ಮ ಗುರು ದಲೈಲಾಮಾ ಅವರ ಬಗ್ಗೆ ಗೂಢಾಚಾರಿಕೆ ಮಾಡುತ್ತಿದ್ದ ಚೈನೀಸ್ ಮಹಿಳೆಯನ್ನು ಬಿಹಾರದ ಗಯಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಬಳಿಕ ಈಕೆಯನ್ನು ಮತ್ತೆ ಚೀನಾಗೆ ಗಡೀಪಾರು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಬಿಹಾರದ ಗಯಾದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಬೌದ್ಧ ಧರ್ಮಗುರು ದಲೈಲಾಮಾ ಅವರು ಭಾಗಿಯಾಗುವ ಯೋಜನೆ ಇದ್ದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಗಯಾದ ಸ್ಥಳೀಯ ಪೊಲೀಸರಿಗೆ ದಲೈಲಾಮಾ ಅವರ ಭದ್ರತೆ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಈ ಮಧ್ಯೆ ಗೂಢಚರ್ಯೆ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶಂಕಿತ ಚೈನಾ ಪರ ಗೂಢಾಚರ್ಯೆ ಮಾಡುತ್ತಿದ್ದಳೆನ್ನಲಾದ ಮಹಿಳೆಯ ರೇಖಾಚಿತ್ರ ಬಿಡುಗಡೆ ಮಾಡಲಾಗಿತ್ತು. ಸ್ಥಳೀಯರು ಆಕೆಯ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ನೀಡಲ್ಲಿ ಎನ್ನುವ ಸಲುವಾಗಿ ಈ ರೇಖಾಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯನ್ನು ಸಾಂಗ್ ಕ್ಸಿಯಾಲಾನ್ ಎಂದು ಗುರುತಿಸಲಾಗಿದೆ.
ಟಿಬೇಟಿಯನ್ ಧಾರ್ಮಿಕ ಮುಖಂಡ ದಲೈಲಾಮಾ ಅವರ ಬಗ್ಗೆ ಗೂಢಾಚಾರಿಕೆ ನಡೆಸುತ್ತಿದ್ದ ಈಕೆಯನ್ನು ಕಾಲಚಕ್ರ ಮೈದಾನದ ಹೊರಗೆ ಬಂಧಿಸಲಾಗಿದೆ. ಈ ಕಾಲಚಕ್ರ ಮೈದಾನದಲ್ಲಿ ದಲೈಲಾಮಾ ಅವರು ಧಾರ್ಮಿಕ ಉಪನ್ಯಾಸ ನೀಡುತ್ತಿದ್ದರು. ಕೆಲವು ಮೂಲಗಳ ಪ್ರಕಾರ, ಗೂಢಚರ್ಯೆ ನಡೆಸುತ್ತಿದ್ದ ಈ ಚೈನೀಸ್ ಮಹಿಳೆ (Chinese woman) ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಬೋಧ್ ಗಯಾ ಸೇರಿದಂತೆ ದೇಶದ ವಿವಿಧ ಭಾಗಗಳಳಲ್ಲಿ ವಾಸ ಮಾಡಿದ್ದಾಳೆ. ಆದರೆ ದೇಶದಲ್ಲಿರುವ ದಾಖಲೆಗಳಲ್ಲಿ ಈ ಮಹಿಳೆ ದೇಶದಲ್ಲಿ ವಾಸ ಮಾಡುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಚೀನಾಕ್ಕಿಂತ, ಭಾರತದಂಥ ಮುಕ್ತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾಯೋಕೆ ಇಷ್ಟ: ದಲೈಲಾಮಾ
ದಲೈಲಾಮಾ ಅವರು ಎರಡು ವರ್ಷಗಳ ಬಳಿಕ ಈ ವರ್ಷ ಇಂದು ಬುದ್ಧನ ಜನ್ಮಸ್ಥಾನ ಬುದ್ಧಗಯಾಕ್ಕೆ ಭೇಟಿ ನೀಡಿದ್ದರು. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ದಲೈಲಾಮಾ ಅವರು ಬೋಧ್ ಗಯಾಕ್ಕೆ (Bodh Gaya) ಭೇಟಿ ನೀಡಿರಲಿಲ್ಲ. ಇತ್ತ ಈ ಗೂಢಚರ್ಯೆ(Spy) ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಹಾಭೋಧಿ (Mahabodhi) ದೇಗುಲದ ಸಂಕೀರ್ಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ದಲೈಲಾಮಾ ಅವರು ಇಂದು ಬೋಧ್‌ಗಯಾದ ಕಾಲಚಕ್ರ (Kaal Chakra maidan) ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಧಾರ್ಮಿಕ ಉಪನ್ಯಾಸ (spiritual preaching) ನೀಡುತ್ತಿದ್ದರು. ಡಿಸೆಂಬರ್ 31ರವರೆಗೆ ಮೂರು ದಿನಗಳ ಕಾಲ ಧಾರ್ಮಿಕ ಉಪನ್ಯಾಸ್ ನೀಡುವ ಯೋಜನೆ ಇತ್ತು.
ಬಂಧಿತ ಸಾಂಗ್ ಕ್ಸಿಯಾಲಾನ್ (Song Xiaolam) ವಿಚ್ಛೇದಿತೆಯಾಗಿದ್ದು, ಆಕೆಗೆ ಇಬ್ಬರು ಮಕ್ಕಳಿದ್ದಾರೆ ಎಂದು ಕೆಲವು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಸಾಂಗ್ ಕ್ಸಿಯಾಲಾನ್ 2019ಕ್ಕೂ ಮೊದಲು ಭಾರತಕ್ಕೆ ಬಂಧಿದ್ದಳು. ಚೀನಾಗೆ ಹೋಗುವ ಮೊದಲು ನೇಪಾಳಕ್ಕೆ (Nepal) ಕೆಲದಿನಕ್ಕಾಗಿ ಹೋಗಿದ್ದು, ಅಲ್ಲಿಂದ ಬಿಹಾರದ ಬೋಧ್‌ಗಯಾಕ್ಕೆ ಬಂದಿದ್ದಳು. ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs) ಬೌದ್ಧಗುರು ದಲೈಲಾಮಾ ಅವರಿಗೆ ಜೀವ ಬೆದರಿಕೆ ಇರುವ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ಬಿಹಾರ ಪೊಲೀಸರು (Bihar Police) ಗೂಢಚರ್ಯೆ ಮಾಡುತ್ತಿರುವ ಮಹಿಳೆಯ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದ್ದರು. ಅದರ ಜೊತೆಗೆ ಆಕೆಯ ವೀಸಾ ಹಾಗೂ ಪಾಸ್‌ಪೋರ್ಟ್ (passport and visa ) ಡಿಟೇಲ್‌ಗಳನ್ನು ಕೂಡ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದರು. ಇದೀಗ ಆಕೆಯ ಬಂಧನವಾಗಿದೆ.
ದಲೈ ಲಾಮಾರನ್ನು ಟಿಬೆಟ್‌ನಿಂದ ಸೇಫಾಗಿ ಕರೆತಂದಿದ್ದ ಕೊನೆಯ ಭಾರತೀಯ ಯೋಧ ನಿಧನ!