ಬೌದ್ಧರ 3ನೇ ಉನ್ನತ ಹುದ್ದೆಗೆ ಅಮೆರಿಕದಲ್ಲಿ ಜನಿಸಿದ 8ರ ಬಾಲಕನ ನೇಮಿಸಿದ ದಲೈ ಲಾಮಾ: ಚೀನಾ ಕೆಂಗಣ್ಣು?
ದಲೈಲಾಮಾ ಅವರ ಈ ನಡೆ ಚೀನಾವನ್ನು ಕೆರಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಟಿಬೆಟಿಯನ್ ಬೌದ್ಧ ಧರ್ಮದ ಯಾವುದೇ ಹುದ್ದೆಗೆ ತನ್ನ ಸರ್ಕಾರ ನೇಮಕ ಮಾಡುವ ವ್ಯಕ್ತಿಗೆ ಮಾತ್ರ ತಾನು ಮಾನ್ಯತೆ ನೀಡುವುದಾಗಿ ಚೀನಾ ಹೇಳುತ್ತಾ ಬಂದಿದೆ.
ನವದೆಹಲಿ (ಮಾರ್ಚ್ 28, 2023): ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಅತ್ಯುನ್ನತ ನಾಯಕನನ್ನಾಗಿ ಅಮೆರಿಕದಲ್ಲಿ ಜನಿಸಿದ 8 ವರ್ಷದ ಮಂಗೋಲಿಯನ್ ಬಾಲಕನನ್ನು ಟಿಬೆಟ್‌ನ ಪರಮೋಚ್ಚ ಧರ್ಮಗುರು ದಲೈಲಾಮಾ ನೇಮಕ ಮಾಡಿದ್ದಾರೆ. ಮಂಗೋಲಿಯಾ ಮೂಲದ ಬಾಲಕನನ್ನು 10ನೇ ಖಲ್ಕಾ ಜೆತ್ಸುನ್ ಧಂಪಾ ರಿಂಪೋಚೆ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.
ದಲೈಲಾಮಾ (Dalai Lama) ನೆಲೆಸಿರುವ ಹಿಮಾಚಲ ಪ್ರದೇಶದ (Himachal Pradesh) ಧರ್ಮಶಾಲಾದಲ್ಲಿ (Dharamsala) ಮಾರ್ಚ್ 8ರಂದು ನಡೆದ ಸಮಾರಂಭದಲ್ಲಿ ಬಾಲಕನನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ. ಈತನಿಗೆ ಅವಳಿ ಸಹೋದರನಿದ್ದಾನೆ. ಇವನು ಅಮೆರಿಕದ (United States) ವಿಶ್ವವಿದ್ಯಾಲಯವೊಂದರ ಪ್ರೊಫೆಸರ್‌ನ ಮಗ (University Professor Son) ಹಾಗೂ ಮಂಗೋಲಿಯಾ ಸರ್ಕಾರದ ಮಾಜಿ ಸಂಸದನ ಮೊಮ್ಮಗ (Mongolia Government Ex MP Grandson) ಎಂದು ತಿಳಿದುಬಂದಿದೆ. ಬಾಲಕನ ಜೊತೆ ದಲೈಲಾಮಾ ಇರುವ ಚಿತ್ರವನ್ನು ‘ಟೈಮ್ಸ್’ ಪ್ರಕಟಿಸಿದೆ.
ಇದನ್ನು ಓದಿ: ಬೌದ್ಧ ಧರ್ಮಗುರು ದಲೈಲಾಮಾ ವಿರುದ್ಧ ಗೂಢಚರ್ಯೆ : ಚೈನೀಸ್ ಮಹಿಳೆಯ ಬಂಧನ
ಚೀನಾ ಕೆಂಗಣ್ಣು ಸಾಧ್ಯತೆ:
ದಲೈಲಾಮಾ ಅವರ ಈ ನಡೆ ಚೀನಾವನ್ನು (China) ಕೆರಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಟಿಬೆಟಿಯನ್ ಬೌದ್ಧ ಧರ್ಮದ (Buddhists) ಯಾವುದೇ ಹುದ್ದೆಗೆ ತನ್ನ ಸರ್ಕಾರ ನೇಮಕ ಮಾಡುವ ವ್ಯಕ್ತಿಗೆ ಮಾತ್ರ ತಾನು ಮಾನ್ಯತೆ ನೀಡುವುದಾಗಿ ಚೀನಾ ಹೇಳುತ್ತಾ ಬಂದಿದೆ. 1995ರಲ್ಲಿ ಟಿಬೆಟಿಯನ್ ಬೌದ್ಧ ಧರ್ಮದ ಎರಡನೇ ಅತ್ಯುನ್ನತ ಹುದ್ದೆಗೆ 11ನೇ ಪಂಚೆನ್ ಲಾಮಾ ಅವರನ್ನು ದಲೈಲಾಮಾ ನೇಮಕ ಮಾಡಿದಾಗ ಆ ವ್ಯಕ್ತಿಯನ್ನು ಹಾಗೂ ಅವರ ಕುಟುಂಬದವರನ್ನು ಚೀನಾ ಸರ್ಕಾರ ಅಪಹರಣ ಮಾಡಿಸಿತ್ತು. ನಂತರ ಅವರು ಎಲ್ಲಿಗೆ ಹೋದರು ಎಂಬುದು ತಿಳಿದುಬಂದಿಲ್ಲ. ಬಳಿಕ ಪಂಚೆನ್ ಲಾಮಾ ಹುದ್ದೆಗೆ ಚೀನಾ ತನ್ನದೇ ವ್ಯಕ್ತಿಯನ್ನು ನೇಮಕ ಮಾಡಿದೆ.
ಇದನ್ನೂ ಓದಿ; ಯಾವಾಗ್ಲೂ ಖುಷಿಯಾಗಿರಲು ಏನ್ಮಾಡ್ಬೇಕು, ದಲೈಲಾಮಾ ಏನ್ ಹೇಳ್ತಾರೆ ಕೇಳಿ