'ಅರ್ನಬ್' ಚಂಡಮಾರುತದ ಬೆನ್ನಲ್ಲೇ 'ಮುರಸು' ಎಂಬ ಹೊಸ ಚಂಡಮಾರುತ ಮಂಗಳವಾರ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇದರ ವೇಗ ಗಂಟೆಗೆ 100-110 ಕಿ.ಮೀ. ಇರಲಿದ್ದು, ಒಡಿಶಾದ ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಸರ್ಕಾರ ಆದೇಶಿಸಿದೆ.

ಭುವನೇಶ್ವರ: ದೇಶದ ಕರಾವಳಿ ರಾಜ್ಯಗಳನ್ನು ವಿಧ್ವಂಸಕ್ಕೆ ದೂಡಿದ ‘ಅರ್ನಬ್’ ಚಂಡಮಾರುತದ ಪರಿಣಾಮ ಮಾಸುವ ಮುನ್ನವೇ, ಮಂಗಳವಾರ ‘ಮುರಸು’ (ನಗಾರಿ) ಎಂಬ ಮತ್ತೊಂದು ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಭಾನುವಾರ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ತಗ್ಗು ಮತ್ತು ಗುಡ್ಡಗಾಡು ಪ್ರದೇಶಗಳ ಜನರ ಸ್ಥಳಾಂತಕ್ಕೆ ಸರ್ಕಾರ ಆದೇಶ ನೀಡಿದೆ.

ಒಡಿಶಾದ ತಗ್ಗು ಮತ್ತು ಗುಡ್ಡಗಾಡು ಪ್ರದೇಶಗಳ ಜನರ ಸ್ಥಳಾಂತರ

ಚಂಡಮಾರುತಕ್ಕೆ ಪೂರಕವಾದ ವಾತಾವರಣ ಬಂಗಾಳಕೊಲ್ಲಿಯಲ್ಲಿ ಭಾನುವಾರ ಬೆಳಿಗ್ಗೆಯೇ ನಿರ್ಮಾಣವಾಗಿದೆ. ಇದು ಸೋಮವಾರದ ವೇಳೆಗೆ ಬಂಗಾಳಕೊಲ್ಲಿಯ ಪಶ್ಚಿಮ-ಮಧ್ಯ ಭಾಗದಲ್ಲಿ ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ನಂತರ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಸಾಗಲಿದ್ದು, ಮಂಗಳವಾರದ ಬೆಳಗಿನ ಹೊತ್ತಿಗೆ ನೆಲ್ಲೂರು ಮತ್ತು ನರಸಾಪುರಗಳ ನಡುವೆ ತೀವ್ರ ಚಂಡಮಾರುತವಾಗಿ ದಕ್ಷಿಣ ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಲಿದೆ. ಇದರ ವೇಗ ಗಂಟೆಗೆ 100-110 ಕಿ.ಮೀ. ತೀವ್ರವಾಗಿರಲಿದೆ ಎಂದು ಐಎಂಡಿ ಎಚ್ಚರಿಸಿದೆ. ಹೀಗಾಗಿ ಒಡಿಶಾದ ಕರಾವಳಿ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.