congress Meeting ಸೋನಿಯಾ ಗಾಂಧಿ ನಾಯಕತ್ವದಲ್ಲಿ ನಂಬಿಕೆ, ರಾಜೀನಾಮೆ ಬೇಡವೇ ಬೇಡ ಎಂದ ಕಾಂಗ್ರೆಸ್ CWC!
- CWC ಬಯಸಿದರೆ ನಾವು ಮೂವರ ರಾಜೀನಾಮೆ ಕೊಡಲು ಸಿದ್ದ
- ಸೋನಿಯಾ ಗಾಂಧಿ ಹೇಳಿಕೆಗೆ ಕಾಂಗ್ರೆಸ್ CWC ತಕ್ಷಣವೇ ಉತ್ತರ
- ಸೋನಿಯಾ ನಾಯಕತ್ವ ಮಾರ್ಗದರ್ಶನವೇ ಪಕ್ಷಕ್ಕೆ ಶ್ರೀರಕ್ಷೆ
ನವದೆಹಲಿ(ಮಾ.13): ಸೋಲಿನ ಪರಾಮರ್ಶೆ ನಡೆಸಲು ಆಯೋಜಿಸಿದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯ ನೀರಸ ಉತ್ತರದೊಂದಿಗೆ ಕೊನೆಯಾಗಿದೆ. ಪಂಚ ರಾಜ್ಯಗಳ ಚುನಾವಣೆ ಬಳಿಕ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆಗೂ ಈ ಹಿಂದಿನ ಸಭೆಗಳಿಗೂ ಯಾವುದೇ ವ್ಯತ್ಯಾಸ ಇರಲಿಲ್ಲ. ಮತ್ತೆ ಸೋನಿಯಾ ಗಾಂಧಿ ರಾಜೀನಾಮೆಗೆ ಸಿದ್ಧ ಎಂಬ ಮಾತುಗಳನ್ನಾಡಿದ ಬೆನ್ನಲ್ಲೇ ನೀವೆ ಪಕ್ಷದ ಶ್ರೀರಕ್ಷೆ. ರಾಜೀನಾಮೆ ಮಾತೇ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ನಿರ್ಧರಿಸಿದೆ. ಈ ಮೂಲಕ ಸೋನಿಯಾ ಗಾಂಧಿ ನಾಯಕತ್ವದಲ್ಲೇ ಮುಂದುವರಿಯಲು ಕಾಂಗ್ರೆಸ್ ನಿರ್ಧರಿಸಿದೆ.
ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಸುಮಾರು 5 ಗಂಟೆಗಳ ಕಾಲ ಚರ್ಚೆ ನಡೆಯಿತು. ಈ ಕಾರ್ಯಕಾರಣಿ ಸಭೆಯಲ್ಲಿ CWC ಬಯಸಿದರೆ ನಾವು ಮೂವರು ರಾಜೀನಾಮೆ ಕೊಡಲು ಸಿದ್ದ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ತಾವು ಸೇರಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮೂವರು ಸಂಘಟನೆಯಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ , ರಾಜೀನಾಮೆ ಮಾತೂ ಅಗತ್ಯವಿಲ್ಲ. ನಿಮ್ಮದೆ ನಾಯಕತ್ವದಲ್ಲಿ ಮುಂದುವರಿಯಬೇಕು. ನಿಮ್ಮ ಮಾರ್ಗದರ್ಶನದಲ್ಲೇ ಪಕ್ಷ ಮುನ್ನಡೆಯಬೇಕು ಎಂದು ಸಮಿತಿ ಹೇಳಿದೆ.
Congress Meeting ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಅಂತ್ಯ, ಮನ್‌ಮೋಹನ್ ಸಿಂಗ್ ಸೇರಿ ಪ್ರಮುಖ ನಾಲ್ವರು ಗೈರು!
ಸೋನಿಯಾ ಗಾಂಧಿ ಅವರ ರಾಜೀನಾಮೆ ಮಾತನ್ಮು ಸಾರಾಸಗಟಾಗಿ ತಿರಸ್ಕರಿಸಿ ದ ಸಿಡಬ್ಲ್ಯೂಸಿ, ನಿಮ್ಮದೇ ನಾಯಕತ್ವ, ಮಾರ್ಗದರ್ಶನ ಮುಂದುವರೆಯಲಿ ಅಂಥ ಪಟ್ಟು ಹಿಡಿದ್ದಾರೆ. ಇದೇ ವೇಳೆ ಕೆಲ ನಾಯಕರು ರಾಹುಲ್ ಗಾಂಧಿಯವರು ಮತ್ತೆ ನಾಯಕತ್ವ ವಹಿಸಬೇಕು ಅಂಥ ಪಟ್ಟು ಹಿಡಿದಿದ್ದಾರೆ. ಹಲವು ಹಿರಿಯ ನಾಯಕರು ಅಧ್ಯಕ್ಷ ಸ್ಥಾನಕ್ಕೆ ಅಲಂಕರಿಸುವಂತೆ ರಾಹುಲ್ ಗಾಂಧಿಯವರ ಮೇಲೆ ಮತ್ತೆ ಒತ್ತಡ ಹಾಕಿದ್ದಾರೆ ಎಂದು ಎಐಸಿಸಿ ಉನ್ನತ ಮೂಲಗಳ ಮಾಹಿತಿ ನೀಡಿದೆ.
ಮುಂದಿನ ಎಐಸಿಸಿ ಚುನಾವಣೆಯ ತನಕ ಸೋನಿಯಾ ಗಾಂಧಿ ಯವರೇ ಮುಂದುವರೆಯಲು ಸಿಡಬ್ಲ್ಯೂಸಿ ನಿರ್ಧಾರ ಮಾಡಿದೆ. ಸೋನಿಯಾ ಗಾಂಧಿ ನಾಯಕತ್ವದಲ್ಲಿ ಪಕ್ಷ ಮತ್ತಷ್ಟು ಬಲಿಷ್ಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಕಾಂಗ್ರೆಸ್ ನಾಯಕತ್ವ ಬದಲಾವಣೆ ಇಲ್ಲ, ಸೋನಿಯಾ ರಾಹುಲ್ ಅತ್ಯುನ್ನತ ನಾಯಕರು ಎಂದ ಸಿದ್ದರಾಯ್ಯ!
ನಾಯಕತ್ವ ವಿಚಾರ ಹೊರತು ಪಡಿಸಿದರೆ ಕಾಂಗ್ರೆಸ್ ಸೋಲು, ಮುಂಬರವು ಚುನಾವಣೆ, ಪಕ್ಷ ಸಂಘಟನೆ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಿದೆ. 2023,2024 ರ ಚುನಾವಣೆ ಗಳು ಹಾಗು 24ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಾತ್ರ ಚರ್ಚೆ ನಡೆಯಿತು. ಪಂಚರಾಜ್ಯಗಳ ಚುನಾವಣೆಗಳ ಫಲಿತಾಂಶ ಕುರಿತು ಗಂಭೀರ ಚರ್ಚೆ ನಡೆಯಿತು.
ಕಾಂಗ್ರೆಸ್ ಪಕ್ಷದ ತಾಕತ್ತು ಹಾಗೂ ಸವಾಲುಗಳ ಬಗ್ಗೆ ಚರ್ಚೆ ನಡೆಯಿತು. ಬಿಜೆಪಿ ಕೆಟ್ಟ ಆಡಳಿತದ ಬಗ್ಗೆ ಜನರ ಮುಂದಿಡಲು ನಮ್ಮ ತಂತ್ರಗಾರಿಕೆ ಯಲ್ಲಿ ಕೊರತೆ ಆಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಬಣ್ಣದ ಮಾತುಗಳಿಂದ ಮುಗ್ದ ಜನರನ್ನು ಮರಳು ಮಾಡಿದೆ ಅನ್ನೋ ರೀತಿಯಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶವನ್ನು ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಿದೆ. ಮುಂದಿನ ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಲು ಸಂಪೂರ್ಣ ಸಜ್ಜಾಗಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ಈ ಮಹತ್ವದ ಸಭೆಯಲ್ಲಿ ಕಾಂಗ್ರೆಸ್‌ನಿಂದ ಬಂಡಾಯ ಎದ್ದಿರುವ ಜಿ23 ಗುಂಪಿನ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಜಿ-23ಯ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಇಷ್ಟೇ ಅಲ್ಲ ನಾಯಕತ್ವ ಬದಲಾವಣೆ ಅತೀ ಅಗತ್ಯ ಎಂದು ಒತ್ತಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಿದೆ ಎಂದು ಜಿ23 ನಾಯಕರು ಹೇಳಿದ್ದಾರೆ.