Asianet Suvarna News Asianet Suvarna News

Congress Meeting ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಅಂತ್ಯ, ಮನ್‌ಮೋಹನ್ ಸಿಂಗ್ ಸೇರಿ ಪ್ರಮುಖ ನಾಲ್ವರು ಗೈರು!

  • ಕಾಂಗ್ರೆಸ್ ಸೋಲಿನ ಪರಾಮರ್ಶೆ ಸಭೆ ಅಂತ್ಯ
  • ಸಭೆಗೆ ನಾಲ್ವರು ಪ್ರಮುಖ ನಾಯಕರು ಗೈರು
  • ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಚರ್ಚೆ
Manmohan Singh  and top 4 leaders Skip Congress Working Committee meeting to discuss the party debacle in elction ckm
Author
Bengaluru, First Published Mar 13, 2022, 7:06 PM IST

ನವದೆಹಲಿ(ಮಾ.13): ಪಂಚ ರಾಜ್ಯಗಳ ಸೋಲಿನ ಬಳಿಕ ಕರೆದಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಅಂತ್ಯಗೊಂಡಿದೆ. ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜನೆಗೊಂಡಿತ್ತು. ಸೋಲಿಗೆ ಕಾರಣ, ಮುಂಬರುವ ಚುನಾವಣೆ, ನಾಯಕತ್ವ ಸೇರಿದಂತೆ ಹಲವು ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ ಈ ಸಭೆಗೆ ಡಾ. ಮನ್‌ಮೋಹನ್ ಸಿಂಗ್ ಸೇರಿದಂತೆ ಪ್ರಮುಖ ನಾಲ್ವರು ನಾಯಕರು ಗೈರಾಗಿದ್ದಾರೆ.

ಅನಾರೋಗ್ಯದಿಂದ ಇತ್ತೀಚೆಗಷ್ಟ ಚೇತರಿಸಿಕೊಂಡಿರುವ ಡಾ.ಮನ್‌ಮೋಹನ್ ಸಿಂಗ್ ಸಭೆಗೆ ಗೈರಾಗಿದ್ದಾರೆ. ಆರೋಗ್ಯದ ಕಾರಣ ಸಭೆಯಿಂದ ದೂರ ಉಳಿದಿದ್ದಾರೆ. ಇನ್ನು ಕಾಂಗ್ರೆಸ್ ಮತ್ತೊರ್ವ ನಾಯಕ ಎಕೆ ಆ್ಯಂಟಿನಿ ಕೂಡ ಸಭೆಗೆ ಗೈರಾಗಿದ್ದಾರೆ. ಎಕೆ ಆ್ಯಂಟಿನಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಿಂದ ದೂರ ಉಳಿದಿದ್ದಾರೆ.

ಎಕೆ ಆ್ಯಂಟನಿಗೆ ಮಹತ್ವದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದು ಬೇಸರ ಮೂಡಿಸಿದೆ. ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಎಕೆ ಆ್ಯಂಟಿನಿ ಪುತ್ರ ಹೇಳಿದ್ದಾರೆ. 

Congress meeting ಕಾಂಗ್ರೆಸ್ ಕಾರ್ಯಕಾರಿ ಸಭೆ ಆರಂಭ, ಹೊಸ ಅಧ್ಯಕ್ಷನ ಸೂಚಿಸಿದ ಬಂಡಾಯ ನಾಯಕರು!

ಇನ್ನುಳಿದಂತೆ 57 ಹಿರಿಯ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ ನಾಯಕ ರಾಹುಲ್ ಗಾಂಧಿ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಆನಂದ್ ಶರ್ಮಾ, ಜೈರಾಮ್ ರಮೇಶ್ ಕೆ ಸುರೇಶ್ ಸೇರಿದಂತೆ ಹಲವು ಪಾಲ್ಗೊಂಡಿದ್ದಾರೆ.

ಪಂಚ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ ಬಂಡಾಯ ನಾಯಕರ ತುರ್ತು ಸಭೆ
ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಸೋತ ಬೆನ್ನಲ್ಲೇ, ಗುಲಾಂ ನಬೀ ಆಜಾದ್‌ ನಿವಾಸದಲ್ಲಿ ಪಕ್ಷದ ಹಿರಿಯ ಭಿನ್ನಮತೀಯ ನಾಯಕರು ಶುಕ್ರವಾರ ಸಭೆ ಸೇರಿದ್ದಾರೆ. ಮಾಜಿ ಕೇಂದ್ರ ಸಚಿವ ಕಪಿಲ್‌ ಸಿಬಲ್‌, ಮನೀಶ್‌ ತಿವಾರಿ ಆಜಾದ್‌ ನಿವಾಸಕ್ಕೆ ಆಗಮಿಸಿದ್ದರು. ಜೊತೆಗೆ ಆನಂದ ಶರ್ಮಾ ಕೂಡಾ ಚರ್ಚೆಯಲ್ಲಿ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 2 ವರ್ಷಗಳ ಹಿಂದೆಯೇ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಗೆ ಕಾಂಗ್ರೆಸ್‌ ಪಕ್ಷ ಬಲಪಡಿಸಲು ಪೂರ್ಣಪ್ರಮಾಣದ ನಾಯಕತ್ವ ಹಾಗೂ ವ್ಯಾಪಕ ಸಾಂಸ್ಥಿಕ ಬದಲಾವಣೆ ತರುವಂತೆ ಇವರು ಪತ್ರ ಬರೆದಿದ್ದರು. ಉತ್ತರಪ್ರದೇಶದಲ್ಲಿ ಹೈವೋಲ್ಟೇಜ್‌ ಪ್ರಚಾರ ನಡೆಸಿಯೂ ಪ್ರಿಯಾಂಕಾ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ಭಿನ್ನಮತೀಯ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

Five State Election Result: ಹುಮ್ಮಸ್ಸಿನಲ್ಲಿದ್ದ ಕರ್ನಾಟಕ ಕಾಂಗ್ರೆಸ್‌ಗೆ ಪಂಚರಾಜ್ಯ ಶಾಕ್‌..!

ಪಂಚ ರಾಜ್ಯಕ್ಕಿಂತ ಪಂಜಾಬ್ ಸೋಲಿನಿಂದ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ
ಸೋಲಿಗೆ ಏನು ಕಾರಣ?
ಕಾಂಗ್ರೆಸ್‌: ಪಂಜಾಬ್‌ನಲ್ಲಿ ದಲಿತರ ಜನಸಂಖ್ಯೆ ಶೇ.31ರಷ್ಟಿದೆ. ದೇಶದ ಯಾವುದೇ ರಾಜ್ಯದ ಜನಸಂಖ್ಯೆಗೆ ಹೋಲಿಸಿದರೂ ಅತಿ ಹೆಚ್ಚು ದಲಿತ ಅನುಪಾತ ಹೊಂದಿರುವ ರಾಜ್ಯ ಇದು. ಇದೇ ಕಾರಣಕ್ಕೆ ದಲಿತ ಸಮುದಾಯದ ಚರಣಜಿತ್‌ ಚನ್ನಿ ಅವರಿಗೆ ಕಾಂಗ್ರೆಸ್‌ ಮಣೆ ಹಾಕಿತ್ತು. ಆದರೆ ಕಾಂಗ್ರೆಸ್ಸಿನ ಆಂತರಿಕ ಕಚ್ಚಾಟಗಳು ಆ ಪಕ್ಷದ ಗೆಲುವನ್ನು ಬಲಿ ಪಡೆದವು. ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಬಗ್ಗೆ ಒಳ್ಳೆಯ ಹೆಸರು ಇರಲಿಲ್ಲ. ಆದರೆ ಅವರನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಬಿಜೆಪಿ ರೀತಿ ಜಾಣ್ಮೆಯಂತೆ ನಿರ್ವಹಿಸಲಿಲ್ಲ. ಆಡಳಿತ ವಿರೋಧಿ ಅಲೆ ಬಲವಾದ ಪೆಟ್ಟನ್ನು ಕಾಂಗ್ರೆಸ್ಸಿಗೆ ನೀಡಿತು.

ಅ‘ಖಾಲಿ’ ದಳ: ರೈತ ಹೋರಾಟ ಮುಂದಿಟ್ಟುಕೊಂಡು ಬಿಜೆಪಿ ಮೈತ್ರಿ ತೊರೆದ ಅಕಾಲಿ ದಳ ಲಾಭ ನಿರೀಕ್ಷಿಸಿತ್ತು. ಆದರೆ ಅದು ಬಲು ದುಬಾರಿಯಾಗಿ ಪರಿಣಮಿಸಿದೆ. ಪಕ್ಷ ಒಂದಂಕಿ ಸ್ಥಾನಕ್ಕೆ ಜಾರಿದೆ. 2007ರಿಂದ 2017ರವರೆಗೆ ಅಧಿಕಾರದಲ್ಲಿದ್ದ ಅಕಾಲಿ ಆಡಳಿತದ ಬಗ್ಗೆ ಉತ್ತಮ ಅಭಿಪ್ರಾಯವೇನೂ ಇರಲಿಲ್ಲ. ಆಪ್‌ ಪ್ರಬಲವಾಗಿದ್ದರಿಂದ ಅಕಾಲಿ ಶಕ್ತಿ ಕುಂದಿದೆ.

ಬಿಜೆಪಿ: ಅಕಾಲಿ ದಳದ ಬೆನ್ನ ಮೇಲೆ ಕುಳಿತು ಬಿಜೆಪಿ ಪಂಜಾಬಿನಲ್ಲಿ ಮೊದಲಿನಿಂದಲೂ ರಾಜಕಾರಣ ಮಾಡಿಕೊಂಡು ಬಂದಿತ್ತು. ಈ ಬಾರಿ ಅಕಾಲಿಗಳು ಕೈಕೊಟ್ಟಾಗ ಮುಂದೇನು ಎಂಬ ಚಿಂತೆಯಲ್ಲಿದ್ದ ಬಿಜೆಪಿಗೆ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಜತೆಗಿನ ಮೈತ್ರಿ ಹೊಸ ಉತ್ಸಾಹ ಮೂಡಿಸಿತ್ತು. ಆದರೆ ಅಮರೀಂದರ್‌ ಇಮೇಜ್‌ಗೆ ಅದಾಗಲೇ ಹೊಡೆತ ಬಿದ್ದಿತ್ತು. ತಳಮಟ್ಟದಲ್ಲಿ ಬಿಜೆಪಿ ಪ್ರಬಲವಾಗಿ ಏನೂ ಇರಲಿಲ್ಲ.

Follow Us:
Download App:
  • android
  • ios