Asianet Suvarna News Asianet Suvarna News

ಆಧಾರ್ ಕಾರ್ಡ್ ಫೋಟೋಗೆ ಪುಟ್ಟ ಮಗುವಿನ ಕ್ಯೂಟ್ ಫೋಸ್ ವಿಡಿಯೋ, ಸರ್ಕಾರಕ್ಕೆ ನೆಟ್ಟಿಗರ ಸಲಹೆ!

ಪುಟಾಣಿ ಮಗುವಿನ ಆಧಾರ್ ಕಾರ್ಡ್ ಫೋಟೋ ತೆಗೆಯಲು ಪೋಷಕರು ಸೆಂಟರ್‌ಗೆ ಕರೆದುಕೊಂಡು ಹೋಗಿದ್ದಾರೆ. ಸಿಬ್ಬಂದಿಗಳು ಫೋಟೋ ತೆಗೆಯಲು ಮುಂದಾದಾಗ ಪುಟಾಣಿ ಕ್ಯೂಟ್ ಪೋಸ್ ನೀಡಿದ್ದಾಳೆ. ಫೋಟೋಶೂಟ್‌ ಪೋಸ್ ನೀಡಿದ ರೀತಿಯಲ್ಲಿ ಆಧಾರ್ ಕಾರ್ಡ್ ಪೋಟೋಗೆ ಪೋಸ್ ನೀಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ.
 

Cuteness overload Little girl poses for aadhar card photo video goes viral ckm
Author
First Published Jul 4, 2024, 12:31 PM IST

ಆಧಾರ್ ಕಾರ್ಡ್ ಫೋಟೋ ತೆಗೆದೆ ಬಳಿಕ ಮತ್ತೆಂದು ಆ ಫೋಟೋ ನೋಡಲು ಬಯಸಲ್ಲ. ಕಾರಣ ಪ್ರತಿಯೊಬ್ಬರ ಆಧಾರ್ ಕಾರ್ಡ್ ಫೋಟೋ ಅಷ್ಟು ಚೆನ್ನಾಗಿರುತ್ತೆ. ಆದರೆ ಇದ್ಯಾವುದರ ಅರಿವಿಲ್ಲದ ಪುಟಾಣಿ ಮಗು ಆಧಾರ್ ಕಾರ್ಡ್ ಫೋಟೋಗಾಗಿ ಬಗೆ ಬಗೆ ಪೋಸ್ ನೀಡಿದ್ದಾಳೆ. ಆಕೆಯ ಕ್ಯೂಟ್ ಫೋಟೋ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಪುಟಾಣಿ ಮಗು 20ಕ್ಕೂ ಹೆಚ್ಚು ಪೋಸ್ ನೀಡಿದ್ದಾಳೆ. ಯಾವ ಫೋಟೋವನ್ನು ಆಧಾರ್ ಕಾರ್ಡ್ ಮೇಲೆ ಪ್ರಿಂಟ್ ಮಾಡಬೇಕು ಅನ್ನೋ ಗೊಂದಲ ಇದೀಗ ಸಿಬ್ಬಂದಿಗಳಿಗೆ ಕಾಡುತ್ತಿದೆ.

ವಯಸ್ಕರ ಸರ್ಕಾರಿ ದಾಖಲೆ, ಆಧಾರ್ ಕಾರ್ಡ್, ಮತದಾರನ ಗುರುತಿನ ಚೀಟಿಗೆ ಫೋಟೋ ತೆಗೆಯುವುದು ಸುಲಭ. ಆದರೆ ದಾಖಲೆ ಪತ್ರಗಳಿಗೆ ಮಕ್ಕಳ ಫೋಟೋ ತೆಗೆಯುವುದು ಸುಲಭದ ಮಾತಲ್ಲ. ಕ್ಯಾಮೆರಾ, ಸಿಬ್ಬಂದಿಗಳನ್ನು ನೋಡಿ ಮಕ್ಕಳು ಅಳುವುದು ಹೆಚ್ಚು. ಆದರೆ ಇಲ್ಲಿ ಈ ಮಗು ಬಗೆ ಬಗೆಯ ಪೋಸ್ ನೀಡಿದೆ.  ಆಕೆಯ ಪೋಸ್‌ ಇದೀಗ ಭಾರಿ ವೈರಲ್ ಆಗಿದೆ.

ವೆಡ್ಡಿಂಗ್ ಶೂಟ್‌‌ನಲ್ಲಿ ನಾಚಿ ನೀರಾದ ಜೋಡಿಗೆ ನಿರ್ದೇಶಕನಾದ ಅಂಬಿಗ, ವೈರಲ್ ವಿಡಿಯೋ!

ಆಧಾರ್ ಕಾರ್ಡ್ ಕಡ್ಡಾಯ. ಶಾಲೆ ದಾಖಲಾತಿ, ಬ್ಯಾಂಕ್, ಇತರ ಸರ್ಕಾರಿ ಸೌಲಭ್ಯಗಳ ಪಡೆಯಲು ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಹೀಗೆ ಪೋಷಕರು ಮಗಳನ್ನು ಕರೆದಕೊಂಡು ಆಧಾರ್ ಕಾರ್ಡ್ ಸೆಂಟರ್‌ಗೆ ತೆರಳಿದ್ದಾರೆ. ಮಗುವನ್ನು ಕುರ್ಚಿ ಮೇಲೆ ನಿಲ್ಲಿಸಿದ್ದಾರೆ. ಬಳಿಕ ಕ್ಯಾಮೆರಾಗೆ ಪೋಸ್ ನೀಡಲು ಹೇಳಿದ್ದಾರೆ. ಫೋಟೋ ತೆಗೆಯುತ್ತಾರೆ. ಕ್ಯಾಮೆರಾ ನೋಡಬೇಕು ಎಂದಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by BabyNaysha (@gungun_and_mom)

 

ಫೋಟೋ ಎಂದು ತಕ್ಷಣ ಮಗು ಅಲರ್ಟ್ ಆಗಿದೆ. ಒಂದರ ಮೇಲೊಂದರಂತೆ ಪೋಸ್ ನೀಡಿದ್ದಾಳೆ. ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲದಂತೆ ಪೋಸ್ ನೀಡಿದ್ದಾಳೆ. ಪುಟಾಣಿ ಮಗುವಿನ ಈ ಪೋಸ್ ಅಲ್ಲಿರುವ ಸಿಬ್ಬಂದಿಗಳಿಗೆ ಮಾತ್ರವಲ್ಲ ನೆರೆದಿದ್ದವರಿಗೂ ಅಚ್ಚುಮೆಚ್ಚಾಗಿದೆ. ಈ ಪುಟಾಣಿಯ ಪೋಸ್‌ನ್ನು ವಿಡಿಯೋ ಮಾಡಲಾಗಿದೆ. ಸಾಮಾಜಿಕ ಜಲಾತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಹಲವರು ಈ ಮಗುವಿನ ಮನೆಯಲ್ಲಿ ಸದಾ ಪ್ರೀತಿಯೇ ತುಂಬಿದೆ. ಜಗಳ ಜಂಜಾಟವಿಲ್ಲ. ಹೀಗಾಗಿ ಮಗುವಿನ ಮುಖದಲ್ಲಿ ಪ್ರೀತಿ, ನಗು ತುಂಬಿದೆ ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಈ ಪುಟಾಣಿ ಮಗು ಅತ್ಯುತ್ತಮ ಪೋಸ್ ನೀಡಿದೆ. ಆದರೆ ಆಧಾರ್ ಕಾರ್ಡ್‌ನಲ್ಲಿ ಫೋಟೋ ಹೇಗಿರುತ್ತೆ ಅನ್ನೋದು ನಾವು ಊಹಿಸಲು ಸಾಧ್ಯ. ಕನಿಷ್ಠ ಈ ಮಗುವಿಗಾದರೂ ಆಧಾರ್ ಕಾರ್ಡ್‌ಗೆ ಬಳಸು ಕ್ಯಾಮೆರಾ ಬದಲಾಯಿಸಿ, ಚೆಂದದ ಫೋಟೋ ಬರುವ ರೀತಿ ಮಾಡಿ ಎಂದು ಸಲಹೆ ನೀಡಿದ್ದಾರೆ

'ಕಾವಾಲಯ್ಯ' ಸಾಂಗ್‌ಗೆ ಮುದ್ದು ಪುಟಾಣಿ ಎಷ್ಟು ಕ್ಯೂಟಾಗಿ ಡ್ಯಾನ್ಸ್ ಮಾಡಿದ್ದಾಳೆ ನೋಡಿ
 

Latest Videos
Follow Us:
Download App:
  • android
  • ios