ಆನ್‌ಲೈನ್ ಶಾಪ್ ಮಾಡ್ತೀರಾ.. ಹುಷಾರ್‌..! ಪುಸ್ತಕದ ಬದಲಿಗೆ ಬಂತು ಡಕೋಟಾ ಫೋನು

ಆನ್‌ಲೈನ್‌ನಲ್ಲಿ ಆಕರ್ಷಕ ಪ್ರಾಡಕ್ಟ್ಸ್‌ ನೋಡಿ ಮರುಳಾಗ್ತೀರಾ..? ಆನ್‌ಲೈನ್ ಪೇಮೆಂಟ್ ಮಾಡಿ ವಸ್ತುಗಳನ್ನು ಆರ್ಡರ್ ಮಾಡ್ತೀರಾ.? ಆನ್‌ಲೈನ್ ಶಾಪಿಂಗ್ ಪ್ರಿಯರೇ ಹುಷಾರ್.. ನೀವೇನೋ ಬುಕ್ ಮಾಡಿದ್ರೆ ಇನ್ನೇನೋ ಕಳ್ಸಿ ನಿಮ್ಮ ಹಣ ಗುಳುಂ ಮಾಡ್ತಾರೆ.. ಬುಕ್ ಆರ್ಡರ್ ಮಾಡಿದ್ದ ವಿಜಯಪುರದ ಯುವಕನಿಗೆ ಸಿಕ್ಕಿದ್ದೇನು ಗೊತ್ತಾ..? ಈ ಸುದ್ದಿ ನೋಡಿ..!

Man gets books cover instead text books in online shopping at Vijayapura

ವಿಜಯಪುರ(ಜು.26): ಆನ್‌ಲೈನ್‌ ಪ್ರಾಡಕ್ಟ್‌ ನೋಡಿ ತರಾತುರಿಯಲ್ಲಿ ಪೇಮೆಂಟ್ ಮಾಡಿ ಆರ್ಡರ್ ಮಾಡೋ ಮುನ್ನ ಸ್ವಲ್ಪ ಎಚ್ಚರವಿರಲಿ.  ಆನ್‌ಲೈನ್ ಶಾಪಿಂಗ್ ಮಾಡೋಕೆ ಹೋದ ಭೂಪನೊಬ್ಬ ಮಕ್ಮಲ್ ಟೋಪಿ ಹಾಕಿಸಿಕೊಂಡಿರೋ ಘಟನೆ ವಿಜಯಪುರದಲ್ಲಿ ನಡೆದಿದೆ.

ಬಿಕಾಂ ಪುಸ್ತಕ ಆರ್ಡರ್ ಮಾಡಿದ್ರು:

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲ್ವತವಾಡ ಪಟ್ಟಣದ ಶಿವಕುಮಾರ್ ಕುಂಬಾರ್ ಹಾಗು ಆತನ ಸಹೋದರಿ ಪಾರ್ವತಿ ಸೇರಿ ಆನ್‌ಲೈನ್‌ನಲ್ಲಿ ಬಿ.ಕಾಂಗೆ ಸಂಬಂಧಿಸಿದ 2 ಸಾವಿರ ಬೆಲೆಯ ಪುಸ್ತಕಗಳನ್ನು ಆರ್ಡರ್ ಮಾಡಿದ್ದರು. ಆದರೆ 2 ಸಾವಿರ ನೀಡಿ ಪಾರ್ಸಲ್ ಪಡೆದ ನಂತರ ಶಿವಕುಮಾರ್ಗೆ ಶಾಕ್ ಆಗಿತ್ತು.

ಹೆಣ್ಣಿನ ಮಧುರ ಧ್ವನಿಗೆ ಮರುಳಾದ್ರೆ ನಿಮಗೂ ಇದೇ ಗತಿ..!

ಸಿಕ್ಕಿದ್ದು ಡಕೋಟಾ ಫೋನು:

ಪುಸ್ತಕಗಳ ಬದಲಿಗೆ ಡಕೋಟಾ ಡಮ್ಮಿ ಮೊಬೈಲ್ ಪಾರ್ಸಲ್ ಬಂದಿತ್ತು. ಜೊತೆಗೆ ಆರ್ಡರ್ ಮಾಡಿದ್ದ ಪುಸ್ತಕಗಳ ಮೊದಲ‌ ಪುಟವನ್ನ ಮಾತ್ರ ಕಳುಹಿಸಲಾಗಿತ್ತು. ಆರ್ಡರ್ ಮಾಡಿದ್ದ ಪುಸ್ತಕಗಳು ಸಿಗದೆ, ಸಿಕ್ಕ ಪೋನ್ ಕೂಡ ಉಪಯೋಗಕ್ಕೆ ಬಾರದೆ ಶಿವಕುಮಾರ್ ಪೇಚಿಗೆ ಸಿಲುಕಿದ್ದಾರೆ. ಆನ್ಲೈನ್ ಮಾರ್ಕೆಟಿಂಗ್ ಸೇಫ್ ಅಲ್ಲ ಅಂತಾ ಗೊತ್ತಿದ್ದರೂ ಜನರು ಹೀಗೆ ಮೋಸ ಹೋಗ್ತಿರೋದು ವಿಪರ್ಯಾಸ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios